ಇಸ್ರೇಲ್ ಪ್ರಧಾನಿ ಮನೆ ಮೇಲೆ ಡ್ರೋನ್ ಅಟ್ಯಾಕ್.. ನಮ್ಮನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದ ನೆತನ್ಯಾಹು

author-image
AS Harshith
Updated On
ಮತ್ತಷ್ಟು ಬಿಗಡಾಯಿಸಿದ ಇಸ್ರೇಲ್ ಇರಾನ್​ ನಡುವಿನ ಸಂಬಂಧ; ನೇತನ್ಯಾಹು ನಿವಾಸದ ಬಳಿ ಎರಡು ಫ್ಯಾಶ್ ಬಾಂ*ಬ್ ಸ್ಫೋಟ!
Advertisment
  • ಲೆಬನಾನ್‌ನಿಂದ ಹಾರಿ ಬಂದ ಮೂರು ಡ್ರೋನ್‌ಗಳು
  • ಹಿಜ್ಬುಲ್ಲಾ ಪಡೆಗಳಿಂದ ದಾಳಿ ನಡೆದಿರೋ ಅನುಮಾನ
  • ಯಾವುದೇ ಶಕ್ತಿಗೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ​

ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧ ರಕ್ತದ ಸಾಗರಕ್ಕೆ ಕಾರಣವಾಗಿದೆ. ಹಮಾಸ್​ನ ಲೀಡರ್​ ಸಿನ್ವರ್ ಹತ್ಯೆ ಬೆನ್ನಲ್ಲೇ ಯುದ್ಧ ತೀವ್ರ ಸ್ವರೂಪಕ್ಕೆ ತಿರುಗಿದೆ. ಇದೀಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆಯ ಮೇಲೆ ಡ್ರೋನ್ ಅಟ್ಯಾಕ್ ನಡೆದಿದೆ. ಇದ್ರಿಂದ ಸಿಡಿದೆದ್ದ ನೆತನ್ಯಾಹು, ನಮ್ಮನ್ನ ತಡೆಯೋಕೆ ಯಾರಿಂದ್ಲೂ ಸಾಧ್ಯವಿಲ್ಲ ಅಂತಾ ಸಮರ ಸಂದೇಶ ರವಾನಿಸಿದ್ದಾರೆ.

ಸೇಡಿಗೆ ಸೇಡು.. ರಕ್ತಕ್ಕೆ ರಕ್ತ. ಇದು ಇಸ್ರೇಲ್​ V/s ಹಮಾಸ್ ಹಾಗೂ ಹೆಜ್ಬುಲ್ಲಾ ನಡುವಿನ ಯುದ್ಧ ಸಂಘರ್ಷದ ಸ್ಥಿತಿ. ಮೊನ್ನೆ ಮೊನ್ನೆಯಷ್ಟೇ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್​ನನ್ನ ಹತ್ಯೆಗೈದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ಇಸ್ರೇಲ್ ಪ್ರಧಾನಿಯನ್ನೇ ಟಾರ್ಗೆಟ್ ಮಾಡಲಾಗಿದೆ. ಬೆಂಜಮಿನ್ ನೆತನ್ಯಾಹು ನಿವಾಸವನ್ನೇ ಗುರಿಯಾಗಿಸಿ ಮೂರು ಡ್ರೋನ್​​ಗಳ ಮೂಲಕ ಅಟ್ಯಾಕ್ ನಡೆದಿದೆ.

publive-image

ಇಸ್ರೇಲ್ ಪ್ರಧಾನಿಯೇ ಟಾರ್ಗೆಟ್!

ಹೈಫಾ ನಗರದಲ್ಲಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಾಸಗಿ ನಿವಾಸದ ಸಮೀಪ ಡ್ರೋನ್ ಸ್ಫೋಟಗೊಂಡಿದೆ. ಈ ದಾಳಿ ನಡೆದಾಗ ನೆತನ್ಯಾಹು ಹಾಗೂ ಅವರ ಪತ್ನಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಸ್ರೇಲ್‌ನ ಉತ್ತರ ಭಾಗದ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೂ ಸೈರನ್‌ ಶಬ್ದ ಕೇಳಿಸುತ್ತಲೇ ಇತ್ತು. ಈ ನಡುವೆ ಲೆಬನಾನ್‌ನಿಂದ ಒಟ್ಟು ಮೂರು ಡ್ರೋನ್‌ಗಳು ಹಾರಿ ಬಂದಿದ್ದವು. ಅವುಗಳಲ್ಲಿ ಎರಡು ಡ್ರೋನ್‌ಗಳನ್ನ ಇಸ್ರೇಲ್ ಸೇನೆ ಹೊಡೆದುರುಳಿಸಿದೆ. ಉಳಿದ ಒಂದು ಡ್ರೋನ್‌, ನೆತನ್ಯಾಹು ನಿವಾಸದ ಸಮೀಪ ಕಟ್ಟಡವೊಂದಕ್ಕೆ ಅಪ್ಪಳಿಸಿದೆ. ಲೆಬನಾನ್‌ನ ಹಿಜ್ಬುಲ್ಲಾ ಪಡೆಗಳು ಈ ದಾಳಿ ಮಾಡಿದೆ ಎನ್ನಲಾಗ್ತಿದ್ದು, ಅಧಿಕೃತವಾಗಿ ಹೊಣೆ ಹೊತ್ತುಕೊಂಡಿಲ್ಲ.

ಇದನ್ನೂ ಓದಿ: ಕೇಂದ್ರದಿಂದ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​​; ದೀಪಾವಳಿಗೆ ಸಿಗಲಿದೆ ಭರ್ಜರಿ ಬೋನಸ್​​​

ಯಾವಾಗ ತಮ್ಮ ಮನೆಯ ಬಳಿಯೇ ಡ್ರೋನ್ ಬಂತೋ ಇಸ್ರೇಲ್ ಪ್ರಧಾನಿಯನ್ನ ಕೆರಳಿ ಕೆಂಡವಾಗಿಸಿದೆ. ಯಾರಿಗೂ ನಮ್ಮನ್ನ ತಡೆಯೋಕ್ಕಾಗಲ್ಲ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ. ಯುದ್ಧ ಮುಂದುವರಿಯೋ ಎಚ್ಚರಿಕೆಯೂ ಹೊರಬಿದ್ದಿದೆ.

publive-image

‘ನನ್ನನ್ನು ತಡೆಯಲು ಸಾಧ್ಯವಿಲ್ಲ’

ಯಾವುದೇ ಶಕ್ತಿಗೂ ನನ್ನನ್ನು ತಡೆಯಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ನಮ್ಮ ದೇಶ ಗೆಲುವು ಸಾಧಿಸಲಿದೆ ನಮ್ಮ ಜನರ ತಲೆಗಳನ್ನು ತೆಗೆದು, ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ನಮ್ಮ ಶಿಶುಗಳನ್ನು ಜೀವಂತ ಸಮಾಧಿ ಮಾಡಿದ ಕೃತ್ಯಗಳ ಸೂತ್ರಧಾರ ಹಮಾಸ್‌ ನಾಯಕ ಸಿನ್ವರ್​ನನ್ನ ನಾವು ಹತ್ಯೆ ಮಾಡಿದ್ದೇವೆ. ಇರಾನ್‌ ಬೆಂಬಲಿತ ಬಂಡುಕೋರರ ವಿರುದ್ಧದ ಯುದ್ಧ ಮುಂದುವರಿಯಲಿದೆ.
-ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ

ಇದನ್ನೂ ಓದಿ: ಹಣಕಾಸಿನ ತೊಂದರೆ, ಆಸ್ತಿ ವಿಚಾರದಲ್ಲಿ ಗಲಾಟೆ, ರೇಷ್ಮೆ ಬೆಳೆಗಾರರಿಗೆ ಅಧಿಕ ಲಾಭ; ಇಲ್ಲಿದೆ ಇಂದಿನ ಭವಿಷ್ಯ

ಹೀಗೆ ನೇರಾನೇರ ಎಚ್ಚರಿಕೆ ನೀಡಿರೋ ನೆತನ್ಯಾಹು ಯುದ್ಧ ಮುಂದುವರಿಯುತ್ತೆ ಅನ್ನೋದನ್ನ ಸ್ಪಷ್ಟವಾಗಿ ಹೇಳಿದ್ದಾರೆ. ಹಮಾಸ್‌ ಸಂಘಟನೆ ಮುಖ್ಯಸ್ಥ ಸಿನ್ವರ್‌ ಹತ್ಯೆ ಬಳಿಕ ಯುದ್ಧ ನಿಲ್ಲಬಹುದು ಎನ್ನಲಾಗ್ತಿತ್ತು. ಆದ್ರೆ, ಇಸ್ರೇಲ್ ಸುಮ್ಮನಾಗಿಲ್ಲ ಬದಲಾಗಿ ಗಾಜಾಪಟ್ಟಿ ಹಾಗೂ ಲೆಬನಾನ್‌ ಮೇಲಿನ ದಾಳಿ ತೀವ್ರಗೊಳಿಸಿದೆ. ಸಿನ್ವರ್ ಸಾವಿನ ಬಳಿಕ ನಡೆದ ದಾಳಿಯಲ್ಲಿ ಗಾಜಾದ ಸುಮಾರು 50 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಈ ಯುದ್ಧ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣಿಸ್ತಿಲ್ಲ. ಯಾಕಂದ್ರೆ ಇಸ್ರೇಲ್ ಟಾರ್ಗೆಟ್ ಹಮಾಸ್, ಹೆಜ್ಬುಲ್ಲಾ ಮಾತ್ರವಲ್ಲ. ಬದಲಾಗಿ ಇಸ್ರೇಲ್​ನ ಟಾರ್ಗೆಟ್ ಇರಾನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment