ನಾಗರಿಕರ ಮೇಲೆ ಮಿಸೈಲ್‌ ದಾಳಿ.. ಟೆಲ್‌ ಅವಿವ್ ನಗರ ತತ್ತರ; ಇರಾನ್‌ಗೆ ಇಸ್ರೇಲ್‌ ಖಡಕ್‌ ಎಚ್ಚರಿಕೆ!

author-image
admin
Updated On
ನಾಗರಿಕರ ಮೇಲೆ ಮಿಸೈಲ್‌ ದಾಳಿ.. ಟೆಲ್‌ ಅವಿವ್ ನಗರ ತತ್ತರ; ಇರಾನ್‌ಗೆ ಇಸ್ರೇಲ್‌ ಖಡಕ್‌ ಎಚ್ಚರಿಕೆ!
Advertisment
  • ಇಸ್ರೇಲ್​ ಪ್ರಮುಖ ನಗರ ಟೆಲ್ ಅವೀವ್‌ಗೆ ದೊಡ್ಡ ನಷ್ಟ
  • ನೀವು ಕ್ಷಿಪಣಿ ದಾಳಿ ನಡೆಸಿ ಘೋರ ತಪ್ಪು ಮಾಡಿದ್ದೀರಿ ಎಂದ ಇಸ್ರೇಲ್
  • ಇಸ್ರೇಲ್ ನಾಶಪಡಿಸುತ್ತೇವೆ ಎಂದ ಇರಾನ್ ಸರ್ವೋಚ್ಛ ನಾಯಕ

ಮಧ್ಯಪ್ರಾಚ್ಯದಲ್ಲಿ ಇರಾನ್​​-ಇರಾಕ್​​ ಹಾವು, ಮುಂಗುಸಿಯಂತೆ ಹೋರಾಡುತ್ತಿವೆ. 2 ದೇಶದ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್​​​ ದಾಳಿಗೆ ಕುದಿಯುತ್ತಿರುವ ಇಸ್ರೇಲ್ ಎಚ್ಚರಿಕೆ ಸಂದೇಶ ರವಾನಿಸಿದೆ. ನೀವು ಕ್ಷಿಪಣಿ ದಾಳಿ ನಡೆಸಿ ಘೋರ ತಪ್ಪು ಮಾಡಿದ್ದೀರಿ. ನಾಗರಿಕರ ಮೇಲಿನ ದಾಳಿಯನ್ನು ಇಸ್ರೇಲ್​ ಸಹಿಸುವುದಿಲ್ಲ. ಈ ದಾಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

publive-image

ಇಸ್ರೇಲ್ ಎಚ್ಚರಿಕೆಗೆ ಇರಾನ್ ಕೂಡ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಇಸ್ರೇಲ್‌ಗೆ ನರಕದ ದಿನಗಳು ಕಾದಿವೆ. ಇಸ್ರೇಲ್ ನಾಶಪಡಿಸುತ್ತೇವೆ ಎಂದು ಇರಾನ್ ಸರ್ವೋಚ್ಛ ನಾಯಕ ಖದೀಮ್ ಗುಡುಗಿದ್ದಾರೆ.

publive-image

ಇಸ್ರೇಲ್ ಮೇಲೆ ಇರಾನ್‌ ಮಿಸೈಲ್​ಗಳ ಮಳೆಯನ್ನೇ ಸುರಿಸಿ ನರಕ ಸೃಷ್ಟಿಸಿದೆ. ಇಸ್ರೇಲ್​ ಪ್ರಮುಖ ನಗರ ಟೆಲ್ ಅವೀವ್ ಮೇಲೆ ಸುಮಾರು 200ಕ್ಕೂ ಹೆಚ್ಚು ಮಿಸೈಲ್​ಗಳಿಂದ ದಾಳಿ ಮಾಡಲಾಗಿದೆ. ಇರಾನ್‌ ನಡೆಸಿದ ಏರ್​ಸ್ಟ್ರೈಕ್​ನಲ್ಲಿ ಇಸ್ರೇಲ್‌ನ ಮೂವರು ನಾಗರಿಕರು ಸಾವನ್ನಪ್ಪಿದ್ದರೆ 80 ಜನರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಮೇಲೆ ಮಿಸೈಲ್​ ಮಳೆ ಸುರಿಸಿದ ಇರಾನ್; ಟೆಲ್ ಅವೀವ್ ನಗರದ ದೊಡ್ಡ, ದೊಡ್ಡ ಕಟ್ಟಡಗಳು ಧ್ವಂಸ 

publive-image

ಅಸಲಿಗೆ ಆಗಿದ್ದೇನು?
ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ ಏರ್​​ಸ್ಟ್ರೈಕ್ ಮಾಡಿತ್ತು. ಇದಕ್ಕೆ ಕೌಂಟರ್ ದಾಳಿಯಾಗಿ ಇದೀಗ ಇರಾನ್ ಏರ್​​ಸ್ಟ್ರೈಕ್ ಮಾಡಿದೆ. ಇಸ್ರೇಲ್‌ ಅಣ್ವಸ್ತ್ರ ತಯಾರಿಕಾ ಸ್ಥಳದ ಮೇಲೆ ದಾಳಿ ಮಾಡುವ ಟಾರ್ಗೆಟ್ ಮಾಡಿದ್ರೆ ಇರಾನ್ ಧಾರ್ಮಿಕ ಸ್ಥಳ ಜೆರುಸಲೆಮ್ ನಗರವನ್ನೇ ಗುರಿಯಾಗಿಸಿದೆ.

publive-image

ಇಸ್ರೇಲ್‌ ಸೇನಾ ನೆಲೆ, ಕ್ಷಿಪಣಿ ಸಂಗ್ರಹಾಗಾರವನ್ನು ಟಾರ್ಗೆಟ್ ಮಾಡಿತ್ತು. ಇದಕ್ಕೆ ಇರಾನ್ ಜನವಸತಿ ಪ್ರದೇಶಗಳ ಮೇಲೆಯೇ ಅಟ್ಯಾಕ್ ಹಾನಿಗೊಳಿಸಿದೆ. ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಇಸ್ರೇಲ್‌ ದಾಳಿ ಮಾಡಿತ್ತು. ಇಸ್ರೇಲ್ ಕೂಡ ಟೆಲ್ ಅವಿವ್ ನಗರದ ಮೇಲೆ ದಾಳಿ ಮಾಡಿ ಪ್ರತೀಕಾರಕ್ಕೆ ಮುಂದಾಗಿದೆ. ಇಸ್ರೇಲ್ ದಾಳಿಯಿಂದ ಸೇನಾ ಮುಖ್ಯಸ್ಥ ಸೇರಿ 78 ಮಂದಿ ಸಾವನ್ನಪ್ಪಿದ್ದಾರೆ. ಇರಾನ್ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರೆ 40ಕ್ಕೂ ಜನರಿಗೆ ಗಾಯಗಳಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment