/newsfirstlive-kannada/media/post_attachments/wp-content/uploads/2025/06/IRAN-2.jpg)
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಪಶ್ಚಿಮ ಇರಾನ್ನಿಂದ ಟೆಹ್ರಾನ್ ಕಡೆಗೆ ಸಾಗುತ್ತಿದ್ದ ಶಸ್ತ್ರಾಸ್ತ್ರ ತುಂಬಿದ ಟ್ರಕ್‌ಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇರಾನ್ ಮಿಲಿಟರಿ ಮೂಲಸೌಕರ್ಯ ನಾಶಪಡಿಸುವ ನಿಟ್ಟಿನಲ್ಲಿ ಈ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಇಸ್ರೇಲ್ ವೈಮಾನಿಕ ದಾಳಿಯ ನಡುವೆ ಸಾವಿರಾರು ನಿವಾಸಿಗಳು ಟೆಹರಾನ್ನಿಂದ ಪಲಾಯನ ಮಾಡ್ತಿದ್ದಾರೆ. ಕ್ಯಾಸ್ಪಿಯನ್ ಸಮುದ್ರಕ್ಕೆ ತೆರಳುವ ಹೆದ್ದಾರಿ 49ರಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಇನ್ನು ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಕೂಡ ಅಡಗುತಾಣವನ್ನು ಸೇರಿದ್ದಾರೆಂದು ವರದಿಯಾಗಿದೆ. ಮತ್ತೊಂದು ಕಡೆ ಟೆಹ್ರಾನ್ ನಗರವನ್ನೇ ಜನ ಖಾಲಿ ಮಾಡ್ತಿದ್ದಾರೆ.
ಇದನ್ನೂ ಓದಿ: ನಾಳೆ ಸ್ಮಾರ್ಟ್ ಪೆನ್ ಇರೋ Redmi Pad 2 ಬಿಡುಗಡೆ.. ಇದರ ಫ್ಯೂಚರ್ಸ್ ಹೇಗೆಲ್ಲಾ ಇವೆ?
ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ಹಾರಿಸಿದ ಇರಾನ್
ಮತ್ತೊಂದು ಕಡೆ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ತಿರುಗೇಟು ನೀಡಿದ್ದು, ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿಯನ್ನು ನಡೆಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇನ್ನು ಇರಾನ್ ಮಿಲಿಟರಿ ಪಡೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್, 3ನೇ ಯುದ್ಧದ ಆತಂಕವನ್ನು ಹೆಚ್ಚಿಸಿದೆ. ಟೆಲ್ ಅವಿವ್ ಮೇಲೆ ದೊಡ್ಡ ದಾಳಿ ನಡೆಸುವುದಾಗಿ ಹೇಳಿದ್ದು, ಟೆಲ್ ಅವಿವ್ ನಗರನ್ನು ತೊರೆಯುವಂತೆ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ -ಇಸ್ರೇಲ್ ಸಂಘರ್ಷದ ಮಧ್ಯೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸಿದರು. ಇಸ್ರೇಲ್ ಜೊತೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನ್ ಗೆಲ್ಲುವುದಿಲ್ಲ ಎಂದು ಅವರು ಹೇಳಿದ್ದು, ತಡವಾಗುವ ಮೊದಲು ಮಾತುಕತೆಗಳಿಗೆ ಮರಳಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ಈಗಾಗಲೇ ಅಮೆರಿಕ ಯುದ್ಧ ನೌಕೆಯು ಪಶ್ಚಿಮ ಸಮುದ್ರ ಕಡೆ ಹೊರಟಿದೆ.
ಇದನ್ನೂ: ಇರಾನ್ ಟಿವಿ ಚಾನಲ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ.. ನ್ಯೂಸ್ ಓದುತ್ತಿದ್ದ ಆ್ಯಂಕರ್ ಜಸ್ಟ್ ಮಿಸ್.. VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ