ವಿಶ್ವವನ್ನೇ ಇಭ್ಭಾಗ ಮಾಡಿತಾ ಇಸ್ರೇಲ್-ಇರಾನ್ ವಾರ್? ಯಾವ ಯಾವ ರಾಷ್ಟ್ರ ಯಾರ ಬೆನ್ನಿಗೆ ನಿಲ್ಲಲಿವೆ?

author-image
Gopal Kulkarni
Updated On
ಕುದಿಯುತ್ತಿದೆ ಮಧ್ಯಪ್ರಾಚ್ಯ.. ಇಸ್ರೇಲ್​ನ ಅನೇಕ ಪ್ರದೇಶಗಳ​ ಮೇಲೆ ಹೆಜ್ಬೊಲ್ಲಾ ರಾಕೆಟ್ ದಾಳಿ..
Advertisment
  • ವಿಶ್ವವನ್ನು ಎರಡು ಹೋಳು ಮಾಡಿದ ಇಸ್ರೇಲ್ ಇರಾನ್ ಭೀಕರ ಕದನ
  • ಯಾವ ಯಾವ ದೇಶಗಳು ಇಸ್ರೇಲ್-ಇರಾನ್​ ಬೆನ್ನಿಗೆ ನಿಲ್ಲಲು ಸಜ್ಜಾಗಿವೆ ?
  • ಇಸ್ರೇಲ್ ಪರ ನಿಂತಿವೆ ಆರು ಬಲಿಷ್ಠ ರಾಷ್ಟ್ರಗಳು, ಇರಾನ್​ಗೆ ಯಾರ ಬೆಂಬಲ?

ಮಧ್ಯಪ್ರಾಚ್ಯ ಅಕ್ಷರಶಃ ಬೆಂಕಿಯುಂಡೆಯ ಮೇಲೆ ನಿಂತಿದೆ. ಇಸ್ರೇಲ್ ಸುತ್ತುಗಟ್ಟಿರುವ ವೈರಿ ಪಡೆಗಳು ಹೇಗಾದರೂ ಮಾಡಿ ಇಡೀ ಭೂಪಟದಿಂದ ಇಸ್ರೇಲ್​ ನಿರ್ನಾಮ ಮಾಡಲು ಕಂಕಣ ಕಟ್ಟಿಕೊಂಡಿವೆ. ಇತ್ತ ಇಸ್ರೇಲ್​ ತನ್ನ ಇತಿಹಾಸದ ಜಾಡು ಮರೆತಿಲ್ಲ. ಆರು ರಾಷ್ಟ್ರಗಳು ಒಟ್ಟಿಗೆ ಮುತ್ತಿಗೆ ಹಾಕಿದಾಗ ಆರೇ ದಿನದಲ್ಲಿ ಆ ಯುದ್ಧಕ್ಕೆ ತೀಲಾಂಲಿಯಿಟ್ಟಿದ್ದನ್ನು ನೆನಪಿಟ್ಟುಕೊಂಡಿದೆ. ಗುಂಪುಕಟ್ಟಿಕೊಂಡು ಬಂದರು ನಿಮ್ಮನ್ನು ಬಗ್ಗುಬಡಿಯುವ ಶಕ್ತಿ ನಮ್ಮಲ್ಲಿದೆ ಎಂದು ಈಗಾಗಲೇ ಇಸ್ರೇಲ್ ಪ್ರಧಾನಿ ಇಡೀ ವಿಶ್ವಕ್ಕೆ ಕೇಳುವಂತೆ ಗಟ್ಟಿಯಾಗಿ ಹೇಳಿದ್ದಾರೆ. ಯಾರು ಶಾಪ, ಯಾರು ನಮಗೆ ಆಶೀರ್ವಾದ ಅನ್ನೋದನ್ನ ಸಂಯುಕ್ತ ರಾಷ್ಟ್ರ ಮಂಡಳಿಯಲ್ಲಿಯೇ ನಿಂತು ಹೂಂಕರಿಸಿದ್ದಾರೆ. ಇಸ್ರೇಲ್​ ಕೆಣಕಿದ ಇರಾನ್ ಈಗ ಭಾರತ ಮಧ್ಯಸ್ತಿಕೆವಹಿಸಬೇಕು ಎಂದು ಗೋಗರೆಯುತ್ತಿದ್ದರೆ. ಮತ್ತೊಂದು ಕಡೆ ಕೆಣಕಿದವರನ್ನು ಬದುಕಲು ಬಿಡಲ್ಲ ಅಂತ ಯಹೂದಿಯ ನಾಡು ಸಿಂಹಗರ್ಜನೆ ಮಾಡುತ್ತಿದೆ. ಈ ಉಭಯ ರಾಷ್ಟ್ರಗಳ ಯುದ್ಧ ಈಗ ಇಡೀ ವಿಶ್ವವನ್ನೇ ಎರಡು ಹೋಳು ಮಾಡಿ ಹಾಕಿದೆ.

ಇದನ್ನೂ ಓದಿ:ಇಸ್ರೇಲ್-ಇರಾನ್ ಸಮರ; ಧಗಧಗಿಸುತ್ತಿದೆ ಯುದ್ಧದ ಬಿಸಿ.. 2 ರಾಷ್ಟ್ರಗಳ ಮಿಲಿಟರಿ ಬಲಾಬಲ ಹೇಗಿದೆ?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಾಡಿದ ಶಪಥ ಈಗ ಇಡೀ ವಿಶ್ವಕ್ಕೆ ಗೊತ್ತು. ಇರಾನ್ ಈಗಾಗಲೇ ದೊಡ್ಡ ತಪ್ಪನ್ನು ಮಾಡಿದೆ. ದೊಡ್ಡ ಬೆಲೆಯನ್ನು ತೆರಲಿದೆ ಎಂದೇ ಆರ್ಭಟಿಸಿದ್ದಾರೆ ನೇತನ್ಯಾಹು. ಒಂದು ವೇಳೆ ಮತ್ತೆ ಇರಾನ್ ನೆಲದ ಮೇಲೆ ದಾಳಿ ನಡೆದಿದ್ದೇ ಆದಲ್ಲಿ, ಇಸ್ರೇಲ್​ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇತ್ತ ಇರಾನ್​ ಕೂಡ ಸಿಡಿದೆದ್ದಿದೆ. ಈ ಉಭಯ ದೇಶಗಳ ಕದನೋತ್ಸಾಹ ಈಗ ವಿಶ್ವವನ್ನು ಇಬ್ಭಾಗ ಮಾಡಿ ಹಾಕಿದೆ. ಹಾಗಿದ್ರೆ ಯಾವ ಯಾವ ದೇಶ ಯಾರ ಯಾರ ಬೆನ್ನಿಗೆ ನಿಲ್ಲಲಿವೆ ಅನ್ನೋದರ ವಿವವರನ್ನು ನಾವು ನಿಮ್ಮ ಮುಂದೆ ತೆರೆದಿಡುತ್ತೇವೆ.

publive-image

ಯಹೂದಿಗಳ ಧ್ವನಿಗೆ ದೊಡ್ಡ ಶಕ್ತಿಯಾಗಿ ನಿಂತ ಅಮೆರಿಕಾ
ಈಗಾಗಲೇ ಯುಎಸ್​​ನ ಅಧ್ಯಕ್ಷ ಜೋ ಬೈಡನ್​ ಇರಾನ್​ ಮಿಸೈಲ್​ ದಾಳಿಯನ್ನು ಖಂಡಿಸಿದ್ದೇವೆ. ಇಸ್ರೇಲ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಈಗಾಗಲೇ ಉಭಯ ರಾಷ್ಟ್ರಗಳ ನಡುವೆ ಚರ್ಚೆಗಳು ಶುರುವಾಗಿವೆ ಎಂದು ಹೇಳುವ ಮೂಲಕ ನಾವು ಇಸ್ರೇಲ್ ಪರ ನಿಂತಿದ್ದಾರೆ. ಸದ್ದಾಂ ಹುಸೇನ್ ಕಾಲದಿಂದಲೂ ಅಮೆರಿಕಾ ಹಾಗೂ ಇರಾನ್​​ಗೆ ಎಣ್ಣೆ ಸೀಗೆಕಾಯಿಯಂತಹ ವೈರತ್ವವಿದೆ. ಹೀಗಾಗಿ ಈಗಾಗಲೇ ಇಸ್ರೇಲ್ ಇರಾನ್ ದಾಳಿಯನ್ನು ಸಮರ್ಥವಾಗಿ ನಿರ್ವಹಿಸಿದ ರೀತಿಯನ್ನು ಹಾಡಿ ಹೊಗಳಿದ್ದು, ಹಿಜ್ಬುಲ್ಲಾ ನಾಯಕ ಹಾಗೂ ಹಮಾಸ್ ನಾಯಕನ ಹತ್ಯೆಯನ್ನು ಕೂಡ ಅಮೆರಿಕಾ ಸಮರ್ಥಿಸಿಕೊಂಡಿದೆ.

publive-image

ಇಸ್ರೇಲ್ ಬೆನ್ನಿಗೆ ನಿಂತ ಬ್ರಿಟನ್
ಯುನೈಟೆಡ್ ಕಿಂಗ್​ಡಮ್ ಕೂಡ ಈಗ ಇಸ್ರೇಲ್ ಬೆನ್ನ ಹಿಂದೆ ನಿಂತಿದೆ. ಇಸ್ರೇಲ್​ಗೆ ತನ್ನ ಸ್ವಯಂ ರಕ್ಷಣೆಯ ಅಧಿಕಾರವಿದೆ, ಹೀಗಾಗಿ ಇರಾನ್ ಮಿಸೈಲ್ ದಾಳಿಯನ್ನು ನಾವು ಖಂಡಿಸುತ್ತೇವೆ ಹಾಗೂ ಇಸ್ರೇಲ್​ನ್ನು ಈ ವಿಚಾರದಲ್ಲಿ ಬೆಂಬಲಿಸುತ್ತೇವೆ ಎಂದು ಹೇಳಿಕೊಂಡಿದೆ. ಅಷ್ಟು ಮಾತ್ರವಲ್ಲ ಈ ಬಗ್ಗೆ ಮಾತನಾಡಿರುವ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಉಭಯ ರಾಷ್ಟ್ರಗಳ ಕದನದ ವಿಚಾರವಾಗಿ ನಾನು ಈಗಾಗಲೇ ಇಸ್ರೇಲ್ ಪ್ರಧಾನಿ ನೇತನ್ಯಾಹು, ಫ್ರೆಂಚ್ ಅಧ್ಯಕ್ಷ ಇಮನ್ಯೂಯಲ್ ಮಾಕ್ರನ್ ಹಾಗೂ ಜರ್ಮನಿಯ ಚಾನ್ಸಲರ್ ಒಲಾಫ್ ಸ್ಕೂಲ್ಜ್​​ ಜೊತೆ ಮಾತನಾಡಿದ್ದೇನೆ. ಈ ದೊಡ್ಡ ಸಂಘರ್ಷವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.
ಅಮೆರಿಕಾ ಬ್ರಿಟನ್ ರೀತಿಯೇ ಫ್ರಾನ್ಸ್, ಜಪಾನ್ ಜರ್ಮನಿ ಹಾಗೂ ಅಸ್ಟ್ರೇಲಿಯಾಗಳು ಈಗಾಗಲೇ ಇಸ್ರೇಲ್ ಪರ ನಿಂತಿವೆ. ಒಂದು ವೇಳೆ ಯುದ್ಧರಂಗದಲ್ಲಿ ಮತ್ತೆ ಇಸ್ರೇಲ್ ಇರಾನ್ ಎದುರಾಎದುರು ನಿಂತಿದ್ದೇ ಆದಲ್ಲಿ ಈ ಆರು ಬಲಿಷ್ಠ ರಾಷ್ಟ್ರಗಳು ಇಸ್ರೇಲ್ ಪರ ನಿಲ್ಲಲಿವೆ ಒಂದು ಕಡೆ ಇಸ್ರೇಲ್ ಪರ ವಿಶ್ವದ ಬಲಿಷ್ಠ ರಾಷ್ಟ್ರಗಳಾದ ಅಮೆರಿಕಾ ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್ ಆಸ್ಟ್ರೇಲಿಯಾಗಳು ನಿಂತಿದ್ದರೆ. ಇತ್ತ ಇರಾನ್ ಬೆನ್ನಿಗೂ ಹಲವು ರಾಷ್ಟ್ರಗಳು ನಿಂತಿವೆ.

ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಇಸ್ರೇಲ್​ ಮೇಲೆ ಆ ಅಸ್ತ್ರ ಬಳಕೆ; ಇರಾನ್ ಆರ್ಥಿಕ ಮೂಲವನ್ನೇ ಪುಡಿಗಟ್ಟಲು ನಿಂತಿತಾ ಯಹೂದಿ ಪಡೆ?

publive-image

ಇರಾನ್ ಪರ ಮಾತನಾಡಿದ ಟರ್ಕಿ ಮತ್ತು ರಷ್ಯಾ
ಟರ್ಕಿ ಸದ್ಯ ಇರಾನ್​ ಪರ ನಿಂತುಕೊಂಡಿದೆ. ಮಧ್ಯಪ್ರಾಚ್ಯದ ಮತ್ತೊಂದು ಪ್ರಮುಖ ಇಸ್ಲಾಂ ರಾಷ್ಟ್ರವಾಗಿರುವ ಟರ್ಕಿ, ಲೆಬಾನಾನ್​ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿದ್ದು. ವಿಶ್ವ ಸಂಸ್ಥೆ ಹಾಗೂ ಉಳಿದ ಪ್ರಮುಖ ರಾಷ್ಟ್ರಗಳು ಇಸ್ರೇಲ್​ನ ಈ ಆಕ್ರಮಣಕಾರಿ ನಡೆಯನ್ನು ಸಮಯ ವ್ಯರ್ಥ ಮಾಡದೆ ತಡೆಯಬೇಕು ಎಂದು ಹೇಳಿದೆ. ಇನ್ನೂ ರಷ್ಯಾ ಕೂಡ ಇರಾನ್ ಬೆನ್ನಿಗೆ ನಿಂತಿದೆ. ರಷ್ಯಾ ಮತ್ತು ಇರಾನ್​ ನಡುವೆ ದಶಕಗಳ ಕಾಲದ ಸ್ನೇಹವಿದೆ. ಅದು ಈಗ ಇಲ್ಲಿಯೂ ಮುಂದುವರಿದಿದೆ. ಪಾಶ್ಚಿಮಾತ್ಯ ವಿರೋಧಿ ನೀತಿಯನ್ನು ಇಲ್ಲಿಯೂ ಕೂಡ ಅಳವಡಿಸಿರುವ ರಷ್ಯಾ ಈಗ ಇರಾನ್ ಪರ ನಿಂತಿದೆ. ಈಗಾಗಲೇ ಎರಡು ದೇಶಗಳ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧವಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವೆ ಹಲವು ಆರ್ಥಿಕ ಒಪ್ಪಂದಗಳಾಗಿವೆ. ಅದು ಈಗ ಯುದ್ಧರಂಗದವರೆಗೂ ವಿಸ್ತರಿಸಿದೆ.
ರಷ್ಯಾ ಟರ್ಕಿ ಜೊತೆಗೆ ಇರಾನ್​ ಬೆನ್ನಿಗೆ ಚೀನಾ ಕೂಡ ನಿಂತಿದೆ. ಚೀನಾ ಅಮೆರಿಕಾ ನಡುವೆ ಈಗಾಗಲೇ ವಿಶ್ವ ಶಕ್ತಿಶಾಲಿ ರಾಷ್ಟ್ರವಾಗುವ ಒಂದು ಶೀತಲಸಮರ ಜೋರಾಗಿದೆ. ಹೀಗಾಗಿಯೇ ಚೀನಾ ಇರಾನ್ ಪರ ನಿಂತಿದೆ. ಚೀನಾ ರಷ್ಯಾ ಹಗೂ ಟರ್ಕಿ ಜೊತೆಗೆ ಲೆಬನಾನ್ ಹಾಗೂ ಯಮೆನ್ ಕೂಡ ಈಗ ಇರಾನ್ ಪರ ನಿಂತಿವೆ. ಒಂದು ಹಂತದಲ್ಲಿ ಇರಾನ್ ಇಸ್ರೇಲ್ ವಿರುದ್ಧ ನಡೆಸಿದ ಮಿಸೈಲ್ ದಾಳಿ ಈಗ ಇಡಿ ವಿಶ್ವವನ್ನೇ ಎರಡು ಭಾಗ ಮಾಡಿ ಹಾಕಿದೆ. ಈ ಉಭಯ ರಾಷ್ಟ್ರಗಳ ಕದನ ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತಾ ಅನ್ನೋ ಅನುಮಾನಗಳು ಕೂಡ ಈಗ ಕಾಡುತ್ತಿವೆ. ಇದು ಮುಂದೆ ಯಾವ ಹಂತಕ್ಕೆ ಮುಟ್ಟಲಿದೆಯೋ ಗೊತ್ತಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment