/newsfirstlive-kannada/media/post_attachments/wp-content/uploads/2025/06/US-B2-3.jpg)
ಇರಾನ್-ಇಸ್ರೇಲ್ ನಡುವಿನ ಯುದ್ಧರಂಗಕ್ಕೆ ಕೊನೆಗೂ ಅಮೆರಿಕಾ ಎಂಟ್ರಿ ಕೊಟ್ಟಿದೆ. ಇರಾನ್ ದೇಶಕ್ಕೆ ಟ್ರಂಪ್ ಎರಡು ವಾರದ ಗಡುವು ನೀಡಿದ ಬೆನ್ನಲ್ಲೇ ವಾಯುಸೇನೆ ಅಟ್ಯಾಕ್ ಮಾಡಿರೋದು ಇರಾನ್ಗೆ ನುಂಗಲಾರದ ತುತ್ತಾಗಿದೆ. ಇರಾನ್‌ನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಫೋರ್ಡೋ, ನಟಾಂಜ್, ಎಸ್ಫ್ಹಾನ್ ಮೇಲೆ ಅಮೆರಿಕಾ ದಾಳಿ ಮಾಡಿದೆ. ದಾಳಿಯ ನಂತರ ಎಲ್ಲಾ ವಿಮಾನಗಳು ವಾಪಸ್ ಆಗಿವೆ.
ಇಸ್ರೇಲ್-ಇರಾನ್ ಯುದ್ಧಕ್ಕೆ ಸಂಬಂಧಿಸಿದ 10 ಪ್ರಮುಖ ವಿಚಾರಗಳು
- ಟ್ರಂಪ್ ಪ್ರತಿಕ್ರಿಯೆ: ಇಸ್ರೇಲ್ ಪರ ನಿಂತಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಯುದ್ಧ ಸಾರಿರೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿ ಮಾಡಿರೋ ಬಗ್ಗೆ ಪೋಸ್ಟ್ ಮಾಡಿರೋ ಟ್ರಂಪ್, ಇರಾನ್‌ನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ನಾವು ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಈಗ ಎಲ್ಲಾ ವಿಮಾನಗಳು ಇರಾನ್ ವಾಯುಪ್ರದೇಶದ ಹೊರಗೆ ಹೋಗ್ತಿವೆ ಅಂತ ಬರೆದುಕೊಂಡಿದ್ದಾರೆ.
- ಬಾಹುಬಲಿ ನಿಯೋಜನೆ: ಬಿ-2 ಬಾಂಬರ್‌ಗಳನ್ನ ಪೆಸಿಫಿಕ್ ದ್ವೀಪ ಗುವಾಮ್‌ಗೆ ರವಾನಿಸಿದಂತೆ ಮಾಡಿ ಇರಾನ್ ಮೇಲೆ ಅಮೆರಿಕಾ ದಾಳಿ ನಡೆಸಿದೆ. ಈ ಮೂಲಕ ರಣರಂಗಕ್ಕೆ ಅಮೆರಿಕಾ ಎಂಟ್ರಿ ಆಗಿದೆ. 6 ಸಾವಿರ ನಾಟಿಕಲ್ ಮೈಲಿಗಿಂದ ಹೆಚ್ಚು ಹಾರಾಟ ಸಾಮರ್ಥ್ಯ ಹೊಂದಿರುವ ಈ ವಿಮಾನಗಳು, ಗಾಳಿಯಲ್ಲಿ ಇಂಧನ ತುಂಬುವ ತಂತ್ರಜ್ಞಾನ ಹೊಂದಿದೆ. ಸುಮಾರು 40,000 ಪೌಂಡ್ ತೂಕದ ಬಾಂಬ್ ಹೊತ್ತೊಯ್ಯವ ಸಾಮರ್ಥ್ಯವನ್ನ ಬಿ2 ಬಾಂಬರ್ ಹೊಂದಿದ್ದು, 50 ಸಾವಿರ ಅಡಿಗಳ ಮೇಲಿಂದ ದಾಳಿ ನಡೆಸುವ ಶಕ್ತಿಶಾಲಿ ಆಗಿದೆ. ಇದು ಜಗತ್ತಿನಲ್ಲೇ ಅತ್ಯಂತ ವೆಚ್ಚದಾಯಕ ಬಾಂಬರ್ ಆಗಿದ್ದು, ಬಿ 2 ಬಾಂಬರ್ಗೆ 2.1 ಬಿಲಿಯನ್ ಡಾಲರ್ ವ್ಯಯಿಸಲಾಗಿದೆ. ರಾಡಾರ್ ಕಣ್ತಪ್ಪಿಸಿ ಅಟ್ಯಾಕ್ ಮಾಡುವ ಈ ಬಾಂಬರ್, ಕಡಿಮೆ ಗೋಚರತೆ ತಂತ್ರಜ್ಞಾನ ಹೊಂದಿದೆ.
- ಬೆಳಗಿನ ಜಾವ ದಾಳಿ: ಇರಾನ್ ಮೇಲಿನ ದಾಳಿಗೆ ಅಮೆರಿಕ ಬಂಕರ್ ಬಸ್ಟರ್ ಬಾಂಬ್‌ಗಳು, 30 ಟೊಮಾಹಾಕ್ ಕ್ಷಿಪಣಿಗಳನ್ನು ಬಳಸಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಟೊಮಾಹಾಕ್ ಕ್ಷಿಪಣಿಯು ಅಮೆರಿಕಾ ಅಭಿವೃದ್ಧಿಪಡಿಸಿದ ದೀರ್ಘ-ಶ್ರೇಣಿಯ, ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. ಬೆಳಗಿನ ಜಾವ 03:45ಕ್ಕೆ ಈ ದಾಳಿ ನಡೆದಿದೆ. ಇತ್ತ ಪರಮಾಣು ತಾಣಗಳ ಮೇಲಿನ ದಾಳಿಯನ್ನ ಇರಾನ್ ಕೂಡಾ ಒಪ್ಪಿಕೊಂಡಿದೆ.
- ಯಾವುದೇ ಹಾನಿ ಆಗಿಲ್ಲ: ತಡರಾತ್ರಿ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆದಿದೆ ಅಂತ ಇರಾನ್‌ನ ಇಸ್ಫಹಾನ್ ಪ್ರಾಂತ್ಯದ ಭದ್ರತಾ ಉಪ ಗವರ್ನರ್ ಅಕ್ಬರ್ ಸಲೇಹಿ ಹೇಳಿದ್ದಾರೆ. ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿ ಹಲವಾರು ಸ್ಫೋಟಗಳು ಕೇಳಿಸಿವೆ.. ಈ ಮೂರು ಪರಮಾಣು ತಾಣಗಳಲ್ಲಿ ವಿಕಿರಣಕ್ಕೆ ಕಾರಣವಾಗುವ ಯಾವುದೇ ವಸ್ತುಗಳು ಇಲ್ಲ ಅಂತ ಹೇಳಿದ್ದಾರೆ. ದಾಳಿಗೂ ಮುಂಚೆನೇ ಪರಮಾಣು ಸಾಮಗ್ರಿಗಳನ್ನು ಸ್ಥಳಾಂತರಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ.
- ಇಸ್ರೇಲ್ ಪ್ರತಿಕ್ರಿಯೆ: ಇರಾನ್ ಮೇಲಿನ ಅಮೆರಿಕದ ದಾಳಿಗೆ ಇಸ್ರೇಲ್ ಪ್ರತಿಕ್ರಿಯಿಸಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು, ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಅಧ್ಯಕ್ಷ ಟ್ರಂಪ್, ನಾನು ಮತ್ತು ಇಸ್ರೇಲ್ ಜನರು ನಿಮಗೆ ಧನ್ಯವಾದಗಳು ಹೇಳ್ತಿದ್ದೀವಿ. ಟ್ರಂಪ್ ಅವರ ನಾಯಕತ್ವವು ಇತಿಹಾಸದ ತಿರುವು ಸೃಷ್ಟಿಸಿದೆ ಅಂತ ಬಣ್ಣಿಸಿದ್ದಾರೆ. ಟ್ರಂಪ್ ನಿರ್ಧಾರವು, ಮಧ್ಯಪ್ರಾಚ್ಯ ಮತ್ತು ಅದರಾಚೆಗೆ, ಭವಿಷ್ಯದಲ್ಲಿ ಶಾಂತಿ ಕೊಂಡೊಯ್ಯಲು ಸಹಾಯ ಆಗಲಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಟ್ರಂಪ್ ಎಚ್ಚರಿಕೆ: ದಾಳಿ ಬಳಿಕ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್ ನಾವು ಮತ್ತು ಇಸ್ರೇಲಿ ಪ್ರಧಾನಿ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ ಅಂತ ಹೇಳಿದ್ದಾರೆ. ಜೊತೆಗೆ ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ನಾನು ಧನ್ಯವಾದ ಹೇಳಲು ಮತ್ತು ಅಭಿನಂದಿಸಲು ಬಯಸುತ್ತೇನೆ . ಬಹುಶಃ ಯಾವುದೇ ತಂಡವು ಹಿಂದೆಂದೂ ಮಾಡದ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಈಗಲೂ ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ರಾಷ್ಟ್ರಕ್ಕೆ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಜಗತ್ತಿನ ನಂಬರ್ ಒನ್ ಭಯೋತ್ಪಾದಕ ರಾಷ್ಟ್ರದ ಪರಮಾಣು ಬಾಂಬ್ ತಯಾರಿಕೆಯನ್ನು ತಡೆಯುವುದು ಮುಖ್ಯವಾಗಿತ್ತು. ಈ ನಿಟ್ಟಿನಲ್ಲಿ ಅಮೆರಿಕಾ ದಾಳಿ ಮಾಡಿದೆ. ಇದು ಜಾಗತಿಕ ಭದ್ರತೆಗೆ ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
- ಅಮೆರಿಕಾಕ್ಕೆ ಹೌತಿ ಉಗ್ರರು ಬೆದರಿಕೆ ಒಡ್ಡಿದ್ದಾರೆ.. ರೆಡ್ ಸೀನಲ್ಲಿ ರಕ್ತಪಾತದ ಎಚ್ಚರಿಕೆ ನೀಡಿರುವ ಹೌತಿ ಮುಖ್ಯಸ್ಥ, ಇಸ್ರೇಲ್ನ್ನ ಬೆಂಬಲಿಸಿ ಯುದ್ಧಕ್ಕೆ ಬಂದಲ್ಲಿ ಅಮೆರಿಕಾದ ಶಿಪ್ಗಳ ಮೇಲೆ ದಾಳಿ ನಡೆಸೋದಾಗಿ ಬೆದರಿಕೆ ಒಡ್ಡಿದೆ.
- 430 ಜನ ನಿಧನ: ಮಧ್ಯಪ್ರಾಚ್ಯದ ರಣಭೀಕರ ಕದನದಲ್ಲಿ ಇಸ್ರೇಲ್ ಜೆಟ್ಗಳು, ಮತ್ತೊಂದು ನ್ಯೂಕ್ಲಿಯರ್ ಸೈಟ್ ಮೇಲೆ ದಾಳಿ ನಡೆಸಿದೆ.. ಮೊನ್ನೆಯಷ್ಟೆ ಬುಶತ್ ಅಣು ಸ್ಥಾವರ ಮೇಲೆ ಇಸ್ರೇಲ್ ಮುಗಿಬಿದ್ದಿತ್ತು.. ಇರಾನ್ ಮೇಲಿನ ದಾಳಿಯ ಎರಡನೇ ಹಂತದಲ್ಲಿ ಇಸ್ಫಹಾನ್ ಅಣು ಕೇಂದ್ರದ ಮೇಲೆ ದಾಳಿ ನಡೆಸಿದೆ. ಎರಡು ಸೆಂಟ್ರಿಪ್ಯೂಜ್ ಉತ್ಪಾದನಾ ಕೇಂದ್ರಗಳ ಮೇಲೆ ರಾತ್ರಿ ಅಟ್ಯಾಕ್ ಮಾಡಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ. ಅಲ್ಲಿ ದೊಡ್ಡ ಮಟ್ಟದ ಹಾನಿ ಸೃಷ್ಟಿಸಿದ್ದಾಗಿ ವಿಡಿಯೋ ರಿಲೀಸ್ ಮಾಡಿದೆ.. ಕಳೆದ 24 ಗಂಟೆಗಳಲ್ಲಿ ಇರಾನ್ ಇಸ್ರೇಲ್ ಒಳಗಡೆ 430 ಜನ ಸಾವನ್ನಪ್ಪಿದ್ದು, ಇರಾನ್ನಲ್ಲಿ ಈವರೆಗೆ 3,500 ಜನ ಗಾಯಗೊಂಡಿದ್ದಾರೆ ಅಂತ ಇರಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
- ನ್ಯೂಯಾರ್ಕ್‌ನಲ್ಲಿ ಉದ್ವಿಘ್ನ: ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ನಡೆಸಿದ ಬೆನ್ನಲ್ಲೇ ಕೋಪಗೊಂಡ ಇಸ್ಲಾಮಿಸ್ಟ್ ಅಮೆರಿಕಾದ ನ್ಯೂಯಾರ್ಕ್ ನಗರಕ್ಕೆ ಲಗ್ಗೆ ಇಟ್ಟಿದ್ದಾರೆ. ನ್ಯೂಯಾರ್ಕ್ ನಗರದ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಇಸ್ಲಾಮಿಸ್ಟ್ ದಾಂಧಲೆ ಮಾಡಿದ್ದು, ಪ್ರತಿಭಟನೆ ಮಾಡಿದ್ದಾರೆ. ಇದ್ರಿಂದ ನ್ಯೂಯಾರ್ಕ್‌ನಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ.
- ದೇಶದ ರಾಜಕಾರಣದಲ್ಲೂ ಜಟಾಪಟಿ: ಇಸ್ರೇಲ್ ಮತ್ತು ಇರಾನ್ ಯುದ್ಧ, ದೇಶದ ರಾಜಕಾರಣದಲ್ಲೂ ಜಟಾಪಟಿ ಸೃಷ್ಟಿಸ್ತಿದೆ. ಕೇಂದ್ರದ ಮೌನವನ್ನ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ. ಇರಾನ್ ಮೇಲಿನ ದಾಳಿಯನ್ನು ಖಂಡಿಸಿದ ಸೋನಿಯಾ, ಇಸ್ರೇಲ್ ನಡೆಸುತ್ತಿರುವ ದಾಳಿಯ ಬಗ್ಗೆ ಭಾರತದ ಮೌನವು ಭಾರತದ ನೈತಿಕ, ರಾಜತಾಂತ್ರಿಕ ಸಂಪ್ರದಾಯಗಳಿಗೆ ವಿರುದ್ಧವಾದದ್ದು ಅಂತ ಟೀಕಿಸಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎಂಬ 2 ದೇಶಗಳು ಇರಬೇಕೆಂಬುದು ಭಾರತದ ದೀರ್ಘಕಾಲದ ನೀತಿ.. ಈಗ ಭಾರತ ಸರ್ಕಾರ ಇದನ್ನ ಕೈ ಬಿಟ್ಟಿದೆ ಅಂತ ಕಿಡಿಕಾರಿದ್ದಾರೆ. ಭಾರತದ ಮೌನವು ಧ್ವನಿಯನ್ನು ಕಳೆದುಕೊಂಡಿದ್ದನ್ನು ಮಾತ್ರ ಪ್ರತಿನಿಧಿಸಲ್ಲ, ಮೌಲ್ಯಗಳ ಶರಣಾಗತಿಯನ್ನು ಪ್ರತಿನಿಧಿಸುತ್ತದೆ ಅಂತ ಸೋನಿಯಾ ವಾಗ್ದಾಳಿ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ