ಇಸ್ರೇಲ್ ಮೇಲೆ ಇರಾನ್‌ನಿಂದ 200 ಕ್ಕೂ ಅಧಿಕ ಕ್ಷಿಪಣಿ ದಾಳಿ
ರಾತ್ರಿಯೇ ನೇತನ್ಯಾಹು ಪಡೆಯಿಂದ ಪ್ರತಿದಾಳಿಗೆ ಇಬ್ಬರು ಉಗ್ರರು ಸಾವು
ಮಧ್ಯಪ್ರಾಚ್ಯದಲ್ಲಿ ಯುದ್ಧಕಾರ್ಮೋಡ ಬೆನ್ನಲ್ಲೇ ಭಾರತ ಹೈ ಅಲರ್ಟ್
ಗಾಜಾ ಪಟ್ಟಿಯಿಂದ ಶುರುವಾದ ಸಂಘರ್ಷ ಮೂರನೇ ವಿಶ್ವಯುದ್ಧದ ಬಾಗಿಲಲ್ಲಿ ತಂದು ನಿಲ್ಲಿಸಿದೆ. ಇರಾನ್ ದಾಳಿಗೆ ಇಸ್ರೇಲ್ ಕೆರಳಿದ್ದು ಪ್ರತೀಕಾರದ ಪ್ರತಿಜ್ಞೆ ಮಾಡಿದೆ. ಇತ್ತ ಇರಾನ್ಗೆ ಅಮೆರಿಕ ಎಚ್ಚರಿಕೆ ಕೊಟ್ಟಿದೆ. ಇದೇ ವೇಳೆ ಇಸ್ರೇಲ್ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಅಲರ್ಟ್ ಆಗಿರುವಂತೆ ಸೂಚಿಸಿದೆ.
ಮಧ್ಯಪ್ರಾಚ್ಯದ ಸದ್ಯದ ಪರಿಸ್ಥಿತಿ ಅಕ್ಷರಶಃ ಮುಂದಿನ ವಿಶ್ವಯುದ್ಧಕ್ಕೆ ರಣವೀಳ್ಯ ಕೊಡ್ತಿದೆ. ಉಗ್ರ ನಸ್ರಲ್ಲ ಹತ್ಯೆಗೆ ಪ್ರತೀಕಾರವಾಗಿ ಇರಾನ್‌ನಿಂದ ಇಸ್ರೇಲ್ ಮೇಲೆ ಅತಿದೊಡ್ಡ ರಾಕೆಟ್‌ಗಳ ಸುರಿಮಳೆಯಾಗಿದೆ. ಇರಾನ್ನ 200ಕ್ಕೂ ಹೆಚ್ಚು ಕ್ಷಿಪಣಿಗಳ ದಾಳಿಗೆ ಇಸ್ರೇಲ್ ಬೆಚ್ಚಿಬಿದ್ದಿದೆ. ರಾತ್ರೋರಾತ್ರಿ ಜೆರುಸಲೇಮ್, ಟೆಲ್ ಅವೀವ್ ಸೇರಿದಂತೆ ಹಲವೆಡೆ ಸೈರನ್ ಮೊಳಗಿದೆ.
ಇದನ್ನೂ ಓದಿ:ಇಸ್ರೇಲ್ ಮತ್ತು ಇರಾನ್ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು
ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧಕ್ಕೆ ಮುನ್ನುಡಿ ಬರೆದ ಇರಾನ್
ಇಸ್ರೇಲ್-ಇರಾನ್ ನಡುವಿನ ಯುದ್ಧ ಮತ್ತಷ್ಟು ತೀವ್ರಗೊಂಡಿದೆ. 10 ಲಕ್ಷ ನಾಗರಿಕರನ್ನ ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿದ್ದಂತೆ ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆಯುವಂತೆ ಇಸ್ರೇಲ್ ತನ್ನ ದೇಶದ ನಾಗರಿಕರಿಗೆ ತಿಳಿಸಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಇಸ್ರೇಲ್ ನಾಗರಿಕರಿಗೆ ಬಾಂಬ್ ಶೆಲ್ಟರ್ಗಳಲ್ಲಿ ಆಶ್ರಯ ಕೊಟ್ಟಿದೆ. ಮಾತ್ರವಲ್ಲದೇ ತನ್ನನ್ನು ಕೆಣಕಿದವರನ್ನು ಸುಮ್ಮನೆ ಬಿಡದ ಯಹೂದಿ ದೇಶ, ತನ್ನ ಸುತ್ತಲೂ ವೈರಿ ಪಡೆಗಳನ್ನೇ ಕಟ್ಟಿಕೊಂಡಿದೆ. ಸದ್ಯ ಇರಾನ್ ಕ್ಷಿಪಣಿ ದಾಳಿಗೆ ಪ್ರತ್ಯುತ್ತರ ಕೊಡಲು ಇಸ್ರೇಲ್ ಮುಂದಾಗಿದೆ. ಈಗಾಗಲೇ ಇರಾನ್ನ ಹಲವು ಕ್ಷಿಪಣಿಗಳನ್ನು ಐರನ್ ಡೋಮ್ ಬಳಸಿ ಹೊಡೆದುರುಳಿಸಿದೆ. ಇದರಿಂದ ಹೆಚ್ಚಿನ ಪ್ರಮಾಣದ ಹಾನಿಯನ್ನು ತಡೆಗಟ್ಟಿದೆ.
ಇಸ್ರೇಲ್ ಪ್ರತಿ ದಾಳಿ.. ಇಬ್ಬರು ಉಗ್ರರು ಸಾವು
ಇನ್ನು ಇರಾನ್ ದಾಳಿಗೆ ಇಸ್ರೇಲ್ ಕೆರಳಿ ಕೆಂಡವಾಗಿದೆ. ಮೊದಲೇ ತನ್ನ ನಾಗರಿಕರ ಮೇಲೆ ದಾಳಿ ಮಾಡಿದ ಯಾರನ್ನೂ ಕೂಡ ಸುಮ್ಮನೆ ಬಿಡಲ್ಲ ಅಂತ ಪ್ರಧಾನಿ ನೆತನ್ಯಾಹು ಶಪಥ ಮಾಡಿದ್ದಾರೆ. ಸದ್ಯ ಇರಾನ್ ದಾಳಿಯಿಂದ ಉಗ್ರರೂಪ ತಾಳಿರುವ ಇಸ್ರೇಲ್ ಕೂಡ ಪ್ರತಿ ದಾಳಿ ಮಾಡುತ್ತಿದೆ. ರಾತ್ರಿ ವೇಳೆಯೇ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಮಾತ್ರವಲ್ಲದೆ ದಾಳಿಯನ್ನು ತೀವ್ರಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಇಸ್ರೇಲ್ ಭದ್ರತಾ ಮಂಡಳಿಯ ತುರ್ತು ಸಭೆ ನಡೆಸಿದೆ.
ಇದನ್ನೂ ಓದಿ:ಹಮಾಸ್ ನಾಯಕರ ಹತ್ಯೆಗೆ ಪ್ರತಿಕಾರ; ಇಸ್ರೇಲ್ ಮೇಲೆ 100 ಕ್ಷಿಪಣಿಗಳಿಂದ ಇರಾನ್ ಭಯಾನಕ ದಾಳಿ
ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಕೇಂದ್ರ ಎಚ್ಚರಿಕೆ
ಇನ್ನು ಕ್ಷಿಪಣಿ ದಾಳಿ ಬೆನ್ನಲ್ಲೇ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸುರಕ್ಷಿತವಾಗಿರುವಂತೆ ಭಾರತ ಸರ್ಕಾರ ಸಂದೇಶ ರವಾನಿಸಿದೆ. ಅನಗತ್ಯವಾಗಿ ಪ್ರಯಾಣಿಸಬೇಡಿ. ಸುರಕ್ಷಿತವಾಗಿರಿ ಅಂತ ಕೇಂದ್ರ ಸೂಚನೆ ನೀಡಿದೆ. ಇಸ್ರೇಲ್ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ಇರಾನ್ಗೆ ಎಚ್ಚರಿಕೆ ನೀಡಿದೆ. ತಾವು ಇಸ್ರೇಲ್ ಪರವಾಗಿ ಇರುವುದಾಗಿ ಘೋಷಿಸಿದೆ. ಇರಾನ್ ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಲೆಬನಾನ್‌ನ ಹೆಜ್ಬುಲ್ಲಾ ಉಗ್ರರ ಹೆಡೆಮುರಿ ಕಟ್ಟಿರುವ ಇಸ್ರೇಲ್, ಇದೀಗ ಇರಾನ್ ದಾಳಿಗೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:ಈತ ಹಮಾಸ್ ಉಗ್ರನಿಗಿಂತಲೂ ಡೇಂಜರ್.. ಟೂಥ್ಪೇಸ್ಟ್ನಲ್ಲಿ ವಿಷ ಇಟ್ಟು ಇಸ್ರೇಲ್ ಕೊಂದಿದ್ದು ಹೇಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ