ನೆಕ್ಸ್ಟ್​ ಲೆವೆಲ್ ತಲುಪಿದ ಸಂಘರ್ಷ.. ಇಸ್ರೇಲ್ ಮೇಲೆ 160ಕ್ಕೂ ಹೆಚ್ಚು ರಾಕೆಟ್ ದಾಳಿ..

author-image
Ganesh
Updated On
ನೆಕ್ಸ್ಟ್​ ಲೆವೆಲ್ ತಲುಪಿದ ಸಂಘರ್ಷ.. ಇಸ್ರೇಲ್ ಮೇಲೆ 160ಕ್ಕೂ ಹೆಚ್ಚು ರಾಕೆಟ್ ದಾಳಿ..
Advertisment
  • ರಾಕೆಟ್‌ ದಾಳಿಯಲ್ಲಿ ಅನೇಕರಿಗೆ ಗಾಯ, ವಾಹನಗಳಿಗೆ ಹಾನಿ
  • ಪೇಜರ್​ ಅಟ್ಯಾಕ್​​ಗೆ ಪ್ರತೀಕಾರ ಎಂದಿರುವ ಹಿಜ್ಬುಲ್ಲಾ
  • ಹಿಜ್ಬುಲ್ಲಾ ದಾಳಿಗೆ ಮತ್ತೆ ಕೆರಳಿದ ಇಸ್ರೇಲ್, ಖಡಕ್ ಎಚ್ಚರಿಕೆ

ಪೇಜರ್​ ಅಟ್ಯಾಕ್ ನಡೆದ 55 ದಿನಗಳ ನಂತರ ಅದನ್ನು ಮಾಡಿದ್ದು ನಾನೇ ಅಂತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ. ಇದು ಕೆಲವರ ಕಣ್ಣು ಕೆಂಪಗಾಗಿಸಿದೆ. ಅದರಲ್ಲೂ ಯಾವಾಗಲೂ ಯಹೂದಿ ದೇಶವನ್ನ ಕಂಡ್ರೆ ನಿಗಿ ನಿಗಿಯಾಗುವ ಹಿಜ್ಬುಲ್ಲಾ ಉಗ್ರ ಸಂಘಟನೆ ನೇರವಾಗಿ ಸಮರವನ್ನೇ ಸಾರಿದೆ.

160ಕ್ಕೂ ಹೆಚ್ಚು ರಾಕೆಟ್​ ದಾಳಿ
ಗಾಜಾ ಪಟ್ಟಿಯನ್ನು ಕುಟ್ಟಿ ಕುಟ್ಟಿ ಪುಡಿ ಮಾಡಿದ ಮೇಲೆ ಇರಾನ್ ಮೇಲೆ ಇಸ್ರೇಲ್ ಸಮರ ಸಾರಿತ್ತು. ಇದೆರೆಡರ ಜೊತೆಗೆ ಲೆಬೆನಾನ್ ಮೇಲೂ ಸರಣಿ ದಾಳಿ ಮಾಡಿ ಧ್ವಂಸ ಮಾಡಿತ್ತು. ಶತ್ರುಗಳ ಪಳೆಯುಳಿಕೆ ಸಿಗದಂತೆ ಮಾಡ್ಲೇಬೇಕು ಅಂತ ಪಣ ತೊಟ್ಟಿರೋ ಇಸ್ರೇಲ್​ ಮೇಲೂ ಒಂದರ ನಂತರ ಒಂದು ದಾಳಿಗಳು ಆಗ್ತಿವೆ. ಇದೀಗ ಇಸ್ರೇಲ್ ಮೇಲೆ ಹಿಜ್ಬುಲ್ಲಾ 165ಕ್ಕೂ ಹೆಚ್ಚು ರಾಕೆಟ್​ಗಳಿಂದ ದಾಳಿ ಮಾಡಿದೆ. ಖರ್ಮೆಲ್​ ಗುರಿಯಾಗಿಸಿ ಈ ದಾಳಿ ಮಾಡಿದೆ.

ಇದನ್ನೂ ಓದಿ:100 ಯುದ್ಧ ವಿಮಾನ.. ಸೇನಾನೆಲೆಗಳು ಧ್ವಂಸ; ಇರಾನ್ ಮೇಲೆ ಇಸ್ರೇಲ್ ಅಟ್ಯಾಕ್ ಹೇಗಿತ್ತು ಗೊತ್ತಾ?

ಅದ್ಯಾವಾಗ ಪೇಜರ್​ ಅಟ್ಯಾಕ್ ಮಾಡಿದ್ದು ನಾವೇ ಅಂತ ಇಸ್ರೇಲ್ ಪ್ರಧಾನಿ ಹೇಳಿದ್ರೋ ಹಿಜ್ಬುಲ್ಲಾ ದಾಳಿ ಮಾಡಿದೆ. ಗಲಿಲೀ ಮತ್ತು ಹೈಫಾ ಕೊಲ್ಲಿ ಮೇಲೆ ನಡೆದ ದಾಳಿಯಿಂದ ಮಗು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಅಷ್ಟೂ ಜನಕ್ಕೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಲೆಬನಾನ್​ ಮೇಲೆ ನಡೆದಿದ್ದ ಪೇಜರ್ ದಾಳಿಯಲ್ಲಿ ಸುಮಾರು 40 ಮಂದಿ ಮೃತಪಟ್ಟು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಗೆ ನಾನು ಅನುಮತಿ ನೀಡಿದ್ದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ. ಹೀಗೆ ಹೇಳಿಕೆ ಕೊಟ್ಟ ಬೆನ್ನಲ್ಲೇ ಹಿಜ್ಬುಲ್ಲಾ ಈ ಅಟ್ಯಾಕ್ ಮಾಡಿದೆ.

ಹಿಜ್ಬುಲ್ಲಾ ದಾಳಿಗೆ ಕೆರಳಿದ ಇಸ್ರೇಲ್​..
ಹಿಜ್ಬುಲ್ಲಾ ದಾಳಿ ಇಸ್ರೇಲ್​ನ್ನ ಮತ್ತಷ್ಟು ಕೆರಳಿಸಿದೆ. ನಾವು ನಡೆಸುತ್ತಿರುವ ದಾಳಿಯನ್ನ ಇನ್ನೂ ತೀವ್ರಗೊಳಿಸುತ್ತೇವೆಂದು ಇಸ್ರೇಲ್​ ಸೇನೆ ಹೇಳಿದೆ. ಒಟ್ಟಾರೆ ದಾಳಿಗೆ ಪ್ರತಿ ದಾಳಿ.. ರಾಕೆಟ್​ ಅಂತಾ ನಿಂತಿರೋ ನಾಯಕರ ಕೋಪಕ್ಕೆ ಬಲಿಯಾಗ್ತಿರೋದು ಮಾತ್ರ ಅಮಾಯಕರು.

ಇದನ್ನೂ ಓದಿ:ಇಸ್ರೇಲ್ ಪ್ರಧಾನಿ ಮನೆ ಮೇಲೆ ಡ್ರೋನ್ ಅಟ್ಯಾಕ್.. ನಮ್ಮನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದ ನೆತನ್ಯಾಹು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment