ಇರಾನ್​ನಲ್ಲಿ ಸಿಲುಕಿರೋ ಭಾರತೀಯರ ರಕ್ಷಣೆ ಏನಾಯ್ತು..? ಭಾರತಕ್ಕೆ ಮರಳಲು ಆಗ್ತಿರುವ ಅಡ್ಡಿ ಏನು..?

author-image
Ganesh
Updated On
ಇರಾನ್​ನಲ್ಲಿ ಸಿಲುಕಿರೋ ಭಾರತೀಯರ ರಕ್ಷಣೆ ಏನಾಯ್ತು..? ಭಾರತಕ್ಕೆ ಮರಳಲು ಆಗ್ತಿರುವ ಅಡ್ಡಿ ಏನು..?
Advertisment
  • ಅರ್ಮೇನಿಯಾದಿಂದ ಇಂದು ಭಾರತಕ್ಕೆ ಮೊದಲ ತಂಡ ಶಿಫ್ಟ್​
  • ಇರಾನ್​ನಿಂದ ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರ ಅಷ್ಟು ಸುಲಭವಲ್ಲ
  • ರಕ್ಷಣಾ ಕಾರ್ಯಾಚರಣೆಗೆ ಭೌಗೋಳಿಕ ರಾಜಕೀಯ ಅಡ್ಡಿಯಾಗಿದೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ದಿನದಿಂದ ದಿನಕ್ಕೆ ಇಸ್ರೇಲ್​-ಇರಾನ್​ ನಡುವಿನ ಸಂಘರ್ಷ ತಾರಕಕ್ಕೇರುತ್ತಲೇ ಇದೆ.. ಎರಡು ದೇಶಗಳು ಕ್ಷಿಪಣಿಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಇದೀಗ ಭೀಕರ ಸ್ವರೂಪ ಪಡೆದುಕೊಳ್ತಿದೆ. ಈ ಮಧ್ಯೆ ಇರಾನ್​ನಲ್ಲಿ ಸಿಲುಕಿರೋ ಭಾರತೀಯರನ್ನ ಸುರಕ್ಷಿತವಾಗಿ ಕರೆತರೋ ಕಾರ್ಯವೂ ಭರದಿಂದ ಸಾಗಿದೆ.

ಇರಾನ್​ನಲ್ಲಿ ಸಿಲುಕಿರೋ ಭಾರತೀಯರ ರಕ್ಷಣೆ ಬಿರುಸು

ಸಂಘರ್ಷಪೀಡಿತ ಇರಾನ್​ನಲ್ಲಿ 10 ಸಾವಿರ ಭಾರತೀಯರು ಸಿಲುಕಿದ್ದಾರೆ. ಅದರಲ್ಲಿ 1500, 2000 ವಿದ್ಯಾರ್ಥಿಗಳು ಹಾಗೂ 6 ಸಾವಿರ ಜನರು ಲಾಕ್​ ಆಗಿದ್ದಾರೆ. ಇತ್ತ ತಮ್ಮವರನ್ನು ಸುರಕ್ಷಿತವಾಗಿ ಕರೆ ತರುವಂತೆ ಪೋಷಕರು ಸರ್ಕಾರಗಳ ಬಳಿ ಮನವಿ ಮಾಡಿಕೊಳ್ತಿದ್ದಾರೆ. ಈಗಾಗಲೇ ಭಾರತೀಯರನ್ನ ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಸರ್ವ ರೀತಿ ಪ್ರಯತ್ನ ಮಾಡ್ತಿದೆ.

ಇವತ್ತು ಮೊದಲ ತಂಡ ಅರ್ಮೇನಿಯಾದಿಂದ ಭಾರತಕ್ಕೆ ಏರ್​ಲಿಫ್ಟ್​ ಆಗುವ ಸಾಧ್ಯತೆ ಇದೆ. ನಿನ್ನೆ ಟೆಹ್ರಾನ್​ನಿಂದ 110 ಭಾರತೀಯರ ತಂಡ. ಭೂಮಾರ್ಗವಾಗಿ ಅರ್ಮೇನಿಯಾವನ್ನು ಸುರಕ್ಷಿತವಾಗಿ ತಲುಪಿತ್ತು. ಇವತ್ತು ಅರ್ಮೇನಿಯಾದಿಂದ ಭಾರತಕ್ಕೆ ಬರಲಿದ್ದಾರೆ. ಇವರೆಲ್ಲೂ ಉರ್ಮಿ ಯುನಿವರ್ಸಿಟಿಯ ವಿದ್ಯಾರ್ಥಿಗಳು ಎನ್ನಲಾಗಿದ್ದು, ಜಮ್ಮು-ಕಾಶ್ಮೀರ ಭಾಗದವರಾಗಿದ್ದಾರೆ. ಇವರಲ್ಲದೇ ಸುಮಾರು 600-700 ಜನರನ್ನು ಮಧ್ಯ ಇರಾನ್‌ನ ಸುರಕ್ಷಿತ ನಗರವಾದ ಕೋಮ್‌ಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಶರಣಾಗಲು ಇರಾನ್​​ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..

publive-image

ರಷ್ಯಾ-ಉಕ್ರೇನ್​ ಸಂದರ್ಭದಲ್ಲಿ ಆಪರೇಷನ್​ ಗಂಗಾ ಹೆಸರಲ್ಲಿ ಭಾರತ ಯುದ್ಧಪೀಡಿತ ಸ್ಥಳಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್​ಲಿಫ್ಟ್​ ಮಾಡಿತ್ತು. ಸುಮಾರು 22 ಸಾವಿರ ಭಾರತೀಯರನ್ನು ಮಿಂಚಿನ ವೇಗದಲ್ಲಿ ಭಾರತ ವಾಯುಪಡೆಯ ವಿಮಾನಗಳನ್ನು ಬಳಸಿಕೊಂಡು ಏರ್​ಲಿಫ್ಟ್​ ಮಾಡಿತ್ತು. ಆದ್ರೆ ಇರಾನ್​-ಇಸ್ರೇಲ್​​ ಸಂಘರ್ಷದಲ್ಲಿ ಮಾತ್ರ ಭಾರತೀಯರ ರಕ್ಷಣೆ ಆಮೆನಡಿಗೆಯಲ್ಲಿ ಸಾಗಿದೆ. ಇದಕ್ಕೆ ಕೆಲವೊಂದು ಕಾರಣಗಳಿವೆ.

ಯಾಕೆ..?

ಇರಾನ್​ನಿಂದ ದೊಡ್ಡ ಪ್ರಮಾಣದಲ್ಲಿ ಭಾರತೀಯರನ್ನು ಸ್ಥಳಾಂತರಿಸುವುದು ಸುಲಭದ ಮಾತಲ್ಲ. ಯಾಕಂದ್ರೆ, ರಕ್ಷಣಾ ಕಾರ್ಯಾಚರಣೆಗೆ ಭೌಗೋಳಿಕ ರಾಜಕೀಯ ಅಡ್ಡಿಯಾಗಿದೆ. ಇದರ ಜೊತೆಗೆ ಸ್ಥಳಾಂತರಿಸುವ ಮಾರ್ಗಗಳು ಮತ್ತು ಆಯ್ಕೆಗಳು ಕೂಡ ಸೀಮಿತವಾಗಿವೆ. ರಸ್ತೆ, ರೈಲು ಸಂಪರ್ಕವು ವಿಶ್ವಾಸರ್ಹವಲ್ಲ. ಇರಾನ್​ನ ಪೂರ್ವ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೂಲಕ ಸ್ಥಳಾಂತರ ಮಾಡುವುದು ಸವಾಲಿನ ಮಾತು. ಪಾಕ್​ ವಾಯುಪ್ರದೇಶವು ಭಾರತಕ್ಕೆ ಮುಚ್ಚಲ್ಪಟ್ಟಿದೆ. ಇನ್ನು ಭೂ ಮಾರ್ಗವಾಗಿ ಕರೆತರುವುದು ಭದ್ರತಾ ದೃಷ್ಟಿಯಿಂದ ಕಷ್ಟದ ಮಾತು. ಈ ಎಲ್ಲ ಕಾರಣಗಳಿಂದಲೇ ಇರಾನ್​ನಿಂದ ಭೂಮಾರ್ಗವಾಗಿ ಅರ್ಮೇನಿಯಾಗೆ ಕರೆತಂದು ಅಲ್ಲಿಂದ ಭಾರತೀಯರನ್ನು ಏರ್​ಲಿಫ್ಟ್​ ಮಾಡಬೇಕಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ.. ಇದುವರೆಗೂ 163 ಮಂದಿ ಗುರುತು ಪತ್ತೆ; ಇಂದು ಕುಟುಂಬಸ್ಥರಿಗೆ ಹಸ್ತಾಂತರ

publive-image

ಇರಾನ್​ ಮಾತ್ರವಲ್ಲ ಇಸ್ರೇಲ್​ನಲ್ಲೂ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದಿಂದ ಇಸ್ರೇಲ್​ಗೆ ತೆರಳಿದ್ದ ತಂಡವೊಂದು ಇಸ್ರೇಲ್​ನಲ್ಲೇ ಲಾಕ್​ ಆಗಿದೆ. ಸದ್ಯ ಟೆಲ್​ಅವೀವ್ ನಿಂದ ಕೆಪಿಸಿಸಿ ವಕ್ತಾರ ನಟರಾಜ್​ಗೌಡ, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. 2-3 ದಿನದಲ್ಲಿ ಬೆಂಗಳೂರು ವಾಪಸ್​ ಆಗ್ತೇವೆ.. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂದೇಶ ರವಾನಿಸಿದ್ದಾರೆ.

publive-image

ಒಟ್ಟಿನಲ್ಲಿ ಇರಾನ್​, ಇಸ್ರೇಲ್​ ನಡುವಿನ ಯುದ್ಧ ತೀವ್ರಗೊಂಡಿದ್ದು, ಭಾರತ ಇರಾನ್​ನಲ್ಲಿ ನೆಲೆಸಿರೋ ಭಾರತೀಯರನ್ನ ಕರೆತರಲು ಮುಂದಾಗಿದ್ದು, ಸುರಕ್ಷಿತವಾಗಿ ತಮ್ಮವರು ಹಿಂದಿರುಗಲಿ ಅಂತ ಕುಟುಂಬಸ್ಥರು ಪ್ರಾರ್ಥಿಸ್ತಿದ್ದಾರೆ.

ಇದನ್ನೂ ಓದಿ: ಶರಣಾಗಲು ಇರಾನ್​​ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment