/newsfirstlive-kannada/media/post_attachments/wp-content/uploads/2025/06/TRUMP-5.jpg)
ಯುದ್ಧ ಸದ್ಯಕ್ಕೆ ಮುಗಿಯೋ ಲಕ್ಷಣ ಕಾಣಿಸ್ತಿದ್ದು, ಅದು ದೀರ್ಘ ಕಾಲಕ್ಕೆ ಕೊಂಡೊಯ್ಯುವ ಸಾಧ್ಯತೆ ಹೆಚ್ಚುತ್ತಿದೆ. ಗಗನದಲ್ಲಿ ಇಸ್ರೇಲ್ ರೌದ್ರಾವತಾರ ತಾಳಿದ್ದು, ಇರಾನ್ ಸೇನಾ ನೆಲೆಗಳನ್ನ ಗುರಿಯಾಗಿಸಿದೆ.. ಇದೀಗ ಅಮೆರಿಕ ಕೂಡ ಇಸ್ರೇಲ್ ಜೊತೆ ಕೈಜೋಡಿಸಿದೆ.
ಮೊನ್ನೆಯಷ್ಟೆ ಬುಶತ್ ಅಣು ಸ್ಥಾವರ ಮೇಲೆ ಇಸ್ರೇಲ್ ಮುಗಿಬಿದ್ದಿತ್ತು. ಇರಾನ್ ಮೇಲಿನ ದಾಳಿಯ ಎರಡನೇ ಹಂತದಲ್ಲಿ ಇಸ್ಫಹಾನ್ ಅಣು ಕೇಂದ್ರದ ಮೇಲೆ ದಾಳಿ ನಡೆಸಿದೆ. ಎರಡು ಸೆಂಟ್ರಿಪ್ಯೂಜ್ ಉತ್ಪಾದನಾ ಕೇಂದ್ರಗಳ ಮೇಲೆ ರಾತ್ರಿ ಅಟ್ಯಾಕ್ ಮಾಡಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ. ಅಲ್ಲಿ ದೊಡ್ಡ ಮಟ್ಟದ ಹಾನಿ ಸೃಷ್ಟಿಸಿದ್ದಾಗಿ ವಿಡಿಯೋ ರಿಲೀಸ್ ಮಾಡಿದೆ..
ಸತತ ದಾಳಿಯು ಇರಾನ್ ಉತ್ಪಾದನಾ ಬಯಕೆಯ ಸಾಮರ್ಥ್ಯಕ್ಕೆ ಗಂಭೀರ ಹೊಡೆತ ಬಿದ್ದಿದೆ ಅಂತ ಹೇಳಿದೆ.. ಇಸ್ಫಹಾನ್ ಅಣು ಕೇಂದ್ರದಲ್ಲಿ ಯುರೇನಿಯಂ ಪರಿವರ್ತನಾ ವ್ಯವಸ್ಥೆ ಇದೆ ಅಂತ ಇಸ್ರೇಲ್ ತಿಳಿಸಿದೆ. ಸ್ಯಾಟ್ಲೈಟ್ ಇಮೇಜ್ ರಿಲೀಸ್ ಮಾಡಿದೆ.. ಆದ್ರೆ ಅಣು ಸೋರಿಕೆ ಆಗಿಲ್ಲ ಅಂತ ಇರಾನ್ ಸ್ಪಷ್ಟನೆ ಕೊಟ್ಟಿದೆ.
ಕಾಳರಾತ್ರಿಯಾದ ಕಾಳಗ!
ಇಸ್ರೇಲಿ ರಕ್ಷಣಾ ಪಡೆಗಳು ಶನಿವಾರ ರಾತ್ರಿ ಇರಾನ್‌ನ ನೈಋತ್ಯ ಪ್ರದೇಶ ಅಹ್ವಾಜ್ ಪ್ರದೇಶ ಗುರಿಯಾಗಿಸಿದೆ.. ಇಸ್ರೇಲ್ ಮೇಲಿನ ದಾಳಿಗಳಲ್ಲಿ ಹೆಚ್ಚು ಬಳಕೆ ಆಗಿದ್ದ ಈ ಪ್ರದೇಶದ ಮೇಲೆ ರಾತ್ರಿ ಟಾರ್ಗೆಟ್ ಮಾಡಿದೆ.. ಡಜನ್‌ಗಟ್ಟಲೆ ಮಿಲಿಟರಿ ನೆಲೆಗಳ ಮೇಲೆ ಸುಮಾರು 30 ಇಸ್ರೇಲ್ ಜೆಟ್ಗಳು 50ಕ್ಕೂ ಹೆಚ್ಚು ಕಡೆ ವಿಧ್ವಂಸಕ ದಾಳಿ ಮಾಡಿವೆ. ಮುಖ್ಯವಾಗಿ ಇರಾನ್‌ನ 120 ಕ್ಷಿಪಣಿ ಲಾಂಚ್ ಪ್ಯಾಡ್ಗಳನ್ನ ಧ್ವಂಸ ಮಾಡಿದ್ದಾಗಿ ಹೇಳಿದೆ. ರಾಡಾರ್ ಪತ್ತೆ ವ್ಯವಸ್ಥೆಗಳು, ವೈಮಾನಿಕ ಕಣ್ಗಾವಲು ತಂತ್ರಜ್ಞಾನ, ಮಿಲಿಟರಿ ಮೂಲಸೌಕರ್ಯಗಳನ್ನ ಗುರಿಯಾಗಿಸಿದೆ. ಇರಾನ್ ಸೇನೆಯ ಮೂವರು ಮುಖ್ಯ ಕಮಾಂಡರ್ಗಳನ್ನ ಇಸ್ರೇಲ್ ಫಿನಿಶ್ ಮಾಡಿದೆ.
ಇದನ್ನೂ ಓದಿ: ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್ಗೆ ಭಾರೀ ಆರ್ಥಿಕ ಹೊರೆ -ಪ್ರತಿದಿನ ಎಷ್ಟು ಕೋಟಿ ರೂ ಖರ್ಚು ಆಗ್ತಿದೆ..?
ಕಳೆದ 24 ಗಂಟೆಗಳಲ್ಲಿ ಇರಾನ್-ಇಸ್ರೇಲ್ ಒಳಗಡೆ 430 ಜನ ಸಾವನ್ನಪ್ಪಿದ್ದು, ಇರಾನ್ನಲ್ಲಿ ಈವರೆಗೆ 3,500 ಜನ ಗಾಯಗೊಂಡಿದ್ದಾರೆ ಅಂತ ಇರಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಂಘರ್ಷ ಅಂತ್ಯಗೊಳಿಸುವಂತೆ ಹಲವು ದೇಶಗಳ ಮನವಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು, ಈ ಯುದ್ಧವೂ ಸಂಘರ್ಷವನ್ನ ಹೆಚ್ಚಿಸುವುದಿಲ್ಲ.. ಸಂಘರ್ಷವನ್ನ ಶಾಶ್ವತವಾಗಿ ಕೊನೆಗೊಳಿಸಲಿದೆ ಅಂತ ಮಾರ್ಮಿಕವಾಗಿ ಹೇಳಿದ್ದಾರೆ.. ಜೊತೆಗೆ ಲಾಂಗ್ ವಾರ್ಗೆ ಇಸ್ರೇಲ್ ಸಿದ್ಧತೆ ನಡೆಸಿದೆ.. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಕಲ ತಯಾರಿ ಆರಂಭಿಸಿದೆ..
ಇರಾನ್ನಲ್ಲಿ ಕಳೆದ ಬುಧವಾರದಿಂದ ಇಂಟರ್ನೆಟ್ ಬಂದ್ ಮಾಡ್ಲಾಗಿದೆ. ಕಳೆದ 72 ಗಂಟೆಗಳಿಂದ ಸೈಬರ್ ಅಟ್ಯಾಕ್ ಆತಂಕದಿಂದ ಇಂಟರ್ನೆಟ್ ಕಂಪ್ಲೀಟ್ ಆಗಿ ಸ್ಥಗಿತ ಆಗಿದೆ. ಈ ಯುದ್ಧ ಪೂರ್ಣ ಪ್ರಮಾಣಕ್ಕೆ ತಿರುಗಿದಲ್ಲಿ ಇರಾನ್ ಸುಪ್ರೀಂ ಲೀಡರ್ ಖಮೇನಿ ಮುಗಿಸಲು ಸಂಚು ರೂಪಿಸಲಾಗ್ತಿದ್ದು, ಭವಿಷ್ಯದ ನಾಯಕತ್ವ ಸಿದ್ಧಗೊಳಿಸಲು ಉತ್ತರಾಧಿಕಾರಿ ಹುಡುಕಾಟ ನಡೆಸಿದ್ದಾರೆ ಅಂತ ಗೊತ್ತಾಗಿದೆ. ಒಟ್ಟಾರೆ, ಇರಾನ್-ಇಸ್ರೇಲ್ ಸಂಘರ್ಷ ತಾರಕಕ್ಕೇರಿದ್ದು, ಮಧ್ಯಪ್ರಾಚ್ಯ ದೇಶಗಳು ಮೌನವಹಿಸಿವೆ. ಈ ಬೆಳವಣಿಗೆ ಮುಸ್ಲಿಂ ಜಗತ್ತಿನ ನಾಯಕತ್ವದ ಶೀತಲ ಸಮರವೂ ಇಣುಕ್ತಿದೆ.
ಇದನ್ನೂ ಓದಿ: BREAKING: ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಅಧಿಕೃತ ಎಂಟ್ರಿ; ಇರಾನ್‌ನ 3 ಕಡೆ ಟ್ರಂಪ್ ಸೇನೆ ಏರ್ಸ್ಟ್ರೈಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ