/newsfirstlive-kannada/media/post_attachments/wp-content/uploads/2025/06/US-B2.jpg)
ಕಳೆದ ಎರಡು ದಿನಗಳ ಹಿಂದಷ್ಟೇ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಮೆರಿಕ ಭಾಗವಹಿಸಬೇಕೇ ಬೇಡವೆ ಎಂಬ ಗೊಂದಲದಲ್ಲಿತ್ತು. ಇದೀಗ ಅಮೆರಿಕ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ನೇರವಾಗಿ ಎಂಟ್ರಿ ನೀಡಿದೆ. ಇರಾನ್‌ನ 3 ಪರಮಾಣು ತಾಣಗಳ ಮೇಲೆ ಅಮೆರಿಕ ಏರ್ಸ್ಟ್ರೈಕ್ ಮಾಡಿದೆ. ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೊ (Fordow), ನಟಾಂಜ್ (Natanz) ಮತ್ತು ಇಸ್ಫಹಾನ್ (Isfahan) ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ.
ಇದನ್ನೂಓದಿ: ಇರಾನ್‌ನ ಪರಮಾಣು ನೆಲೆಗಳನ್ನ ಧ್ವಂಸ ಮಾಡಿದ ಅಮೆರಿಕ.. ಬೆನ್ನಲ್ಲೇ ಟ್ರಂಪ್ನಿಂದ ಮತ್ತೊಂದು ಧಮ್ಕಿ..!
ಮತ್ತೊಂದು ಕಡೆ ಅಮೆರಿಕ ಬಿ-2 ಬಾಂಬರ್‌ಗಳನ್ನ ಪೆಸಿಫಿಕ್ ದ್ವೀಪ ಗುವಾಮ್‌ಗೆ ರವಾನಿಸಿದೆ. ಈ ಮೂಲಕ ರಣರಂಗಕ್ಕೆ ಅಮೆರಿಕಾ ಎಂಟ್ರಿ ಆಗಿದೆ. ಹಾಗಾದ್ರೆ, ಬಿ2 ಬಾಂಬರ್ ಜೆಟ್ ಹೇಗೆ ಕಾರ್ಯಾಚರಣೆ ನಡೆಸಲಿದೆ.. ಇದರ ಸ್ಪೆಷಾಲಿಟಿ ಏನು ಅನ್ನೋ ವಿವರ ಹೀಗಿದೆ.
ಒನ್ ಅಂಡ್ ಒನ್ಲಿ ಬಿ2 ಬಾಂಬರ್
- ಸಾಮಾನ್ಯ, ಪರಮಾಣು ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲದು
- ಈವರೆಗೆ ನಿರ್ಮಿಸಿದ ಅತ್ಯಂತ ದುಬಾರಿ ಮಿಲಿಟರಿ ವಿಮಾನ
- ಪ್ರತಿ ಬಿ-2 ವಿಮಾನಕ್ಕೆ 2.1 ಬಿಲಿಯನ್ ಡಾಲರ್ ವೆಚ್ಚ
- 6 ಸಾವಿರ ನಾಟಿಕಲ್ ಮೈಲುಗಳಿಗೂ ಹೆಚ್ಚು ನಿರಂತರ ಹಾರಾಟ
- ಗಾಳಿಯಲ್ಲಿ ಇಂಧನ ತುಂಬುವ ಸಾಮರ್ಥ್ಯ ಹೊಂದಿದೆ
- ನ್ಯೂಕ್ಲಿಯನ್ನಂತಹ ಹೆಚ್ಚು ಬಲವರ್ಧಿತ ತಾಣಗಳ ಗುರಿ
- 40,000 ಪೌಂಡ್ ತೂಕದ ಬಾಂಬ್ ಹೊತ್ತೊಯ್ಯಬಲ್ಲದು
- ಮ್ಯಾಸಿವ್ ಆರ್ಡನೆನ್ಸ್ ಪೆನೆಟ್ರೇಟರ್ ಹೊತ್ತೊಯ್ಯುವ ಜಗತ್ತಿನ ಏಕೈಕ ಜೆಟ್
- JDAM, JSOW, JASSM ರೀತಿ ಬಾಂಬ್ ಸಾಗಾಣೆ
- 16 B83 ಪರಮಾಣು ಬಾಂಬ್ ಹಿಡಿದಿಟ್ಟುಕೊಳ್ಳುವ ಶಕ್ತಿ
- ರಾಡಾರ್, ಕಡಿಮೆ ಗೋಚರತೆ ತಂತ್ರಜ್ಞಾನ ಹೊಂದಿದೆ
ಮೊನ್ನೆಯಷ್ಟೆ ಕತಾರ್ ನಲ್ಲಿರುವ ಮಿಲಿಟರಿ ನೆಲೆ ತೊರೆದಿದ್ದ ಅಮೆರಿಕಾ ವಿಮಾನಗಳು, ಬಹ್ರೇನ್ನಲ್ಲಿರುವ ಯುಎಸ್ ನೌಕಾಪಡೆಯ 5ನೇ ಫ್ಲೀಟ್ ಬೇಸ್‌ನಲ್ಲಿರುವ ಹಡಗುಗಳು ಜಾಗ ಖಾಲಿ ಮಾಡಿದ್ವು. ಈ ಬೆಳವಣಿಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.. ಯುದ್ಧದ ನಡುವಿನ ಈ ಜಾಗದಲ್ಲಿ ಸೇಫ್ ಅಲ್ಲ ಅಂತ ಭಾವಿಸಿ ಅಮೆರಿಕಾ ಜಾಗ ಖಾಲಿ ಮಾಡಿತ್ತು. ಈಗ ಬಿ-2 ಎಂಟ್ರಿ ಕೊಟ್ಟಿದೆ. ಇತ್ತ, ಅಮೆರಿಕಾಕ್ಕೆ ಹೌತಿ ಉಗ್ರರು ಬೆದರಿಕೆ ಒಡ್ಡಿದ್ದಾರೆ. ರೆಡ್ ಸೀನಲ್ಲಿ ರಕ್ತಪಾತದ ಎಚ್ಚರಿಕೆ ನೀಡಿರುವ ಹೌತಿ ಮುಖ್ಯಸ್ಥ, ಇಸ್ರೇಲ್ನ್ನ ಬೆಂಬಲಿಸಿ ಯುದ್ಧಕ್ಕೆ ಬಂದಲ್ಲಿ ಅಮೆರಿಕಾದ ಶಿಪ್ಗಳ ಮೇಲೆ ದಾಳಿ ನಡೆಸೋದಾಗಿ ಬೆದರಿಕೆ ಒಡ್ಡಿದೆ.
ಇದನ್ನೂ ಓದಿ: ಇರಾನ್‌ನ 120 ಕ್ಷಿಪಣಿ ಲಾಂಚ್ ಪ್ಯಾಡ್ ಧ್ವಂಸ.. 24 ಗಂಟೆಯಲ್ಲಿ 430 ಮಂದಿಯ ಜೀವ ಹೋಗಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ