ತಾರಕಕ್ಕೇರಿದ ಸಂಘರ್ಷ; ಇಸ್ರೇಲ್​ ಪ್ರಧಾನಿ ಮನೆ ಮೇಲೆ ದಿಢೀರ್​ ದಾಳಿ; ಏನಾಯ್ತು?

author-image
Veena Gangani
Updated On
ತಾರಕಕ್ಕೇರಿದ ಸಂಘರ್ಷ; ಇಸ್ರೇಲ್​ ಪ್ರಧಾನಿ ಮನೆ ಮೇಲೆ ದಿಢೀರ್​ ದಾಳಿ; ಏನಾಯ್ತು?
Advertisment
  • ಇರಾನ್​, ಇಸ್ರೇಲ್​ ನಡುವೆ ಮತ್ತಷ್ಟು ಬಿಗಡಾಯಿಸಿದ ಪರಿಸ್ಥಿತಿ
  • ನೇತನ್ಯಾಹು ಖಾಸಗಿ ನಿವಾಸದ ಮೇಲೆ 2ನೇ ಬಾರಿ ದಾಳಿ
  • ನೇತನ್ಯಾಹು ಮನೆಯ ಬಳಿ ಎರಡು ಫ್ಯಾಶ್​ ಬಾಂಬ್​ ಸ್ಫೋಟ

ಇರಾನ್​ ಮತ್ತು ಇಸ್ರೇಲ್​ ನಡುವಿನ ಯುದ್ಧದ ಕಾರ್ಮೋಡ ಮತ್ತಷ್ಟು ಬಿಗಡಾಯಿಸಿದೆ. ಇಸ್ರೇಲ್​ ಪ್ರಧಾನಿಯನ್ನೇ ಗುರಿಯಾಗಿಸಿಕೊಂಡು ಇರಾನ್​ ಮತ್ತೆ ದಾಳಿನಡೆಸಿರುವ ಶಂಕೆ ವ್ಯಕ್ತವಾಗಿದೆ. ನೇತನ್ಯಾಹು ಅವರ ಖಾಸಗಿ ನಿವಾಸದ ಮೇಲೆ 2ನೇ ಬಾರಿ ದಾಳಿ ನಡೆದಿದ್ದು, ಅದೃಷ್ಟವಶಾತ್​, ಇಸ್ರೇಲ್​ ಪ್ರಧಾನಿ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಎಂಟ್ರಿ; ಯಾರವರು?

publive-image

ಮಧ್ಯಪ್ರಾಚ್ಯದಲ್ಲಿ ಕವಿದಿರುವ ಯುದ್ಧ ಕಾರ್ಮೋಡ ಸದ್ಯಕ್ಕೆ ಕರಗುವಂತೆ ಕಾಣುತ್ತಿಲ್ಲ. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಲೇ ಸಾಗುತ್ತಿವೆ. ಹಮಾಸ್ ಹಾಗೂ ಹಿಜ್ಬುಲ್ಲಾ ಮುಖಂಡರ ಸಾಲು ಸಾಲು ಹತ್ಯೆಗಳಿಂದ ಕುದಿಯುತ್ತಿರುವ ಇರಾನ್ ಈಗ ಇಸ್ರೇಲ್​ ವಿರುದ್ಧ ಮತ್ತಷ್ಟು ಸಮರ ಸಾರಿದೆ. ಅದರ ಭಾಗವಾಗಿ ಈಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ನಿವಾಸದ ಮೇಲೆ ಇರಾನ್​ ಡೆಡ್ಲಿ ಮಿಸೈಲ್​ ಅಟ್ಯಾಕ್​ ನಡೆಸಿದ್ದು ಆತಂಕ ಮೂಡಿಸಿದೆ.

ಬೆಂಜಮಿನ್ ನೇತನ್ಯಾಹು ನಿವಾಸದ ಬಳಿ ನಡೆದ ಈ ಘಟನೆ ಅಕ್ಟೋಬರ್​ನಲ್ಲಿ ನಡೆದ ದಾಳಿಯನ್ನು ಮತ್ತೆ ನೆನಪಿಸಿದೆ. ಅಕ್ಟೋಬರ್​ನಲ್ಲಿ ಪ್ರಧಾನಿ ನಿವಾಸದ ಮೇಲೆ ಡ್ರೋನ್ ಒಂದು ಹಾರಾಟ ನಡೆಸಿದ ಆತಂಕ ಸೃಷ್ಟಿಸಿತ್ತು. ಈಗ ನೇತನ್ಯಾಹು ಮನೆಯ ಬಳಿ ಎರಡು ಫ್ಯಾಶ್​ ಬಾಂಬ್​ಗಳು ಸ್ಫೋಟಗೊಂಡಿವೆ. ಇದು ಇರಾನ್ ಮತ್ತು ಇಸ್ರೇಲ್​ ನಡುವಿನ ಸಮರಕ್ಕೆ ಮತ್ತೊಂದು ವೇದಿಕೆಯಾಗಲಿದೆಯಾ ಅನ್ನೋ ಅನುಮಾನಗಳು ಕೂಡ ಮೂಡುತ್ತಿದೆ. ಆದರೆ ಈ ಬಾಂಬ್ ಸ್ಫೋಟದಿಂದ ನೇತನ್ಯಾಹು ಹಾಗೂ ಅವರ ಕುಟುಂಬದ ಯಾವುದೇ ಸದಸ್ಯರಿಗೆ ಹಾನಿಯಾಗಿಲ್ಲ. ಕ್ಷಿಪಣಿ ದಾಳಿಯ ವೇಳೆ ನೇತನ್ಯಾಹು ಆಗಲಿ ಅವರ ಕುಟುಂಬದವರಾಗಲಿ ನಿವಾಸದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಪ್ರಧಾನಿ ನೆತನ್ಯಾಹು ನಿವಾಸದ ಮೇಲಿನ ದಾಳಿಯನ್ನು ಇಸ್ರೇಲ್​ ತೀವ್ರವಾಗಿ ಖಂಡಿಸಿದೆ. ಇಸ್ರೇಲ್​ನ ರಕ್ಷಣಾ ಸಚಿವ ಕಟ್ಜ್​. ಇಂಥ ಬೆಳವಣಿಗೆಯನ್ನು ಇಸ್ರೇಲ್​ ಎಂದೂ ಸಹಿಸಲ್ಲ. ಇರಾನ್ ಆಗಲಿ ಅಥವಾ ಅದರ ಪ್ರತಿನಿಧಿಗಳಾಗಲಿ ಹತ್ಯೆ ಮಾಡುವುದು ಸಾಧ್ಯವಿಲ್ಲ. ಈಗಾಗಲೇ ರಕ್ಷಣಾ ಪಡೆಗೆ ತೆಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳಿ ಎಂದು ಹೇಳಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ನೇತನ್ಯಾಹು ನಿವಾಸದ ಮೇಲೆ ದಾಳಿ ಬೆನ್ನಲ್ಲೇ ಇಸ್ರೇಲ್​ನ ಅಧ್ಯಕ್ಷ, ಇರಾನ್​ನ ನೆರೆ ಹೊರೆಯ ರಾಷ್ಟ್ರಗಳ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

publive-image

ನೇತನ್ಯಾಹು ನಿವಾಸದ ಮೇಲೆ ದಾಳಿ ಸಂಬಂಧ ಮೂವರ ಬಂಧನ

ನೇತನ್ಯಾಹು ಮನೆಯ ಗಾರ್ಡನ್​ನಲ್ಲಿ ಎರಡು ಫ್ಯಾಶ್​ ಬಾಂಬ್​ಗಳ ದಾಳಿಯನ್ನು ಇಸ್ರೇಲ್​ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಲಾಹವ್ 433 ಪ್ರಮುಖ ಅಪರಾಧಗಳ ಘಟಕದ ನೇತೃತ್ವದಲ್ಲಿ ಜಂಟಿ ತನಿಖೆ ನಡೆಯುತ್ತಿದ್ದು, ಮೂವರು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಂದೆಡೆ ಗಾಜಾದಲ್ಲಿರುವ ಹಿಜ್ಬುಲ್ಲಾ ಸಂಘಟನೆಗಳ ತಾಣಗಳ ಮೇಲೆ ಇಸ್ರೇಲ್​ ವಾಯುದಾಳಿ ಮುಂದುವರಿಸಿದೆ. ಉತ್ತರ ಗಾಜಾದ ಬೈರುತ್​ನಲ್ಲಿ ಇಸ್ರೇಲ್​ನ ದಾಳಿಯಿಂದ 70ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಬಗ್ಗೆ ಗಾಜಾ ಸರ್ಕಾರ ಮಾಹಿತಿ ನೀಡಿದೆ. ನೇತನ್ಯಾಹು ನಿವಾಸದ ಮೇಲಿನ ದಾಳಿಯಿಂದ ಇಸ್ರೇಲ್​ ಮತ್ತಷ್ಟು ಕೆರಳಿದ್ದು, ಯಾವುದೇ ಕ್ಷಣದಲ್ಲಿ ಇರಾನ್​ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ಮುಗಿ ಬೀಳುವ ಸಾಧ್ಯತೆ ದಟ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment