/newsfirstlive-kannada/media/post_attachments/wp-content/uploads/2024/10/Hashem-Safieddine.jpg)
ಹಿಜ್ಬುಲ್ಲಾ ಭಯೋತ್ಪಾನೆಯ ಸಂಘಟನೆಯ ಅಡಗುದಾಣಗಳ ಮೇಲೆ ಇಸ್ರೇಲ್​​ನ ಭೀಕರ ದಾಳಿಗಳು ಮುಂದುವರಿದಿದೆ. ಈಗಾಗಲೇ ಹಿಜ್ಬುಲ್ಲಾದ ಒಂದೊಂದು ಟೊಂಗೆಯನ್ನು ಕತ್ತರಿಸುತ್ತಾ ಬಂದಿದ್ದ ಇಸ್ರೇಲ್​ ಇತ್ತೀಚೆಗೆ ಅದರ ನಾಯಕ ನಸ್ರಲ್ಹಾನನ್ನ ಏರ್​​ಸ್ಟ್ರೈಕ್​ನಲ್ಲಿ ಮುಗಿಸಿ ಹಾಕಿತ್ತು. ಅವರ ಜಾಗಕ್ಕೆ ಯಾರೇ ಬಂದರು ಅವರನ್ನು ನುಗ್ಗಿ ಬಡಿದು ಹಾಕುತ್ತಿತ್ತು. ಈಗ ಹಿಜ್ಬುಲ್ಲಾದ ಮತ್ತೊಬ್ಬ ಮುಖಂಡನನ್ನು ಇಸ್ರೇಲ್​ ಯಮಪುರಿಗೆ ಅಟ್ಟಿದೆ ಎಂದು ಹೇಳಲಾಗುತ್ತಿದೆ. ಹಶೀಮ್ ಸಫೀದಿನ್​ನ್ನು ಹೊಡೆದು ಹಾಕಿದೆ ಎಂದು ಮೂಲಗಳು ತಿಳಿಸುತ್ತಿವೆ.
ಇದನ್ನೂ ಓದಿ:ವಿಶ್ವವನ್ನೇ ಇಭ್ಭಾಗ ಮಾಡಿತಾ ಇಸ್ರೇಲ್-ಇರಾನ್ ವಾರ್? ಯಾವ ಯಾವ ರಾಷ್ಟ್ರ ಯಾರ ಬೆನ್ನಿಗೆ ನಿಲ್ಲಲಿವೆ?
ಲೆಬನಾನ್​ನ ಬೈರತ್​ನಲ್ಲಿ ರಣಭೀಕರ ದಾಳಿ ನಡೆಸಿದ ಇಸ್ರೇಲ್ ಪಡೆ ಸಫೀದಿನ್​ನ್ನು ಮುಗಿಸಿ ಹಾಕಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಈ ಬಗ್ಗೆ ಇಸ್ರೇಲ್ ಆಗಲಿ ಅಥವಾ ಹಿಜ್ಬುಲ್ಲಾ ಸಂಘಟನೆಯಾಗಲಿ ಸಫೀದಿನ್ ಹತ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ. ಈ ಸುದ್ದಿಯನ್ನು ಇಸ್ರೇಲ್ ಹಾಗೂ ಹಿಜ್ಬುಲ್ಲಾ ಸದ್ಯದಲ್ಲಿಯೇ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಸ್ಪಷ್ಟಪಡಿಸಲಿವೆ ಎಂದು ಹೇಳಿವೆ.
ಇದನ್ನೂ ಓದಿ:ಇಸ್ರೇಲ್-ಇರಾನ್ ಸಮರ; ಧಗಧಗಿಸುತ್ತಿದೆ ಯುದ್ಧದ ಬಿಸಿ.. 2 ರಾಷ್ಟ್ರಗಳ ಮಿಲಿಟರಿ ಬಲಾಬಲ ಹೇಗಿದೆ?
ಸದ್ಯ ಆಕ್ಸಿಯಾಸ್ ಅಂತಾರಾಷ್ಟ್ರೀಯ ಮಾಧ್ಯಮವು ವರದಿ ಮಾಡಿರುವ ಪ್ರಕಾರ ಇಸ್ರೇಲ್ ಬೈರತ್​ನಲ್ಲಿ ನಡೆಸಿದ ರಣಭೀಕರ ಏರ್​ಸ್ಟ್ರೈಕ್​ನಲ್ಲಿ ಹಶೀಮ್ ಸಫೀದಿನ್​ ಅಸುನೀಗಿದ್ದಾನೆ ಎಂದೇ ವರದಿ ಮಾಡಿದೆ. ಈ ಸುದ್ದಿಯೂ ಇನ್ನಷ್ಟೇ ಖಚಿತವಾಗಬೇಕಿದೆ. ಆದ್ರೆ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಿಟ್ಟುಕೊಂಡು ಲೆಬನಾನ್​ ಮೇಲೆ ನಡೆಸುತ್ತಿರುವ ದಾಳಿಯಂತೂ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ