/newsfirstlive-kannada/media/post_attachments/wp-content/uploads/2024/10/Benjamin-netanayahu.jpg)
ಮಧ್ಯಪ್ರಾಚ್ಯದಲ್ಲಿ ಕವಿದಿರುವ ಯುದ್ಧ ಕಾರ್ಮೋಡ ಸದ್ಯಕ್ಕೆ ಕರಗುವಂತೆ ಕಾಣುತ್ತಿಲ್ಲ. ದಿನೇ ದಿನೇ ಪರಿಸ್ಥಿತಿಗಳು ಬಿಗಡಾಯಿಸುತ್ತಲೇ ಸಾಗುತ್ತಿವೆ. ಹಮಾಸ್ ಹಾಗೂ ಹಿಜ್ಬುಲ್ಲಾ ಮುಖಂಡರ ಸಾಲು ಸಾಲು ಹತ್ಯೆಗಳ ಬಳಿಕ ಇರಾನ್ ಈಗ ಇಸ್ರೇಲ್ ವಿರುದ್ಧ ಸಮರ ಸಾರಿದೆ. ಅದರ ಭಾಗವಾಗಿ ಈಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ನಿವಾಸದ ಬಳಿ ಎರಡು ಫ್ಲಾಶ್ ಬಾಂಬ್ಗಳು ಸ್ಫೋಟಗೊಂಡಿದ್ದು. ಹಲವು ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಬಾಂಬ್ ಸ್ಫೋಟದಿಂದ ನೇತನ್ಯಾಹು ಹಾಗೂ ಅವರ ಕುಟುಂಬದ ಯಾವುದೇ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:ಎಂಥಾ ಕಾಲ ಬಂತು.. ಗಿಡದ ಜೊತೆ ಡೇಟಿಂಗ್, ರೊಮ್ಯಾನ್ಸ್; ಈ ಹುಡುಗಿ ಕಥೆ ಕೇಳಿದ್ರೆ ಕಳೆದೇ ಹೋಗ್ತೀರಾ!
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಇಸ್ರೇಲ್ನ ರಕ್ಷಣಾ ಸಚಿವ ಕಟ್ಜ್. ಇದು ಎಲ್ಲ ಕೆಂಪು ರೇಖೆಗಳನ್ನು ದಾಟಿದ ಘಟನೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರನ್ನು ಇರಾನ್ ಆಗಲಿ ಅಥವಾ ಅದರ ಪ್ರತಿನಿಧಿಗಳಾಗಲಿ ಹತ್ಯೆ ಮಾಡುವುದು ಸಾಧ್ಯವಿಲ್ಲ. ಈಗಾಗಲೇ ರಕ್ಷಣಾ ಪಡೆಗೆ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳಿ ಎಂದು ಹೇಳಲಾಗಿದೆ ಅಂತ ಕಟ್ಜ್ ಹೇಳಿದ್ದಾರೆ.
ಇದನ್ನೂ ಓದಿ:ಹೋಮ್ವರ್ಕ್ ಮಾಡಲು AI ಮೊರೆ ಹೋದ ಯುವಕ; ಗೂಗಲ್ ಚಾಟ್ಬೋಟ್ ಪ್ರತಿಕ್ರಿಯೆ ನೋಡಿ ಕಂಗಾಲು!
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಸೆಕ್ಯೂರಿಟಿ ಮಿನಿಸ್ಟರ್ ಇಟ್ಮಾರ್ ಬೆನ್, ಪ್ರಧಾನಿ ನೇತನ್ಯಾಹು ಮನೆಯ ಮೇಲೆ ನಡೆದ ದಾಳಿ ಎಲ್ಲ ಸೀಮೆಯನ್ನು ದಾಟಿದಂತಿದೆ ಇದನ್ನು ಇಸ್ರೇಲ್ ಎಂದಿಗೂ ಕೂಡ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬೆಂಜಮಿನ್ ನೇತನ್ಯಾಹು ನಿವಾಸದ ಬಳಿ ನಡೆದ ಈ ಘಟನೆ ಅಕ್ಟೋಬರ್ನಲ್ಲಿ ನಡೆದ ಘಟನೆಯನ್ನು ಮತ್ತೆ ನೆನಪಿಸುತ್ತಿದೆ. ಅಕ್ಟೋಬರ್ನಲ್ಲಿ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಒಂದು ಹಾರಾಟ ನಡೆಸಿದ ಆತಂಕ ಸೃಷ್ಟಿಸಿತ್ತು. ಈಗ ನೇತನ್ಯಾಹು ಮನೆಯ ಬಳಿ ಎರಡು ಫ್ಯಾಶ್ ಬಾಂಬ್ಗಳು ಸ್ಫೋಟಗೊಂಡಿವೆ. ಇದು ಇರಾನ್ ಮತ್ತು ಇಸ್ರೇಲ್ ನಡುವಿನ ಸಮರಕ್ಕೆ ಮತ್ತೊಂದು ವೇದಿಕೆಯಾಗಲಿದೆಯಾ ಅನ್ನೋ ಅನುಮಾನಗಳು ಕೂಡ ಮೂಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ