/newsfirstlive-kannada/media/post_attachments/wp-content/uploads/2024/04/ISREAL-5.jpg)
ಇಸ್ರೇಲ್ ಮತ್ತು ಹಮಾಸ್ ನಡುವಿನ ಭಯಾನಕ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ವೈಷಮ್ಯ ಬೆಳೆಯುತ್ತಲೇ ಇದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಅಮಾಯಕರು ಸಾವನ್ನಪ್ಪಿದ್ರೂ 2 ದೇಶಗಳ ನಡುವಿನ ವೈರತ್ವ ಇನ್ನಷ್ಟು ಹೆಚ್ಚುತ್ತಲಿದೆ. ಅದರಂತೆ ಹಮಾಸ್ ಭಯೋತ್ಪಾದಕರ ಭೀಬತ್ಸ್ಯ ಕೃತ್ಯವೊಂದು ಮುನ್ನೆಲೆಗೆ ಬಂದಿದ್ದು, ಇಸ್ರೇಲ್ನ ಎರಡು ಪುಟ್ಟ ಕಂದಮ್ಮಗಳ ಮುಂದೆ ತಾಯಿಯನ್ನು ಬರ್ಬರವಾಗಿ ಹಮಾಸ್ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ಹಮಾಸ್ ಭಯೋತ್ಪಾದಕರು ಇಸ್ರೇಲ್ನ ಇಬ್ಬರು ಮಕ್ಕಳ ಕಣ್ಣು ಎದುರಿಗೆ ಅವರ ತಾಯಿಯನ್ನು ಅಮಾನುಷವಾಗಿ ಕೊಲೆಗೈದಿದ್ದಾರೆ. ಬಳಿಕ ಆ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿ ಅದನ್ನು ಪಕ್ಕಕ್ಕೆ ಇಟ್ಟು ಅದರ ಸುತ್ತಲು ಸ್ಫೋಟಕಗಳನ್ನು ಇಟ್ಟಿದ್ದಾರೆ. ಬಳಿಕ ಹಮಾಸ್ ಭಯೋತ್ಪಾದಕರು ಪುಟ್ಟ ಕಂದಗಳನ್ನು ಹೆತ್ತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಘಟನೆ ಎಂಥವರಿಗೂ ಕಣ್ಣೀರು ತರಿಸುವಂತೆ ಇದೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಇಸ್ರೇಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ:ಗರ್ಲ್ಫ್ರೆಂಡ್ಗೆ ತಂದಿದ್ದ ಬರ್ಗರ್ ಕಚ್ಚಿದ್ದಕ್ಕೆ ಸ್ನೇಹಿತನನ್ನೇ ಕೊಂದ ಕುಚುಕು ಗೆಳೆಯ
ಮಕ್ಕಳ ಎದುರೆ ತಾಯಿಯನ್ನು ಕೊಲೆ ಮಾಡಿ ಈ ರೀತಿ ಕ್ರೌರ್ಯ ಮರೆದಿರುವುದಕ್ಕೆ ಹಮಾಸ್ ಭಯೋತ್ಪಾದಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಇಸ್ರೇಲ್ ಕೂಡ ಕೆಂಡಾಮಂಡಲವಾಗಿದೆ. ಇಸ್ರೇಲ್ ಮತ್ತು ಹಮಾಸ್ ಭಯೋತ್ಪಾದಕರ ನಡುವಿನ ಯುದ್ಧದಲ್ಲಿ ಸಾಕಷ್ಟು ಅಮಾಯಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಎರಡು ಕಡೆಯಲ್ಲೂ ಆಸ್ತಿ-ಪಾಸ್ತಿಗಳು ನಾಶವಾಗಿವೆ. ಆದರೆ ಇದುವರೆಗೂ ಯುದ್ಧ ಮಾತ್ರ ನಡೆಯುತ್ತಲೇ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ