/newsfirstlive-kannada/media/post_attachments/wp-content/uploads/2025/06/TRUMP-7.jpg)
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ನೇರವಾಗಿ ಎಂಟ್ರಿ ನೀಡಿದೆ. ಇರಾನ್‌ನ 3 ಪರಮಾಣು ತಾಣಗಳ ಮೇಲೆ ಅಮೆರಿಕ ಏರ್​ಸ್ಟ್ರೈಕ್ ಮಾಡಿದೆ. ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೊ (Fordow), ನಟಾಂಜ್ (Natanz) ಮತ್ತು ಇಸ್ಫಹಾನ್ (Isfahan) ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ.
ಇದನ್ನೂ ಓದಿ: ಇರಾನ್​​ನ 120 ಕ್ಷಿಪಣಿ ಲಾಂಚ್ ಪ್ಯಾಡ್ ಧ್ವಂಸ.. 24 ಗಂಟೆಯಲ್ಲಿ 430 ಮಂದಿಯ ಜೀವ ಹೋಗಿದೆ..
ಇರಾನ್‌ನ ಪರಮಾಣು ತಾಣಗಳ ಮೇಲಿನ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಜೊತೆಗೆ ಆದಷ್ಟು ಬೇಗ ಯುದ್ಧ ನಿಲ್ಲಿಸುವಂತೆ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇರಾನ್ ತಕ್ಷಣವೇ ಯುದ್ಧ ನಿಲ್ಲಿಸಬೇಕು, ಇಲ್ಲದಿದ್ದರೆ ಮತ್ತೊಂದು ದಾಳಿ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಇನ್ನು, ಅಮೆರಿಕ ಇರಾನ್​ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಹೇಳಿಕೊಂಡಿದೆ. ಆದರೆ ಅಮೆರಿಕ ದಾಳಿ ಮಾಡಿದ ಸ್ಥಳದಿಂದ ಯುರೇನಿಯಂ ದಾಸ್ತಾನು ಮೊದಲೇ ಬೇರೆ ಕಡೆ ಸ್ಥಳಾಂತರ ಮಾಡಲಾಗಿತ್ತು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಇರಾನ್​​ನ 120 ಕ್ಷಿಪಣಿ ಲಾಂಚ್ ಪ್ಯಾಡ್ ಧ್ವಂಸ.. 24 ಗಂಟೆಯಲ್ಲಿ 430 ಮಂದಿಯ ಜೀವ ಹೋಗಿದೆ..
ಇರಾನ್ ಮಾರ್ಚ್ ತಿಂಗಳಿನಲ್ಲಿಯೇ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಅಗತ್ಯವಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇರಿಸಿದೆ. ಯಾಕೆಂದರೆ ಇಸ್ರೇಲ್ ಯಾವುದೇ ಸಮಯದಲ್ಲಿ ದಾಳಿ ಮಾಡುವ ಆತಂಕ ಇತ್ತು. ಹೀಗಾಗಿ ಅಮೆರಿಕ ದಾಳಿ ಮಾಡಿದ ಸ್ಥಳದಲ್ಲಿ ಪರಮಾಣು ಶಸ್ತ್ರಾಸ್ತ್ರ ತಯಾರಿಸಲು ಬೇಕಾಗಿದ್ದ ಯುರೇನಿಯಂ ದಾಸ್ತಾನು ಇರಲಿಲ್ಲ ಎಂದು ವರದಿಯಾಗಿದೆ.
ಟ್ರಂಪ್​​ ಏನು ಹೇಳಿದ್ದಾರೆ..?
ದಾಳಿ ಬಳಿಕ ಟ್ವೀಟ್ ಮಾಡಿರುವ ಟ್ರಂಪ್.. ಈಗ ಅಮೆರಿಕದ ಎಲ್ಲಾ ವಿಮಾನಗಳು ಇರಾನ್‌ನ ವಾಯುಪ್ರದೇಶ ತೊರೆದು ಸುರಕ್ಷಿತವಾಗಿ ವಾಪಸ್ ಆಗ್ತಿವೆ. ಹೆಚ್ಚಿನ ಬಾಂಬ್‌ಗಳನ್ನು ಫೋರ್ಡೊ ಎಂಬಲ್ಲಿ ಬೀಳಿಸಲಾಗಿದೆ. ನಮ್ಮ ವೀರ ಯೋಧರಿಗೆ ಅಭಿನಂದನೆಗಳು. ಜಗತ್ತಿನ ಬೇರೆ ಯಾವುದೇ ಸೈನ್ಯವು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: 21 ಮಂದಿ ಪ್ರಯಾಣಿಕರಿದ್ದ ಹಾಟ್​ ಏರ್​ ಬಲೂನ್ ಧಗಧಗ.. ಆಗಸದಲ್ಲೇ ಘೋರ ದುರಂತ.. VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ