ಮುಯ್ಯಿಗೆ ಮುಯ್ಯಿ.. ಇಸ್ರೇಲ್​-ಇರಾನ್​ ಯುದ್ಧದಲ್ಲಿ ಮತ್ತೆ ಏನಾಯ್ತು..?

author-image
Ganesh
Updated On
ಮುಯ್ಯಿಗೆ ಮುಯ್ಯಿ.. ಇಸ್ರೇಲ್​-ಇರಾನ್​ ಯುದ್ಧದಲ್ಲಿ ಮತ್ತೆ ಏನಾಯ್ತು..?
Advertisment
  • ಇಸ್ರೇಲ್​ನ ಟೆಲ್​ ಅವೀವ್​ ಮೇಲೆ ಇರಾನ್​ ಕ್ಷಿಪಣಿ ದಾಳಿ
  • ಜನವಸತಿ ಪ್ರದೇಶಗಳೇ ಟಾರ್ಗೆಟ್​.. 10 ಜನ ಬಲಿ
  • ಇಸ್ರೇಲ್​ ದಾಳಿಗೆ ಇರಾನ್​ನ ಅಣ್ವಸ್ತ್ರಗಾರ, ಸೇನೆ ನೆಲೆ ಉಡೀಸ್

ಜೂನ್‌ 13ರಂದು ಇರಾನ್‌ನ ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿತ್ತು. ಅದರ ಜೊತೆಗೆ ಸೇನಾ ನೆಲೆಗಳ ಮೇಲೂ ದಾಳಿ ಮಾಡಿತ್ತು. ಆ ದಾಳಿಗಳಿಗೆ ಪ್ರತೀಕಾರವಾಗಿ ಇರಾನ್‌ ತನ್ನಲ್ಲಿನ ನೂರಾರು ಡ್ರೋನ್‌ಗಳು ಕ್ಷಿಪಣಿಗಳನ್ನು ಇಸ್ರೇಲ್‌ನ ಜೆರುಸಲೇಂ ಹಾಗೂ ಟೆಲ್‌ ಅವೀವ್‌ಗೆ ತೂರಿಬಿಟ್ಟು, ಅಪಾರ ಪ್ರಮಾಣ ಹಾನಿಯನ್ನು ಉಂಟು ಮಾಡಿದೆ.

ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್​.. ಇರಾನ್​ ಮೇಲೆ ರಣಭೀಕರ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿ ಹಾಗೂ ಇಂಧನ ಕೈಗಾರಿಕೆಗಳನ್ನು ಗುರಿಯಾಗಿಸಿ ಇಸ್ರೇಲ್​ ಕ್ಷಿಪಣಿ ದಾಳಿ ನಡೆಸಿದ್ದು, ಈ ದೃಶ್ಯಗಳು ಎದೆ ನಡುಗಿಸುವಂತಿವೆ. ಇರಾನ್‌ನ ಮೇಲೆ ಇಸ್ರೇಲ್‌ನ ಕ್ಷಿಪಣಿಗಳು ಬೋರ್ಗರೆದಿದ್ದು, ಅದರಲ್ಲೂ ಮಶಾದ್​ ವಿಮಾನ ನಿಲ್ದಾಣದಲ್ಲಿ ಇಸ್ರೇಲ್​ ಅತಿದೊಡ್ಡ ದಾಳಿ ನಡೆಸಿದೆ. ಈ ನಿಲ್ದಾಣದಲ್ಲಿ ಇರಾನಿನ ಇಂಧನ ತುಂಬುವ ವಿಮಾನವನ್ನು ಇಸ್ರೇಲ್​ ಹೊಡೆದುರುಳಿದಿದ್ದು, ಭಯಾನಕ ಸ್ಫೋಟದಿಂದ ಹೊಗೆ ಮುಗಿಲೆತ್ತರಕ್ಕೆ ಆವರಿಸಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರು ಪ್ರಯಾಣಿಕರೇ ಎಚ್ಚರ.. ಇಂದಿನಿಂದ ನಗರದಾದ್ಯಂತ ಬೈಕ್ ಟ್ಯಾಕ್ಸಿಗಳು ಬ್ಯಾನ್!

publive-image

ಇಸ್ರೇಲ್​​ ಇರಾನ್​ನ ಅಣ್ವಸ್ತ್ರ ಕೇಂದ್ರಗಳನ್ನು ಟಾರ್ಗೆಟ್​ ಮಾಡಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಇದುವರೆಗೆ 14 ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ಇರಾನ್​ನ ಟೆಹ್ರಾನ್​ನಲ್ಲಿರುವ ಭೂಗತ ಶಸ್ತ್ರಗಾರವನ್ನು ಇಸ್ರೇಲ್​ ಧ್ವಂಸ ಮಾಡಿದೆ ಎಂದು ವರದಿಯಾಗಿದೆ. ಕಳೆದ ಶುಕ್ರವಾರದಿಂದ ಇಸ್ರೇಲ್​ ದಾಳಿಗೆ 224 ಜನರು ಮೃತಪಟ್ಟಿರುವುದಾಗಿ ಇರಾನ್​ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಸ್ರೇಲ್​ನ ಟೆಲ್​ ಅವೀವ್​ ಮೇಲೆ ಇರಾನ್​ ಕ್ಷಿಪಣಿ ದಾಳಿ

ಇಸ್ರೇಲ್​ನ ರೈಸಿಂಗ್​ ಲಯನ್​ ಕಾರ್ಯಾಚರಣೆಗೆ ಇರಾನ್​ ಕೂಡ ತಿರುಗೇಟು ನೀಡಿದೆ. ಇಸ್ರೇಲ್​ನ ಟೆಲ್​ ಅವೀವ್​, ಜೆರುಸಲೇಂ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಕ್ಷಿಪಣಿಗಳ ಸುರಿಮಳೆಯನ್ನೇ ಗೈದಿದೆ, ಇರಾನ್​ ಜನವಸತಿ ಪ್ರದೇಶಗಳನ್ನ ಟಾರ್ಗೆಟ್​ ಮಾಡಿದ್ದು ದಾಳಿ ನಡೆಸಿದೆ. ಇದರಿಂದ ಜನವಸತಿ ಕಟ್ಟಡಗಳಿಗೆ ಹಾನಿ ಆಗಿದ್ದು, 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಧ್ವಂಸಗೊಂಡಿರುವ ಕಟ್ಟಡಗಳ ಸ್ಥಳಕ್ಕೆ ಇಸ್ರೇಲ್​ ಅಧ್ಯಕ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಸ್ರೇಲ್​ ನಾಗರೀಕರ ಸಾವಿನಿಂದ ಕೆರಳಿ ಕೆಂಡವಾಗಿರುವ ನೆತನ್ಯಾಹು, ನಮ್ಮ ನಾಗರೀಕರ ಸಾವಿಗೆ ಇರಾನ್​ ​ಭಾರೀ ಬೆಲೆ ತರಬೇಕಾಗುತ್ತೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: UPI ಬಳಕೆದಾರರಿಗೆ ಗುಡ್​ನ್ಯೂಸ್​; ಇಂದಿನಿಂದ ಫೋನ್​ ಪೇ, ಗೂಗಲ್​ ಪೇ, ಪೇಟಿಎಂ ಮತ್ತಷ್ಟು ಸ್ಪೀಡ್​​!

publive-image

ಇಸ್ರೇಲ್​-ಇರಾನ್​ ನಡುವಿನ ಕದನ ದಿನದಿಂದ ದಿನಕ್ಕೆ ತಾರಕ್ಕಕೇರುತ್ತಿದ್ದು, ಭಾರತ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರ ಉಭಯ ದೇಶಗಳಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಸಲಹೆ ನೀಡ್ತಿದೆ. ಅದರಲ್ಲೂ ಅಮೆರಿಕಾ ಅಧ್ಯಕ್ಷ ಟ್ರಂಪ್​ ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದಂತೆ, ಇರಾನ್​-ಇಸ್ರೇಲ್​ ಯುದ್ಧವನ್ನು ಕೊನೆಗೊಳ್ಳುವಂತೆ ಮಾಡ್ತೇನೆ ಎನ್ನುವ ಮೂಲಕ ಭಾರತ-ಪಾಕ್​ ಕದನ ವಿರಾಮದ ಕ್ರೆಡಿಟ್​ ದಾಳ ಉರುಳಿಸಿದ್ದಾರೆ.

ಇರಾನ್​-ಇಸ್ರೇಲ್​ನಲ್ಲಿ ಇರುವ ಭಾರತೀಯರಿಗೆ ಕೇಂದ್ರ ಸರ್ಕಾರ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಅನಗತ್ಯವಾಗಿ ಹೊರಗೆ ಬಾರದೆ ಸುರಕ್ಷಿತ ಸ್ಥಳಗಳಲ್ಲಿ ಇರಿ.. ಹಾಗೂ ಭಾರತದ ಎಂಬಸಿ ಜೊತೆ ಸಂಪರ್ಕದಲ್ಲಿರಲು ತಿಳಿಸಿದೆ. ಜೊತೆಗೆ ಸಹಾಯವಾಣಿಯನ್ನು ಆರಂಭಿಸಿದೆ. ಇಸ್ರೇಲ್​ನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿಡಿಯೋ ಕಾಲ್​ ಮೂಲಕ ಮಾತನಾಡಿದ್ದು, ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಬಗ್ಗೆ ಕೇಂದ್ರದ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಾರೆ.. ಇಸ್ರೇಲ್​-ಇರಾನ್​ ನಡುವಿನ ಕದನದಿಂದ ಮದ್ಯ ಪ್ರಾಚ್ಯದ ದೇಗಳನ್ನು ಮೂರನೇ ಮಹಾಯುದ್ಧದ ಭೀತಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ಎಲ್ಲೆಲ್ಲೂ ಮಳೆ.. ರುದ್ರಪ್ರಯಾಗ, ಕೇದಾರನಾಥದಲ್ಲಿ ಅನಾಹುತ.. ಯಾವೆಲ್ಲ ರಾಜ್ಯದಲ್ಲಿ ಮಳೆ ಜೋರಾಗಿದೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment