/newsfirstlive-kannada/media/post_attachments/wp-content/uploads/2024/12/ISREAL-BOMB-ATTACK.jpg)
ಸಿರಿಯಾದಲ್ಲಿ ಬಶರ್ ಅಲ್ ಅಸಾದ್ ಸರ್ವಾಧಿಕಾರಿ ಸರ್ಕಾರ ಉರುಳಿದ ಬಳಿಕ ಬಂಡುಕೋರರ ಯುಗ ಆರಂಭವಾಗಿದೆ. ಬಶರ್ ದೇಶ ತೊರೆದ ಬೆನ್ನಲ್ಲೇ ರಾಸಾಯನಿಕ ಶಸ್ತ್ರಾಸ್ತ್ರಗಳು, ಮಿಲಿಟರಿ ನೆಲೆಗಳು ಬಂಡುಕೋರರ ಕೈಗೆ ಸಿಗುವುದನ್ನು ತಡೆಯುವ ಉದ್ದೇಶ ಹೊಂದಿರುವ ಇಸ್ರೇಲ್ ನಿರಂತರ ದಾಳಿ ಮಾಡ್ತಿದೆ. ಸಿರಿಯಾ ಮೇಲೆ ವಿನಾಶಕಾರಿ ಬಾಂಬ್ ಎಸೆದು ಬಂಡುಕೋರರು ಬೆಚ್ಚಿಬೀಳುವಂತೆ ಮಾಡಿದೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ.. ಐಸಿಸ್ ಉಗ್ರರನ್ನು ಹುಟ್ಟುಹಾಕಿದ ರಾಷ್ಟ್ರ ಸಿರಿಯಾ.. ಜಾಗತಿಕ ಉಗ್ರವಾದಿ ಸಂಘಟನೆ ಐಸಿಸ್.. ಭಯೋತ್ಪದಕ ದಾಳಿಗಳ ಮೂಲಕ ಇಡೀ ವಿಶ್ವವನ್ನ ಬೆಚ್ಚಿಬೀಳಿಸಿದ ಸಂಘಟನೆ ಮತ್ತೆ ಚಿಗುರುವ ಕನಸು ಕಾಣ್ತಿದೆ.. ಸದ್ಯ ಸಿರಿಯಾದಲ್ಲಿ ಅಸಾದ್ ಸರ್ಕಾರ ಪತನದ ಬಳಿಕ ಬಂಡುಕೋರರ ಮೂಲಕ ನೆಲೆ ಕಂಡುಕೊಳ್ಳುವ ಯತ್ನದಲ್ಲಿದೆ.. ಈ ಹೊತ್ತಲ್ಲೇ ಇಸ್ರೇಲ್ ಭಯಾನಕ ಅಸ್ತ್ರವನ್ನ ಪ್ರಯೋಗಿಸಿ ಎದೆ ನಡುಗಿಸಿದೆ.
ಸಿರಿಯಾ ಮೇಲೆ ಬೃಹತ್ ಬಾಂಬ್ ಹಾಕಿದ ಇಸ್ರೇಲ್!
ಸಿರಿಯಾ ಅಧ್ಯಕ್ಷ ಅಸಾದ್ ಹಾಗೂ ಬಂಡುಕೋರರ ನಡುವೆ ಆಂತರಿಕ ಸಂಘರ್ಷದ ನಡುವೆ 3ನೇಯವನಾಗಿ ಇಸ್ರೇಲ್ ಕಾಲಿಟ್ಟಿದೆ. ಸಿರಿಯಾದಲ್ಲಿ ಹೆಜ್ಬುಲ್ಲಾ ಉಗ್ರರನ್ನು ಪೋಷಿಸುತ್ತಿದ್ದ ಇರಾನ್ ಪ್ರಭಾವ ಕೊನೆಗೊಂಡಿದ್ದು, ಇಸ್ರೇಲ್ ಶಕ್ತಿ ಹೆಚ್ಚಾದಂತಾಗಿದೆ. ಸಿರಿಯಾದಲ್ಲಿ ಬಂಡುಕೋರರ ದರ್ಬಾರ್ ಶುರುವಾಗಿದ್ದು ನೆರೆಹೊರೆಯ ರಾಷ್ಟ್ರಗಳಿಗೆ ಬೆದರಿಕೆಯೊಡ್ಡಿದೆ. ಹೀಗಾಗಿ ಸಿರಿಯಾದಲ್ಲಿರುವ ಬಂಡುಕೋರರ ಶಕ್ತಿ ಕುಂದಿಸಲು ಇಸ್ರೇಲ್ ಮುಂದಾಗಿದೆ. ಸದ್ಯ ಅಲ್ಕೈದಾ ಹಾಗೂ ಐಸಿಸ್ ಜೊತೆ ನಿಕಟ ಸಂಪರ್ಕ ಇರುವ ಸಿರಿಯಾ ಉಗ್ರ ಸಂಘಟನೆಗಳ ಬೃಹತ್ ದಾಳಿ ಮೂಲಕ ನಡುಕ ಹುಟ್ಟಿಸುವ ಕೆಲಸಕ್ಕೆ ಕೈ ಹಾಕಿದೆ.
ಇದನ್ನೂ ಓದಿ:₹287 ಕೋಟಿ ಗೆದ್ದ ರೈತನ ಬಾಳಲ್ಲಿ ವಿಧಿಯಾಟ.. ಒಂದೇ ವಾರದಲ್ಲಿ ದುರಂತ ಅಂತ್ಯ; ಅಸಲಿಗೆ ಆಗಿದ್ದೇನು?
ಸಿರಿಯಾದ ಕರಾವಳಿ ಪ್ರದೇಶ ಟಾರ್ಟಸ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಸುಮಾರು 500 ಮೀಟರ್ವರೆಗೆ ಬಾಂಬ್ನ ತೀವ್ರತೆ ಕಂಡುಬಂದಿದೆ. ಕಿತ್ತಲೆ ಬಣ್ಣದ ಬೆಂಕಿ ಸಹಿತ ಹೊಗೆ ಆಗಸಕ್ಕೆ ಚಿಮ್ಮಿದೆ. ಬೃಹತ್ ಸ್ಫೋಟದಿಂದ ಸುಮಾರು 850 ಕಿ.ಮೀವರೆಗೆ ಕಂಪನದ ಅನುಭವ ಆಗಿದೆ. ರಿಕ್ಟರ್ಮಾಪಕದಲ್ಲಿ 3.0ಯಷ್ಟು ಕಿರು ಭೂಕಂಪದ ತೀವ್ರತೆ ದಾಖಲಾಗಿದೆ. ಭೂಮಿಯೊಳಗಿನ ಶಿಲಾಪದರ ಸೇರುವ ಸ್ಥಳದಲ್ಲಿ ಬಾಂಬ್ ಸ್ಫೋಟಿಸಿದೆ.
ಇನ್ನು ಸಿರಿಯಾ ಗಡಿ ಭಾಗದಲ್ಲಿರುವ ಗೋಲನ್ ಹೈಟ್ ಪ್ರದೇಶದ ಮೇಲೆ ಹಿಡಿತ ಸಾಧಿಸುವುದು, ತನ್ನ ಜನಸಂಖ್ಯೆ ಹೆಚ್ಚಿಸುವುದು ಇಸ್ರೇಲ್ನ ಗುರಿಯಾಗಿದೆ. ಗೋಲನ್ಗಾಗಿ ಇಸ್ರೇಲ್ ಯಾವ ಹಂತಕ್ಕೆ ಬೇಕಾದ್ರು ಹೋಗಲಿದೆ ಅಂತ ಇಸ್ರೇಲ್ ಪ್ರಧಾನಿ ನೇತನ್ಯಾಹು ಎಚ್ಚರಿಸಿದ್ದಾರೆ. ಇನ್ನು ಇಸ್ರೇಲ್ ದಾಳಿಯನ್ನ ಸೌದಿ ಅರೇಬಿಯಾ, ಯುಎಇ, ಜೋರ್ಡನ್ ಸೇರಿ ಮಧ್ಯಪ್ರಾಚ್ಯದ ರಾಷ್ಟ್ರಗಳು ಖಂಡಿಸಿವೆ. ಒಟ್ಟಾರೆ, ಮಧ್ಯಪ್ರಾಚ್ಯದಲ್ಲಿ ಬರೆಯುತ್ತಿರುವ ರಕ್ತಚರಿತ್ರೆ ಮಹಾಯುದ್ಧದ ಭೀತಿ ಆವರಿಸುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ