/newsfirstlive-kannada/media/post_attachments/wp-content/uploads/2025/06/IRAN.jpg)
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ನೆಕ್ಸ್ಟ್ ಲೇವೆಲ್ ತಲುಪಿದೆ. ಇಂದು ಬೆಳ್ಳಂಬೆಳಗ್ಗೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಅಟ್ಯಾಕ್ ಮಾಡಿದೆ. ಐಡಿಎಫ್ ಇರಾನ್‌ನ 2 ಪರಮಾಣು ನೆಲೆಗಳ ಕೇಂದ್ರವನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ. ಪರಮಾಣು ಕೇಂದ್ರಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು IAEA (International Atomic Energy Agency) ಸ್ಪಷ್ಟಪಡಿಸಿದೆ.
ಜೊತೆಗೆ ಟೆಹ್ರಾನ್ ಸುತ್ತಮುತ್ತಲಿನ 6 ಮಿಲಿಟರಿ ನೆಲೆಗಳ ಮೇಲೆಯೂ ದಾಳಿ ಮಾಡಲಾಗಿದೆ. ಇದರಿಂದ ಇರಾನ್ಗೆ ಭಾರೀ ನಷ್ಟವಾಗಿದೆ. ದಾಳಿಯಲ್ಲಿ ವಿಜ್ಞಾನಿಗಳು ಸೇರಿದಂತೆ ಇರಾನ್‌ನ ಅನೇಕ ಉನ್ನತ ಕಮಾಂಡರ್‌ಗಳು ಜೀವ ಕಳೆದುಕೊಂಡಿದ್ದಾರೆ. ಇರಾನ್ ವಾಯು ಮತ್ತು ಬಾಹ್ಯಾಕಾಶ ಪಡೆ ಕಮಾಂಡರ್ ಅಮೀರ್ ಅಲಿ ಹಾಜಿಜಾದೆ, ಐಆರ್‌ಜಿಸಿ ಮುಖ್ಯಸ್ಥ ಹುಸೇನ್ ಸಲಾಮಿ, ಇರಾನ್ ರಕ್ಷಣಾ ಅಧಿಕಾರಿ ಖತಮ್ ಅಲ್-ಅನ್ಬಿಯಾದ ಸರ್ದಾರ್ ರಶೀದ್ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?
ಇಸ್ರೇಲ್ ತನ್ನ ದಾಳಿಯನ್ನ ಇದುವರೆಗಿನ ಮಿಲಿಟರಿ ಕಾರ್ಯತಂತ್ರದ ಅತಿದೊಡ್ಡ ಮತ್ತು ಅತ್ಯಂತ ಧೈರ್ಯಶಾಲಿ ಹೆಜ್ಜೆ ಎಂದು ಹೇಳಿಕೊಂಡಿದೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು.. ನಾವು ಆಪರೇಷನ್ ರೈಸಿಂಗ್ ಲಯನ್ ಪ್ರಾರಂಭಿಸಿದ್ದೇವೆ. ಇದು ಇಸ್ರೇಲ್‌ನ ಅಸ್ತಿತ್ವಕ್ಕೆ ಇರಾನಿನ ಬೆದರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇರಾನ್‌ನ ಪರಮಾಣು ಮತ್ತು ಮಿಲಿಟರಿ ಮೂಲಸೌಕರ್ಯ ನಾಶ ಮಾಡುವ ಗುರಿ ಹೊಂದಲಾಗಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದಿದ್ದಾರೆ.
ಕ್ಷಿಪಣಿ ಹಾರಿಸಿದ ಇರಾನ್..
ಇಸ್ರೇಲಿ ಮಿಲಿಟರಿ ಮೂಲಗಳ ಪ್ರಕಾರ.. ಐಡಿಎಫ್ 2 ಪರಮಾಣು ಮತ್ತು 6 ಮಿಲಿಟರಿ ನೆಲೆಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಅಲ್ಲಿ ಇರಾನ್ 15 ಪರಮಾಣು ಬಾಂಬ್‌ಗಳನ್ನು ತಯಾರಿಸಲು ಸಾಕಷ್ಟು ಯುರೇನಿಯಂ ದಾಸ್ತಾನು ಹೊಂದಿತ್ತು. ದಾಳಿಯ ಬೆನ್ನಲ್ಲೇ ಇಸ್ರೇಲ್ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರ ಮಧ್ಯೆ ಇರಾನ್ ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ದಾಳಿ ಮಾಡಿದೆ. ಹಾಗಾಗಿ ಇಸ್ರೇಲ್ ತನ್ನ ಎಲ್ಲಾ ಪ್ರಮುಖ ನಾಯಕರು ಮತ್ತು ಅಧಿಕಾರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದೆ.
ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ತವಕದಲ್ಲಿದ್ದ ನರ್ಸ್ ರಂಜಿತಾ.. ವಿಮಾನ ಪತನದಲ್ಲಿ ದುರಂತ ಅಂತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ