100 ಯುದ್ಧ ವಿಮಾನ.. ಸೇನಾನೆಲೆಗಳು ಧ್ವಂಸ; ಇರಾನ್ ಮೇಲೆ ಇಸ್ರೇಲ್ ಅಟ್ಯಾಕ್ ಹೇಗಿತ್ತು ಗೊತ್ತಾ?

author-image
admin
Updated On
100 ಯುದ್ಧ ವಿಮಾನ.. ಸೇನಾನೆಲೆಗಳು ಧ್ವಂಸ; ಇರಾನ್ ಮೇಲೆ ಇಸ್ರೇಲ್ ಅಟ್ಯಾಕ್ ಹೇಗಿತ್ತು ಗೊತ್ತಾ?
Advertisment
  • 100 ಯುದ್ಧ ವಿಮಾನ.. 20 ಟಾರ್ಗೆಟ್.. ಸೇನಾನೆಲೆಗಳು ಧ್ವಂಸ
  • ಇರಾನ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್​ನಿಂದ ಕೌಂಟರ್ ಅಟ್ಯಾಕ್
  • ಇರಾನ್ ಮತ್ತು ಇಸ್ರೇಲ್ ಸಂಘರ್ಷ ತೀವ್ರ! ಪ್ರತೀಕಾರದ ಯುದ್ಧ

ಇಸ್ರೇಲ್ ಮೇಲೆ ಯುದ್ಧ ಸಾರಿದ್ದ ಇರಾನ್ ಅಕ್ಟೋಬರ್ ತಿಂಗಳ ಆರಂಭದಲ್ಲಿ ಸುಮಾರು 200 ಕ್ಷಿಪಣಿ ಹಾರಿಸಿತ್ತು. ಸೇಡಿಗೆ ಸೇಡು ಎಂಬಂತೆ ಇಸ್ರೇಲ್ ಸೇನೆ ಕೂಡ ಪ್ರತೀಕಾರದ ದಾಳಿ ನಡೆಸಿದೆ. ಇಸ್ರೇಲ್ ಕ್ಷಿಪಣಿ ಘಟಕವನ್ನೇ ಧ್ವಂಸ ಮಾಡಿದೆ. ಇರಾನ್ ದಾಳಿಗೆ ಪ್ರತೀಕಾರವಾಗಿ ತಾನೂ ಕೂಡ ದಾಳಿ ಮಾಡಿರೋದಾಗಿ ಲೆಬನಾನ್​ ಹೆಜ್ಬುಲ್ಲಾ ಉಗ್ರರು ಕೂಡ ಹೇಳಿಕೊಂಡಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ಪ್ರತೀಕಾರದ ದಾಳಿ
ಕ್ಷಿಪಣಿ ತಯಾರಿಕಾ ಘಟಕ ಪುಡಿಗಟ್ಟಿದ ಇಸ್ರೇಲ್
ಇರಾನ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್​ನಿಂದ ಕೌಂಟರ್ ಅಟ್ಯಾಕ್ ಮಾಡಿದೆ. ಇರಾನ್ ಸೇನಾನೆಲೆಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್​ನ ಟೆಹ್ರಾನ್ ಸೇರಿ 20 ಪ್ರದೇಶಗಳಲ್ಲಿ ಮಿಲಿಟರಿ ಜಾಗಗಳನ್ನೇ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದೆ. ಇಸ್ರೇಲ್​ನ 100ಕ್ಕೂ ಹೆಚ್ಚು ಯುದ್ಧ ವಿಮಾನಗಳಿಂದ ದಾಳಿ ನಡೆಸಿದ್ದು ಇರಾನ್​​ನ ಕ್ಷಿಪಣಿ ಉತ್ಪಾದನಾ ಘಟಕವನ್ನ ಪುಡಿಗಟ್ಟಿದೆ, ಈ ಮೂಲಕ ಇರಾನ್ ದಾಳಿಯ ಮೂಲ ಕ್ಷಿಪಣಿ ಉತ್ಪಾದನಾ ಘಟಕವನ್ನೇ ಧ್ವಂಸ ಮಾಡಿದೆ. ಇದೇ ಘಟಕದಲ್ಲಿ ತಯಾರಾಗಿದ್ದ ಮಿಸೈಲ್​ಗಳಿಂದ ಅಂದು ಇರಾನ್ ದಾಳಿ ನಡೆಸಿತ್ತು. ತಿಂಗಳ ಆರಂಭದಲ್ಲಿ ಇಸ್ರೇಲ್ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಆದರೆ ಸಿರಿಯಾ ಮೇಲೆ ಯಾವುದೇ ದಾಳಿ ನಡೆಸಿರುವುದನ್ನು ಇಸ್ರೇಲ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

publive-image

ಇಸ್ರೇಲ್ ಮಿಸೈಲ್​ ಅಟ್ಯಾಕ್​ನಿಂದ ಮತ್ತೆ ಸಿಡಿದ ಇರಾನ್
ಇರಾನ್​ನಿಂದ ಮತ್ತಷ್ಟು ತೀವ್ರ ಅಟ್ಯಾಕ್ ಮಾಡೋ ಸಂದೇಶ
ಇಸ್ರೇಲ್ ದಾಳಿಗೆ ಪ್ರತ್ಯುತ್ತರ ನೀಡಿರುವ ಇರಾನ್​​ ಇಸ್ರೇಲ್​​ಗೆ ತಕ್ಕ ಪಾಠ ಕಲಿಸ್ತೀವಿ ಅಂತ ಗುಡುಗಿದೆ. ಇಸ್ರೇಲ್​ನ ದೊಡ್ಡ ಮಟ್ಟದ ದಾಳಿ ತಡೆದಿದ್ದೇವೆ ಅಂತನೂ ಹೇಳಿಕೊಂಡಿದೆ. ಈ ದಾಳಿಗೆ ಇರಾನ್ ಮತ್ತಷ್ಟು ಪ್ರಖರವಾಗಿ ಪ್ರತಿಕ್ರಿಯೆ ಕೊಡಲಿದೆ ಅಂತ ಸಂದೇಶ ನೀಡಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ: ಈ ಲಕ್ಷಣಗಳು ನಿಮಲ್ಲಿ ಇದ್ಯಾ? ಕಮ್ಮಿ ಉಪ್ಪು ತಿನ್ನೋದು ಎಷ್ಟು ಡೇಂಜರ್​​..? 

ಇರಾನ್-ಇಸ್ರೇಲ್ ಯುದ್ಧದ ನಡುವೆ ಲೆಬನಾನ್​​ನ ಹೆಜ್ಬುಲ್ಲಾ ಉಗ್ರರು ಕೂಡ ದಾಳಿ ಮಾಡಿದ್ದಾಗಿ ಹೇಳಿಕೊಂಡಿದೆ. ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ, ಐತಾ ಅಲ್ ಸಹಾಬ್​ನ ಹೊರವಲಯದಲ್ಲಿ ಬೀಡು ಬಿಟ್ಟಿದ್ದ ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ್ದೇವೆ ಅಂತ ಹಿಜ್ಬುಲ್ಲಾ ಹೇಳಿಕೊಂಡಿದೆ. ಇನ್ನು ಇಸ್ರೇಲ್ ಸೇನೆ ಇರಾನ್​ನಲ್ಲಿನ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಂದು ಮುಂಜಾನೆ ದಾಳಿ ನಡೆಸಿತ್ತು.

publive-image

ಇಸ್ರೇಲ್ ತನ್ನ ದಾಳಿಯಲ್ಲಿ ಇರಾನಿನ ಇಂಧನ ವ್ಯವಸ್ಥೆ ಅಥವಾ ಪರಮಾಣು ಘಟಕಗಳನ್ನು ಗುರಿಯಾಗಿಸಿಲ್ಲ ಎಂದು ಅಮೆರಿಕ ಹೇಳಿದೆ. ಇಸ್ರೇಲಿನ ಪ್ರಮುಖ ಬೆಂಬಲಿಗನಾಗಿರುವ, ಜೋ ಬೈಡನ್ ಇಸ್ರೇಲ್ ಏನಾದರೂ ಇರಾನ್​ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದರೆ ತಾನು ಬೆಂಬಲ ನೀಡುವುದಿಲ್ಲ ಅಂತ ಮೊದಲೇ ಎಚ್ಚರಿಕೆ ನೀಡಿತ್ತು.. ಇರಾನಿನ ತೈಲಾಗಾರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಬದಲು, ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುವಂತೆ ಇಸ್ರೇಲ್‌ಗೆ ಸಲಹೆ ನೀಡಿತ್ತು. ಇಸ್ರೇಲ್-ಇರಾನ್ ಈ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಯುದ್ಧ ನಡೆಯುವ ಕಾರ್ಮೋಡ ಆವರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment