Advertisment

T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!

author-image
Bheemappa
Updated On
T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್​ ನಡೆಯೋದೆ ಡೌಟ್!
Advertisment
  • ಹೈವೋಲ್ಟೇಜ್​ ಮ್ಯಾಚ್​ಗೆ ಭಯೋತ್ಪಾದಕರಿಂದ ಕೇಳಿಬಂದ ಬೆದರಿಕೆ
  • ನಾಳೆಯ ಪಂದ್ಯಕ್ಕೆ ಅಡ್ಡಿ ಪಡಿಸುವುದಾಗಿ ಹೇಳಿದ ಉಗ್ರ ಸಂಘಟನೆ
  • ಈಗಾಗಲೇ ಭದ್ರತೆಗೆ ಸಾಕಷ್ಟು ತಯಾರಿ ಮಾಡಿಕೊಂಡ ಭದ್ರತೆ ಪಡೆ

ವೆಸ್ಟ್ ಇಂಡೀಸ್​ ಜೊತೆಗೂಡಿ ಅಮೆರಿಕ ಮೊದಲ ಬಾರಿ ಟಿ20 ವಿಶ್ವಕಪ್​​​ಗೆ ಆತಿಥ್ಯ ವಹಿಸಿದೆ. ಇಂಡೋ-ಪಾಕಿಸ್ತಾನ​​ದ ಹೈ ಥ್ರಿಲ್ಲಿಂಗ್​​ ಗೇಮ್ ಸದ್ಯ ಎಲ್ಲರ​​ ಎದೆ ಬಡಿತ ಹೆಚ್ಚಿಸಿರೋದು ಸುಳ್ಳಲ್ಲ. ಇದರ ಮಧ್ಯೆ ಸೋಲು-ಗೆಲುವಿನ ಲೆಕ್ಕಚಾರವು ಜೋರಾಗಿದೆ. ಬದ್ಧವೈರಿ ಪಾಕಿಸ್ತಾನ ನಾಳೆಯ ಮ್ಯಾಚ್​ನಲ್ಲಿ ಭಾರತವನ್ನು ಕಟ್ಟಿ ಹಾಕಲು ಎಲ್ಲ ರಣತಂತ್ರಗಳನ್ನು ರೂಪಿಸುತ್ತಿದೆ. ಸದ್ಯ ಇಂತಹ ಹೈವೋಲ್ಟೇಜ್​ ಮ್ಯಾಚ್​ಗೆ ಭಯೋತ್ಪಾದಕರಿಂದ ಬೆದರಿಕೆ ಕೇಳಿ ಬಂದಿದ್ದು ಪಂದ್ಯಕ್ಕೆ ಭಾರೀ ಬಿಗಿ ಭದ್ರತೆ ಮಾಡಲಾಗ್ತಿದೆ.

Advertisment

ಇದನ್ನೂ ಓದಿ:T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?

ಪಾಕಿಸ್ತಾನ ಮತ್ತು ಭಾರತದ ಮಧ್ಯೆದ ಹೈವೋಲ್ಟೇಜ್​ ಪಂದ್ಯಕ್ಕೆ ಉಗ್ರರ ಕರಿ ನೆರಳು ಬಿದ್ದಿದೆ. ಪಂದ್ಯ ನಡೆಯುವ ವೇಳೆ ದಾಳಿ ಮಾಡುವುದಾಗಿ ಭಯೋತ್ಪಾದಕರು ಬೆದರಿಕೆ ಹಾಕಿದ್ದಾರೆ. ಇದರಿಂದ ಫುಲ್ ಅಲರ್ಟ್ ಆಗಿರುವ ಅಮೆರಿಕ ಸರ್ಕಾರ ಎಲ್ಲ ಆಟಗಾರರಿಗೂ ಬಿಗಿ ಭದ್ರತೆಯನ್ನು ಒದಗಿಸಿದೆ. ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಓಡೋಡಿ ಬಂದಿದ್ದ ಅಭಿಮಾನಿಗೆ ಅಲ್ಲಿನ ಪೊಲೀಸರು ಯಾವ ರೀತಿ ಹಿಡಿದುಕೊಂಡು ಹೋದರು ಎಂದು ಇಲ್ಲಿ ನೆನಪಿಸಿಕೊಳ್ಳಬಹುದು. ಉಗ್ರ ಕರಿ ನೆರಳು ಪಂದ್ಯದ ಮೇಲೆ ಬಿದ್ದಿದ್ದರಿಂದ ಪ್ರತಿಯೊಬ್ಬರನ್ನು, ಪ್ರತಿ ಹೆಜ್ಜೆಯನ್ನು ಅಲ್ಲಿನ ಪೊಲೀಸರು, ಭದ್ರತೆ ಪಡೆಗಳು ಅತ್ಯಂತ ಸೂಕ್ಷ್ಮತೆಯಿಂದ ಗಮನಿಸುತ್ತಿರುತ್ತಾವೆ.

ಇದನ್ನೂ ಓದಿ: ಪಾಕ್ ವಿರುದ್ಧ ಟೀಮ್ ಇಂಡಿಯಾ ಎಷ್ಟು T20 ವಿಶ್ವಕಪ್ ಪಂದ್ಯಗಳನ್ನ ಗೆದ್ದಿದೆ.. ಡ್ರಾ ಆಗಿದ್ದು ಯಾವ ಪಂದ್ಯ?

Advertisment

publive-image

ಅಂದ್ಹಾಗೆ ನಾಳೆ ನಡೆಯುವ ಪಂದ್ಯಕ್ಕೆ 4 ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಕಳೆದ ವಾರ ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆ ಲೋನ್ ವುಲ್ಫ್ ದಾಳಿ ನಡೆಸುವುದಾಗಿ ಹೇಳಿತ್ತು. ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಸದ್ಯ 4 ಹಂತದಲ್ಲಿ ಭದ್ರತೆಯನ್ನು ಬಂದೋಬಸ್ತ್ ಮಾಡಲಾಗಿದೆ. ಅಮೆರಿಕದ ಪೊಲೀಸರು ಹಾಗೂ ಮಿಲಿಟರಿ ಪಡೆಗಳು ಹದ್ದಿನ ಕಣ್ಣು ನೆಟ್ಟಿದ್ದಾರೆ ಎಂದು ಸದ್ಯ ತಿಳಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment