Advertisment

ISKCON ನಿಷೇಧಕ್ಕೆ ನಿರ್ಧಾರ..! ಬಾಂಗ್ಲಾದೇಶದಲ್ಲಿ ಮುಂದುವರಿದ ದಬ್ಬಾಳಿಕೆ.. ಖಂಡಿಸಿದ ಭಾರತ!

author-image
Ganesh
Updated On
ISKCON ನಿಷೇಧಕ್ಕೆ ನಿರ್ಧಾರ..! ಬಾಂಗ್ಲಾದೇಶದಲ್ಲಿ ಮುಂದುವರಿದ ದಬ್ಬಾಳಿಕೆ.. ಖಂಡಿಸಿದ ಭಾರತ!
Advertisment
  • ಬಾಂಗ್ಲಾದೇಶದಲ್ಲಿ ಇಲ್ಲ ಅಲ್ಪಸಂಖ್ಯಾತರಿಗೆ ರಕ್ಷಣೆ
  • ISKCON ಬ್ಯಾನ್​ಗೆ ನಿರ್ಧಾರ, ಹೈಕೋರ್ಟ್​ನಲ್ಲಿ ಕೇಸ್
  • ಸನ್ಯಾಸಿ ಚಿನ್ಮೋಯ್​ ಕೃಷ್ಣದಾಸ್ ಬ್ರಹ್ಮಚಾರಿ ಬಂಧನ

ಪ್ರಸ್ತುತ ಬಾಂಗ್ಲಾದೇಶ ದೊಡ್ಡ ಪ್ರಕ್ಷುಬ್ಧತೆ ಎದುರಿಸುತ್ತಿದೆ. ಹಿಂದೂಗಳ ಮೇಲಿನ ದಾಳಿ, ಧಾರ್ಮಿಕ ಮುಖಂಡ ಶ್ರೀ ಚಿನ್ಮೋಯ್ ಕೃಷ್ಣ ದಾಸ್ (Shri Chinmoy Krishna Das) ಬಂಧನ ಬೆನ್ನಲ್ಲೇ ISKCON ಬ್ಯಾನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.

Advertisment

ISKCON ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಂಘಟನೆ ಆಗಿದೆ. ಇಸ್ಕಾನ್ ಸಂಘಟನೆಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ಬಾಂಗ್ಲಾ ಸರ್ಕಾರ ಕರೆದಿದೆ. ಅದನ್ನು ಬ್ಯಾನ್ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ಘೋಷಣೆ ಮಾಡಿದೆ.

ಬಾಂಗ್ಲಾ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಲ್ಲಿನ ಹಿಂದೂಗಳು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಇಸ್ಕಾನ್ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನೆ ಮಾಡಲಾಗಿದೆ. ಅಂತೆಯೇ ಅಲ್ಲಿನ ಹೈಕೋರ್ಟ್ ಬಾಂಗ್ಲಾ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಬಾಂಗ್ಲಾದೇಶ ಸರ್ಕಾರದ ಅಟಾರ್ನಿ ಜನಲ್, ಇಸ್ಕಾನ್ ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ವಾದಿಸಿದ್ದಾರೆ. ಇಸ್ಕಾನ್ ಕುರಿತ ನಿಲುವು ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ರೂಪುರೇಷಗಳ ಬಗ್ಗೆ ವಿವರಿಸುವಂತೆ ಸರ್ಕಾರಕ್ಕೆ ಕೋರ್ಟ್ ಕೇಳಿದೆ. ಹಿಂದೂಗಳ ಮೇಲೆ ದಾಳಿಯಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ:Umpire Jobs: ಕ್ರಿಕೆಟ್ ಅಂಪೈರ್ ಆಗೋದು ಹೇಗೆ..? ಲಕ್ಷ ಲಕ್ಷ ಸ್ಯಾಲರಿ..! ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?

Advertisment

ಬಾಂಗ್ಲಾದೇಶದ ರಂಗಾಪುರ, ಚಿತ್ತಗಾಂಗ್ ಸೇರಿದಂತೆ ವಿವಿಧೆಡೆ ಹಿಂದೂಗಳ ರಕ್ಷಣೆಗಾಗಿ ಪ್ರತಿಭಟನೆ, ಹೋರಾಟ ನಡೆಯುತ್ತಿವೆ. ಇಸ್ಕಾನ್ ವಿರುದ್ಧದ ಕ್ರಮಕ್ಕೆ ಭಾರತ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ನವೆಂಬರ್ 25 ರಂದು ಬಾಂಗ್ಲಾದೇಶ ದೇಶದ್ರೋಹದ ಆರೋಪದ ಮೇಲೆ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದೆ. ಕೋರ್ಟ್​ನಲ್ಲಿ ಜಾಮೀನು ನೀಡದೇ ನೇರವಾಗಿ ಜೈಲಿಗೆ ಕಳುಹಿಸಿದೆ. ಇದನ್ನು ಖಂಡಿಸಿ ಚಿನ್ಮೋಯ್ ಬ್ರಹ್ಮಚಾರಿ ಅವರ ಭಕ್ತರು, ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ್ದೇ ತಪ್ಪಾಯ್ತಾ? ಬಾಂಗ್ಲಾದೇಶದಲ್ಲಿ ಸ್ವಾಮಿ ಚಿನ್ಮೋಯ್​ ಬಂಧನ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment