/newsfirstlive-kannada/media/post_attachments/wp-content/uploads/2025/06/IRAN.jpg)
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 9 ದಿನಗಳಿಂದ ನಡೆಯುತ್ತಿದೆ. ಇಸ್ರೇಲ್ ವಾಯುದಾಳಿ ನಡೆಸ್ತಿದ್ರೆ, ಇರಾನ್ ಮಿಸೈಲ್ಗಳ ಮಳೆಯನ್ನೇ ಸುರಿಸ್ತಿದೆ.. ಸಾವು-ನೋವುಗಳ ಮೃದಂಗ ಬಾರಿಸ್ತಿದೆ.. ಇಡೀ ಜಗತ್ತು ಮಧ್ಯಪ್ರಾಚ್ಯದ ಈ ಭಯಾನಕದ ಯುದ್ಧದ ದೃಶ್ಯಗಳನ್ನ ವೀಕ್ಷಿಸ್ತಿದೆ..
8 ದಿನಗಳಲ್ಲಿ ಇಸ್ರೇಲ್ ಮೇಲೆ 500ಕ್ಕೂ ಹೆಚ್ಚು ಮಿಸೈಲ್ ದಾಳಿ!
ಮೊನ್ನೆಯಷ್ಟೆ ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಬೀರ್‌ಶೆಬಾ ನಗರದ ಸೊರೊಕಾ ಆಸ್ಪತ್ರೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು.. ಈ ಬೆನ್ನಲ್ಲೆ ಇರಾನ್‌ನ ಕ್ಷಿಪಣಿಯೊಂದು ಮಕ್ಕಳ ಡೇಕೇರ್ ಕೇಂದ್ರಕ್ಕೂ ನುಗ್ಗಿದೆ.. ಇರಾನ್ ನಡೆಸಿದ ಕ್ಷಿಪಣಿ ದಾಳಿಯ ವಿಡಿಯೋವನ್ನ ಇಸ್ರೇಲಿ ಸೇನೆ ಹಂಚಿಕೊಂಡಿದೆ.. ಇತ್ತ, ಇಸ್ರೇಲ್ ಸೇನೆಯು 3 ಮುಖಾಮುಖಿ ಕ್ಷಿಪಣಿ ಉಡಾವಣಾ ಸಾಧನಗಳನ್ನ ಧ್ವಂಸಗೊಳಿಸಿದ್ದಾಗಿ ಹೇಳಿದೆ..
ಈ ಯುದ್ಧದಲ್ಲಿ ಈವರೆಗೆ ಇರಾನ್ 500ಕ್ಕೂ ಹೆಚ್ಚು ಕ್ಷಿಪಣಿಗಳನ್ನ ಇಸ್ರೇಲ್ ಮೇಲೆ ಹಾರಿಸಿದೆ.. ಕಳೆದ ಎರಡು ದಿನದ ಹಿಂದೆ 35 ಮಿಸೈಲ್ ಹಾರಿಸಿದ್ದ ಇರಾನ್, ಕಳೆದ ಶುಕ್ರವಾರದಿಂದ ಈವರೆಗೆ 520 ಕ್ಷಿಪಣಿಗಳು ನುಗ್ಗಿಸಿದೆ.. ಮುಖ್ಯವಾಗಿ ಇಸ್ರೇಲ್ ಆಕ್ರಮಿತ ಪ್ರದೇಶಗಳ ಮೇಲೂ ಇರಾನ್‌ನ ಮಿಸೈಲ್ಗಳನ್ನ ಸುರಿಸಿದೆ.. ಇಸ್ರೇಲ್‌ನ ಹೈಫಾ ನಗರದ ಮೇಲಂತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಅಪ್ಪಳಿಸಿವೆ..
ಇದನ್ನೂ ಓದಿ: ಭಾರತ- ಕೆನಡಾ ಮತ್ತೆ ದೋಸ್ತಿ, ಅಮೆರಿಕಾಕ್ಕೆ ಕರೆದರೂ ಬರಲ್ಲ ಎಂದ ಪ್ರಧಾನಿ ಮೋದಿ!!
ಇರಾಕ್, ಸಿರಿಯಾ-ಜೋರ್ಡಾನ್ ವಾಯುಗಡಿಯಲ್ಲಿ ಆರ್ಭಟ
ಈ ಯುದ್ಧ ಕೇವಲ ಇರಾನ್ ಮತ್ತು ಇಸ್ರೇಲ್ಗೆ ಸೀಮಿತವಾಗಿಲ್ಲ.. ಅದು ಮಧ್ಯಪ್ರಾಚ್ಯಗಳ ಇತರ ದೇಶಗಳ ಸೀಮೆಗಳ ಉಲ್ಲಂಘನೆ ಆಗುವ ಸಾಧ್ಯತೆ ಇದೆ.. ನಿನ್ನೆ ಸರಿ ಸುಮಾರು 50 ಇಸ್ರೇಲ್ ಯುದ್ಧ ವಿಮಾನಗಳು ನಮ್ಮ ವಾಯುಪ್ರದೇಶವನ್ನ ಉಲ್ಲಂಘಿಸಿವೆ ಅಂತ ಇರಾಕ್ ಆರೋಪಿಸಿದೆ.. ಬಸ್ರಾ, ನಜಾಫ್ ಮತ್ತು ಕರ್ಬಲಾ ನಗರಗಳ ಮೇಲೆ ಹಾರಾಡಿವೆ.. ಸಿರಿಯನ್-ಜೋರ್ಡಾನ್ ಗಡಿ ಪ್ರದೇಶಗಳಲ್ಲೂ ಇಸ್ರೇಲ್ ಯುದ್ಧ ವಿಮಾನಗಳ ಆರ್ಭಟ ಕಾಣಿಸಿದೆ..
ಅಮೆರಿಕಾ ಬಾರದಿದ್ದರೂ ಸಿಂಗಲ್ ಆಗಿ ಹ್ಯಾಂಡಲ್!
ಇಸ್ರೇಲ್ ಪರವಾಗಿ ಯುದ್ಧರಂಗಕ್ಕೆ ಅಮೆರಿಕಾ ರಂಗಪ್ರವೇಶದ ಬಗ್ಗೆ ಗೊಂದಲ ಮುಂದುವರಿದಿದೆ.. ಅಮೆರಿಕಾದ ಈ ನಡೆ ಬಗ್ಗೆ ವಿಶ್ವದಲ್ಲಿ ಕುತೂಹಲಕ್ಕೆ ಕಾರಣ ಆಗಿದೆ.. ಇಸ್ರೇಲ್ನ್ನ ಒಂಟಿಯಾಗಿ ಯುದ್ಧಕ್ಕೆ ನುಗ್ಗಿಸಿ ಸೈಲೆಂಟ್ ಆಯ್ತಾ ಅನ್ನೋ ಚರ್ಚೆ ನಡೀತಿದೆ.. ಆದ್ರೆ, ನಿನ್ನೆ ಶ್ವೇತಭವನದಲ್ಲಿ ಉನ್ನತ ಅಧಿಕಾರಿಗಳ ಜೊತೆ ಅಧ್ಯಕ್ಷ ಟ್ರಂಪ್, ರಾಷ್ಟ್ರೀಯ ಭದ್ರತಾ ಸಭೆಯನ್ನ ನಡೆಸಿದ್ದಾರೆ.. ಅಮೆರಿಕಾ ಮಧ್ಯಪ್ರವೇಶಿಸದಿರಲು ನಿರ್ಧರಿಸಿದರೆ ಇಸ್ರೇಲ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಿದ್ಧ.. ಏನು ಮಾಡಬೇಕೆಂದು ನಮಗೆ ತಿಳಿದಿದೆ ಅಂತ ಇಸ್ರೇಲ್ ಐಸಾಕ್ ಹೆರ್ಜಾಗ್ ಹೇಳಿದ್ದಾರೆ..
ಇದನ್ನೂ ಓದಿ: Israel-Iran War: ಯುದ್ಧಭೂಮಿಗೆ ಟ್ರಂಪ್ ಎಂಟ್ರಿ ಗೊಂದಲ.. ಅಮೆರಿಕಗೆ ರಷ್ಯಾ, ಕೋರಿಯಾ ಎಚ್ಚರಿಕೆ..
ಈ ಹೇಳಿಕೆ ಹೊರಬಿದ್ದ ಕೆಲವೇ ಘಂಟೆಗಳಲ್ಲಿ 60ಕ್ಕೂ ಹೆಚ್ಚು ಇಸ್ರೇಲ್ ಫೈಟರ್ಜೆಟ್ಗಳು ಆಗಸದಲ್ಲಿ ಘೀಳಿಟ್ಟವು.. ಟೆಹ್ರಾನ್‌ನ ಹೃದಯಭಾಗಕ್ಕೆ ನುಗ್ಗಿದ ಜೆಟ್ಗಳು, ಬಹು ಮಿಲಿಟರಿ ಬೇಸ್ಗಳ ಮೇಲೆ ಬಾಂಬ್ಗಳ ಮಳೆ ಸುರಿಸಿದ್ದಾಗಿ ಇಸ್ರೇಲ್ ಹೇಳ್ಕೊಂಡಿದೆ.. ಟೆಹ್ರಾನ್ನಲ್ಲಿ ಶುಕ್ರವಾರ ರಾತ್ರಿ 8:45ಕ್ಕೆ ಭಾರೀ ಸ್ಫೋಟ ಕೇಳಿಸಿದೆ.. ನೈಋತ್ಯ ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದಲ್ಲಿ ಹಲವಾರು ಸ್ಫೋಟಗಳು ವರದಿಯಾಗಿದೆ..
ಯುದ್ಧ ಹೊರೆ!
- ಇರಾನ್ ಜೊತೆಗಿನ ಯುದ್ಧದಲ್ಲಿ ಇಸ್ರೇಲ್ಗೆ ಭಾರೀ ಆರ್ಥಿಕ ಹೊರೆ
- ಪ್ರತಿದಿನ ಸುಮಾರು 6 ಸಾವಿರದ 300 ಕೋಟಿ ರೂಪಾಯಿ ಖರ್ಚು
- ಕಳೆದ 8 ದಿನದಲ್ಲಿ ಸುಮಾರು 50 ಸಾವಿರ ಕೋಟಿ ರೂಪಾಯಿ ವ್ಯಯ
- ಯುದ್ಧದ ಮೊದಲ 2 ದಿನದಲ್ಲಿ ₹12 ಸಾವಿರದ 200 ಕೋಟಿ ಖರ್ಚು
- ವಾಯುದಾಳಿ, ಕ್ಷಿಪಣಿ ಮತ್ತು ಮದ್ದುಗುಂಡುಗಳಿಗಾಗಿ ಇಸ್ರೇಲ್ ವೆಚ್ಚ
- ವಾಯು ರಕ್ಷಣಾ ವ್ಯವಸ್ಥೆಗೂ ಸಾಕಷ್ಟು ಹಣ ವ್ಯಯಿಸ್ತಿರುವ ಇಸ್ರೇಲ್
ಒಟ್ಟಾರೆ, ಒಂದ್ಕಡೆ ಯುದ್ಧ ನಡೀತಿದೆ.. ಯುದ್ಧತಂತ್ರ ಕೇವಲ ರಣರಂಗದಲ್ಲಿ ಮಾತ್ರವಲ್ಲ, ಸಂಧಾನ ಮಾತುಕತೆಯ ಟೇಬಲ್ ಮೇಲೂ ಆಗ್ತಿದೆ.
ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ