ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ಅಟ್ಯಾಕ್.. ಹೌತಿ ಉಗ್ರರ ವಿರುದ್ಧ ಕೆರಳಿದ ಪ್ರಧಾನಿ

author-image
Veena Gangani
Updated On
ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ಅಟ್ಯಾಕ್.. ಹೌತಿ ಉಗ್ರರ ವಿರುದ್ಧ ಕೆರಳಿದ ಪ್ರಧಾನಿ
Advertisment
  • ವಿಮಾನ ನಿಲ್ದಾಣ ಸುರಕ್ಷಿವಲ್ಲ ಅಂತ ಹೌತಿ ಎಚ್ಚರಿಕೆ
  • ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾದ ಸ್ಥಳೀಯರು
  • ಸರಣಿ ದಾಳಿ ನಡೆಸುವುದಾಗಿ ಇಸ್ರೇಲ್​ ವಾರ್ನಿಂಗ್

ಒಂದ್ಕಡೆ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಭೀತಿ ಇರುವಾಗಲೇ ಅತ್ತ ಮರಳುಗಾಡಿನಲ್ಲಿ ಮತ್ತೆ ಕ್ಷಿಪಣಿಗಳು ಹಾರಿವೆ. ಇಸ್ರೇಲ್​ ಮೇಲೆ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿ ಅಟ್ಟಹಾಸ ಗೈದಿದ್ದಾರೆ. ವಿಮಾನ ನಿಲ್ದಾಣವನ್ನೇ ಟಾರ್ಗೆಟ್​ ಮಾಡಿ ಸ್ಫೋಟಿಸಲಾಗಿದ್ದು ಇದಕ್ಕೆ ಕೆಂಡವಾಗಿರುವ ಪ್ರಧಾನಿ 7 ಪಟ್ಟು ಹೆಚ್ಚಿನ ಪ್ರತಿದಾಳಿ ನಡೆಸುವುದಾಗಿ ಗುಡುಗಿದ್ದಾರೆ.

ಇದನ್ನೂ ಓದಿ: ಲೈಟ್ ಹಾಕಬೇಡಿ, ದೀರ್ಘಕಾಲಿಕ ರಜೆ ಇಲ್ಲ -ಗಡಿಯಿಂದ ಮತ್ತೊಂದು ಬಿಗ್​ಅಪ್​ಡೇಟ್ಸ್​..!

ಮಧ್ಯಪ್ರಾಚ್ಯದಲ್ಲಿ ಮತ್ತೆ ದಾಳಿ ಶುರುವಾಗಿದೆ. ಪ್ರಾಣ ಭಯಕ್ಕೆ ಹೆದರಿದ ನಾಗರಿಕರು ಬಂಕರ್ ಮೊರೆ ಹೋಗುತ್ತಿದ್ದಾರೆ. ಮತ್ತೊಂದು ಹಂತದ ಯುದ್ಧಕ್ಕೆ ಮರಳುಗಾಡು ಸಜ್ಜಾಗಿದೆ.

publive-image

ಇಸ್ರೇಲ್​ ಹಾಗೂ ಮತಾಂಧರ ನಡುವೆ ಮತ್ತೊಂದು ಸುತ್ತಿನ ಯುದ್ಧ ಶುರುವಾಗಿದೆ. ಇಸ್ರೇಲ್​ನಲ್ಲಿ ಮತ್ತೆ ಹೌತಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಇಸ್ರೇಲ್​ನ ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದ್ದಾರೆ. ಯೆಮೆನ್‌ನಿಂದ ಹಾರಿಸಿದ ಕ್ಷಿಪಣಿ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಬಳಿ ಬಿದ್ದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಇಸ್ರೇಲ್ ಗುರಿಯಾಗಿಸಿಕೊಂಡಿರುವ ಇರಾನ್ ಬೆಂಬಲಿತ ಹೌತಿ ಉಗ್ರರು, ನಾವು ಪ್ಯಾಲೆಸ್ಟೀನಿಯನ್ನರ ಜೊತೆಗಿದ್ದೇವೆ ಅಂತ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡಿದ್ದಾರೆ. ದಾಳಿ ಬೆನ್ನಲ್ಲೇ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಪ್ರಾಣಭಯಕ್ಕೆ ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದಾರೆ. ಈ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.  ಅತ್ತ ಕ್ಷಿಪಣಿ ದಾಳಿ ಮಾಡಿದ ನಂತರ ದೊಡ್ಡ ಸಾಧನೆ ಮಾಡಿದಂತೆ ಪ್ರತ್ಯಕ್ಷವಾದ ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ, ಬೆನ್ ಗುರಿಯನ್ ವಿಮಾನ ನಿಲ್ದಾಣ ಇನ್ನು ಮುಂದೆ ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂದಿದ್ದಾನೆ.


">May 4, 2025

ಯೆಮೆನ್‌ನ ಹೌತಿ ಉಗ್ರರು ಇಸ್ರೇಲ್‌ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆರಳಿ ಕೆಂಡವಾಗಿದ್ದಾರೆ. ಈ ದಾಳಿಗೆ ನಾವು ಸುಮ್ಮನಿರಲ್ಲ. ಇದಕ್ಕೆ ಪ್ರತಿಯಾಗಿ ಸರಣಿ ದಾಳಿ ನಡೆಸುವುದಾಗಿ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಹೌತಿ ದಾಳಿಗೆ ಇಸ್ರೇಲ್‌ನ ಪ್ರತೀಕಾರ ಒಂದು ಬಾರಿ ಮಾತ್ರವಲ್ಲ. ದಾಳಿಯ ಪೆಟ್ಟುಗಳು ಬೀಳುತ್ತಲೇ ಇರುತ್ತವೆ. ಇದು ಒಂದು ದಿನದ ಕ್ರಮವಲ್ಲ, ಆದರೆ ಇಸ್ರೇಲ್ ತನ್ನ ಶತ್ರುಗಳನ್ನು ಮೌನವಾಗಿ ಕುಳಿತುಕೊಳ್ಳಲು ಬಿಡಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಎರಡು ದಿನ ಭಾರತದಿಂದ ವಿಮಾನ ಹಾರಾಟ ಸ್ಥಗಿತ

ಹೌತಿಗಳಿಂದ ಕ್ಷಿಪಣಿ ದಾಳಿ ಬೆನ್ನಲ್ಲೇ ಏರ್ ಇಂಡಿಯಾ ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕ್ಷಿಪಣಿ ದಾಳಿಯ ಕುರಿತು ಲಭ್ಯವಾಗುತ್ತಿದ್ದಂತೆ ದೆಹಲಿಯಿಂದ ಟೆಲ್ ಅವಿವ್‌ಗೆ ಹೋಗುತ್ತಿದ್ದ ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಗಿದೆ. ಇಸ್ರೇಲ್‌ಗೆ ಟಿಕೆಟ್ ತೆಗೆದುಕೊಂಡವರಿಗೆ ವಿನಾಯಿತಿ ಅಥವಾ ವಿಮಾನಯಾನದ ಮರು ವೇಳಾಪಟ್ಟಿ ನೀಡಲಾಗುವುದು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಒಟ್ಟಾರೆ ಭಾರತದ ಹಾಗೂ ಪಾಕಿಸ್ತಾನ ಯುದ್ಧ ಕಾರ್ಮೋಡದ ಮಧ್ಯೆಯೇ ಇಸ್ರೇಲ್​ ಹಾಗೂ ಹೌತಿಗಳ ನಡುವೆ ಯುದ್ಧ ಶುರುವಾಗಿದೆ. ಈಗಾಗಲೇ ಹೌತಿ ಉಗ್ರರು ಕ್ಷಿಪಣಿ ದಾಳಿ ಮಾಡಿ ಯಹೂದಿಗಳನ್ನು ಕೆರಳಿಸಿದ್ದು ಮುಂದೆ ಇಸ್ರೇಲ್​ನ ಪ್ರತಿದಾಳಿಗೆ ಬೆಲೆ ಕೊಡಲೇಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment