ಮಕ್ಕಳಿಗಾಗಿ ಗಿಫ್ಟ್​ ಬಾಕ್ಸ್​ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್

author-image
Ganesh
Updated On
ಮಕ್ಕಳಿಗಾಗಿ ಗಿಫ್ಟ್​ ಬಾಕ್ಸ್​ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್
Advertisment
  • ಗುಹೆ ಲೇಡಿ ಮಕ್ಕಳೊಂದಿಗೆ ತುಮಕೂರಿನಲ್ಲಿ ಆರೈಕೆ
  • ಬೆಂಗಳೂರಿನಿಂದ ತುಮಕೂರಿಗೆ ಬಂದಿದ್ದ ಡ್ರೋರ್​​ಗೆ ನಿರಾಸೆ
  • ಮಕ್ಕಳ ಮುಖ ನೋಡಲು ಕಾನೂನು ತೊಡಕು ಏನು..?

ತುಮಕೂರು: ಗೋಕರ್ಣ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಪತ್ತೆಯಾಗಿದ್ದ ನಿನಾ ಕುಟಿನಾ ಸದ್ಯ ತುಮಕೂರಿನಲ್ಲಿರುವ ಫಾರಿನ್ ಡಿಟೆನ್ಷನ್ ಸೆಂಟರ್​ನಲ್ಲಿದ್ದಾರೆ. ಈ ವಿಷಯ ತಿಳಿದ ಆಕೆಯ ಪ್ರಿಯಕರ, ಮಕ್ಕಳಿಗಾಗಿ ಇಸ್ರೇಲ್​ನಿಂದ ಓಡೋಡಿ ಬಂದಿದ್ದಾರೆ.
ಇಬ್ಬರು ಮಕ್ಕಳು ಹಾಗೂ ಪ್ರಿಯತಮೆಯನ್ನು ನೋಡುವ ಖುಷಿಯಿಂದ ಬಂದಿದ್ದ ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್​ಸ್ಟೀನ್​​ಗೆ ನಿರಾಸೆಯಾಗಿದೆ. ಕಾರಣ ಮಕ್ಕಳ ಮುಖ ನೋಡಲು ಸಾಧ್ಯವಾಗದೇ ಕಾದು, ಕಾದು ಏಕಾಂಗಿಯಾಗಿ ಬೆಂಗಳೂರಿಗೆ ಹೊರಟು ಹೋಗಿದ್ದಾರೆ.

ಯಾಕೆ ನೋಡಲು ಸಾಧ್ಯವಾಗಲಿಲ್ಲ..?

ನಿನಾ ಬಾಯ್​ಫ್ರೆಂಡ್​ ಬೆಂಗಳೂರಿನಿಂದ ತುಮಕೂರಿನಲ್ಲಿರುವ ಎಫ್​ಡಿಸಿಯ‌ (Foreign Detention Centre) ಲೋಕೆಷನ್ ಹಿಡಿದು ಬಂದಿದ್ದರು. ಇಲ್ಲಿರುವ ವಿದೇಶಿ ಪ್ರಜೆಗಳ ಆರೈಕೆ ಕೇಂದ್ರದಲ್ಲಿ ಇರೋದೆಲ್ಲ ವಿದೇಶಿ ಮಹಿಳೆಯರು. ಹೀಗಾಗಿ ಯಾವ ಪುರುಷರನ್ನೂ ಹತ್ತಿರಕ್ಕೆ ಬಿಡಲ್ಲ. ಪುರುಷ ಪೊಲೀಸರನ್ನೂ ಸಹ ಒಳಗೆ ಬಿಡೋದಿಲ್ಲ.

ಇದನ್ನೂ ಓದಿ: Rain News: ಅರೆಬೈಲ್ ಫಾಲ್ಸ್​​ನಲ್ಲಿ ಸಿಲುಕಿದ ಮೂವರು.. ಕರ್ನಾಟಕಕ್ಕೆ ಮತ್ತೆ ಹವಾಮಾನ ಇಲಾಖೆ ಎಚ್ಚರಿಕೆ..!

publive-image

ಮಕ್ಕಳಿಗಾಗಿ‌ ಉಡುಗೊರೆಯ ಬಾಕ್ಸ್​​ಗಳನ್ನು ತಂದಿದ್ದ ಡ್ರೋರ್ ನಿರಾಸೆಯಿಂದ ವಾಪಸ್ ಆಗಿದ್ದಾರೆ. ಈ ವೇಳೆ‌ ಡ್ರೋರ್ ದೂರದಿಂದಲೇ ಬಿಲ್ಡಿಂಗ್​ನತ್ತ ನೋಡಿ ಕೈತೋರಿಸಿ ಹಾಯ್‌ ಮಾಡ್ತಿದ್ದ. ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಸದ್ಯ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಆಗಿದ್ದೇನು..?

ನಿನಾ‌ ಮತ್ತು ಮಕ್ಕಳ ಭೇಟಿಗೆ ಕಾನೂನಿನ ತೊಡಕಾಗಿದೆ. ಕಾನೂನಿನ ಪ್ರಕಾರ ಯಾರೇ ವಿದೇಶದ ಮಹಿಳೆಯರನ್ನ ನೋಡೋದಾಗಲಿ ಅಥವಾ ಭೇಟಿ ಮಾಡೋಕಾಗಲಿ ಬಂದರೆ ಅಂತವರು ಬೆಂಗಳೂರಿನ ಶಾಂತಿನಗರದಲ್ಲಿರುವ ಎಫ್ಆರ್​ಆರ್​ಒ (ಫಾರಿನ್ ರೀಜನಲ್ ರಿಜಿಸ್ಟ್ರೆಷನ್ ಆಫೀಸರ್) ಅವರಿಂದ ಅನುಮತಿ ಪತ್ರ ಪಡೆಯಬೇಕು.

publive-image

ಗೆಳತಿ ದೂರ ಮಾಡಿದ್ದರೂ ಮಕ್ಕಳನ್ನ ಭೇಟಿ ಆಗಬೇಕು. ಆ ಮಕ್ಕಳೊಂದಿದೆ ಕೆಲ ಕಾಲ ಕಳೆಯಬೇಕು, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಅಂತಾ ಅಲ್ಲಿಂದ ಬಂದವನಿಗೆ ಆಘಾತ ಆಗಿದೆ. ಬಾಯ್​ಫ್ರೆಂಡ್ ಮೇಲೆ ಮನಸು ಬದಲಿಸಿರುವ ನಿನಾ, ಮತ್ತೊಮ್ಮೆ ಯೋಚನೆ ಮಾಡಬೇಕಾಗಿದೆ. ಅದು ಆಕೆಯ ಮಕ್ಕಳಿಗೋಸ್ಕರ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಇಬ್ಬಗೆ ನೀತಿ.. ಅಮೆರಿಕ, ನ್ಯಾಟೋ ಬೆದರಿಕೆಗೆ ಭಾರತ ಕೌಂಟರ್..!​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment