Israel-Iran War: ಯುದ್ಧಭೂಮಿಗೆ ಟ್ರಂಪ್​ ಎಂಟ್ರಿ ಗೊಂದಲ.. ಅಮೆರಿಕಗೆ ರಷ್ಯಾ, ಕೋರಿಯಾ ಎಚ್ಚರಿಕೆ..

author-image
Ganesh
Updated On
BREAKING: ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ಅಧಿಕೃತ ಎಂಟ್ರಿ; ಇರಾನ್​​ನ 3 ಕಡೆ ಟ್ರಂಪ್ ಸೇನೆ ಏರ್​​ಸ್ಟ್ರೈಕ್..!
Advertisment
  • ಎರಡು ವಾರದಲ್ಲಿ ಟ್ರಂಪ್ ನಿರ್ಧಾರ, ನೆತನ್ಯಾಹುಗೆ ಹಿನ್ನಡೆ
  • ಇಸ್ರೇಲ್​​ಗೆ ನುಗ್ಗಿದ 450 ಬ್ಯಾಲಿಸ್ಟಿಕ್​​ ಮಿಸೈಲ್​​, ಸಾವಿರ ಡ್ರೋನ್
  • ಅರಾಕ್‌ ಹೇವಿ ವಾಟರ್​ ರಿಯಾಕ್ಟರ್‌ ಮೇಲೆ ಇಸ್ರೇಲ್​​ ಪ್ರಹಾರ!

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇರಾನ್‌ನ ರಿಯಾಕ್ಟರ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ಅಮೆರಿಕಾ ಏನಾದ್ರೂ ಇಸ್ರೇಲ್​ ಬೆಂಬಲಕ್ಕೆ ಬಂದ್ರೆ, ಪರಿಸ್ಥಿತಿ ನೆಟ್ಟಗಿರಲ್ಲ ಅಂತ ಇರಾನ್ ಎಚ್ಚರಿಸಿದೆ..

1 ಸಾವಿರ ಡ್ರೋನ್​​ ಅಬ್ಬರ

ಇಸ್ರೇಲ್‌ನ ವಾಯು ಪ್ರತಿರಕ್ಷಣಾ ವ್ಯವಸ್ಥೆಯನ್ನ ಭೇದಿಸಿ ಒಳ ನುಗ್ಗಿದ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್‌ಗಳು ರಾಜಧಾನಿ ಟಲ್‌ ಅವೀವ್​ ಸೇರಿ ಹಲವೆಡೆ ವಿಧ್ವಂಸಕವನ್ನೆ ಸೃಷ್ಟಿಸಿವೆ. ಇಸ್ರೇಲ್ ಮೇಲೆ ಬರೋಬ್ಬರಿ 450ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 1,000 ಡ್ರೋನ್‌ಗಳನ್ನ ಇರಾನ್​​​ ಹಾರಿಸಿದೆ..

ಇಸ್ರೇಲ್​​-ಇರಾನ್​​ ರಕ್ತಪಾತ!

  • ಇಸ್ರೇಲ್‌ನ ಬೀರ್‌ಶೆಬಾ ನಗರದ ಸೊರೊಕಾ ಆಸ್ಪತ್ರೆ ಮೇಲೆ ಇರಾನ್ ದಾಳಿ
  •  ಬೀರ್‌ಶೆಬಾ, ಟೆಲ್ ಅವೀವ್, ರಾಮತ್ ಗ್ಯಾನ್ & ಹೊಲೊನ್ ನಗರ ಗುರಿ
  •  ಸೊರೊಕಾ ಆಸ್ಪತ್ರೆ ಬಳಿಯ ಇಸ್ರೇಲ್​ ಗುಪ್ತಚರ ಪ್ರಧಾನ ಕಚೇರಿ ಟಾಲರ್ಗೆಟ್​​
  •  ಮಧ್ಯ ಇಸ್ರೇಲ್‌ನ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡದ ಮೇಲೆ ಕ್ಷಿಪಣಿ ಅಟ್ಯಾಕ್​​​
  •  ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಗೆ ಸರಿ ಸುಮಾರು 176 ಜನರು ಗಾಯ
  •  ಇರಾನ್‌ನಲ್ಲಿ ಇಸ್ರೇಲ್​ ದಾಳಿಗೆ ಒಟ್ಟು 639 ಜನ ಸಾವು, 1,329 ಜನ ಗಾಯ

ಇರಾನ್‌ನ ಅರಾಕ್‌ ಹೇವಿ ವಾಟರ್​ ರಿಯಾಕ್ಟರ್‌ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್​​​ ಹೇಳಿದೆ.. ಅಣ್ವಸ್ತ್ರ ತಯಾರಿ ಯೋಜನೆಗೆ ಈ ಘಟಕ ಬಳಸದಂತೆ ತಡೆದಿದ್ದಾಗಿ ಘೋಷಿಸಿದೆ.. ಅಲ್ಲದೆ, ಇರಾನ್‌ನ ಸುಮಾರು ಮೂರನೇ ಎರಡರಷ್ಟು ಕ್ಷಿಪಣಿ ಉಡಾವಣಾ ಯಂತ್ರ ನಾಶಪಡಿಸಿದ್ದಾಗಿ ತಿಳಿಸಿದೆ..

ಇದನ್ನೂ ಓದಿ: ಭಾರತ- ಕೆನಡಾ ಮತ್ತೆ ದೋಸ್ತಿ, ಅಮೆರಿಕಾಕ್ಕೆ ಕರೆದರೂ ಬರಲ್ಲ ಎಂದ ಪ್ರಧಾನಿ ಮೋದಿ!!

ರಣಾಂಗಣ ಪ್ರವೇಶಕ್ಕೆ ಟ್ರಂಪ್​​ ಮನದಲ್ಲೇ ಗೊಂದಲ?

ಶೀಘ್ರದಲ್ಲೇ ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾ ತಮ್ಮ ಜೊತೆ ಸೇರಲಿದೆ ಅಂತ ಇಸ್ರೇಲ್ ಹೇಳ್ತಿದೆ. ಮುಂದಿನ 24-48 ಗಂಟೆಗಳಲ್ಲಿ ಅಮೆರಿಕಾ ನಿರ್ಧಾರ ತೆಗೆದುಕೊಳ್ಳಲಿದೆ ಅಂತ ಹೇಳಿದ್ದು, ಪರಿಸ್ಥಿತಿ ವಿಷಮಿಸುವ ಸಾಧ್ಯತೆ ಇದೆ.. ಆದ್ರೆ, ಇರಾನ್ ಮೇಲೆ ದಾಳಿ ಮಾಡಬೇಕೆ ಬೇಡವೇ ಎಂಬುದನ್ನು ಟ್ರಂಪ್ 2 ವಾರಗಳಲ್ಲಿ ನಿರ್ಧರಿಸಲಿದ್ದಾರೆ ಅಂತ ಶ್ವೇತಭವನ ಹೇಳಿದೆ. ಹೀಗಾಗಿ ಇಸ್ರೇಲ್​​ಗೆ ಒಂದು ರೀತಿಯಲ್ಲಿ ಹಿನ್ನಡೆ ಆಗಿದೆ..

ಇತ್ತ ಅಮೆರಿಕಾದ ಮಿಲಿಟರಿ ಹಸ್ತಕ್ಷೇಪಕ್ಕೆ ರಷ್ಯಾ, ಚೀನಾ, ಉತ್ತರ ಕೋರಿಯಾ ಕ್ಯಾತೆ ತೆಗೆದಿವೆ.. ಬಲಪ್ರಯೋಗದಿಂದ ವಿವಾದ ಪರಿಹರಿಸಲು ಸಾಧ್ಯವಿಲ್ಲ ಅಂತ ವಾದಿಸಿವೆ. ಅಮೆರಿಕಾ ಈ ಯುದ್ಧಕ್ಕೆ ಧುಮುಕಿದರೆ ಅದು ಗಂಭೀರ ಪರಿಣಾಮ ಬೀರಬಹುದು ಅಂತ ರಷ್ಯಾ ಹೇಳಿದೆ. ಒಟ್ಟಾರೆ, ಇರಾನ್​-ಇಸ್ರೇಲ್​​ ಯುದ್ಧ ಮತ್ತೊಂದು ಮಹಾಯುದ್ಧಕ್ಕೆ ಮುನ್ನುಡಿ ಬರೆಯದಿರಲಿ.

ಇದನ್ನೂ ಓದಿ: ಪೈಲಟ್‌ ಆಗುವುದು ಹೇಗೆ.. ವಿದ್ಯಾರ್ಥಿಗಳು ಇದಕ್ಕಾಗಿ ಯಾವ ಕೋರ್ಸ್​ ಮಾಡಬೇಕು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment