ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ
200ಕ್ಕೂ ಹೆಚ್ಚಿನ ಮಿಸೈಲ್‌ಗಳ ದಾಳಿ ನಡೆಸಿದ ಇರಾನ್
ನಾಗರಿಕರ ರಕ್ಷಣೆಗೆ ಇಸ್ರೇಲ್ ಬಳಿ ಇದೆ ವಿಶೇಷ ಅಸ್ತ್ರ..
ಇಸ್ರೇಲ್ ಮೇಲೆ ಇರಾನ್‌ನಿಂದ ಏಕಕಾಲದಲ್ಲಿ 200ಕ್ಕೂ ಹೆಚ್ಚಿನ ಮಿಸೈಲ್‌ಗಳ ದಾಳಿ ನಡೆಸಲಾಗಿದ್ದು, ಇರಾನ್ ದಾಳಿಗೆ 8 ಮಂದಿ ಇಸ್ರೇಲಿಗರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನ ಜೆರುಸಲೇಮ್, ಟೆಲ್ಅವೀವ್ ಸೇರಿದಂತೆ ಹಲವೆಡೆ ಕ್ಷಿಪಣಿ ಸೈರನ್‌ಗಳ ಸದ್ದು ಕೇಳಿ ಬರ್ತಿದ್ದಂತೆ ಸಾವಿರಾರು ಜನರು ಬಾಂಬ್ ಶೆಲ್ಟರ್‌ಗಳಿಗೆ ಶಿಫ್ಟ್ ಆಗಿದ್ದಾರೆ.
ಅಚ್ಚರಿಯ ವಿಚಾರ ಏನೆಂದರೆ 200ಕ್ಕೂ ಅಧಿಕ ಕ್ಷಿಪಣಿಗಳನ್ನು ಉಡಾಯಿಸಿದರೂ, ಇಸ್ರೇಲ್ನಲ್ಲಿ ಕಡಿಮೆ ಅನಾಹುತ ಸಂಭವಿಸಿದೆ. ಅದಕ್ಕೆಲ್ಲ ಕಾರಣ, ಐರನ್ ಡೋಮ್ (Iron dome) ಏರ್ ಡಿಫೆನ್ಸ್ ಸಿಸ್ಟಮ್ಸ್. ಇರಾನ್ ದಾಳಿಯಿಂದ ಇಸ್ರೇಲ್ ನಾಗರಿಕರನ್ನು ರಕ್ಷಿಸಿದ್ದು ಐರನ್ ಡೋಮ್, ಆ್ಯರೋ ಸಿಸ್ಟಮ್ (Arrow systems). ಕಷ್ಟದ ಪರಿಸ್ಥಿತಿಯಲ್ಲಿ ಅನುಕೂಲ ಆಗಲಿ ಎಂದು ಇಸ್ರೇಲ್ ಮಿಸೈಲ್ ಅಲರ್ಟ್ ಸಿಸ್ಟಮ್ ಅಭಿವೃದ್ಧಿಪಡಿಸಿದೆ. ಅದೀಗ ಯುದ್ಧದ ಪರಿಸ್ಥಿತಿಯಲ್ಲಿ ಅಲ್ಲಿನ ನಾಗರಿಕರಿಗೆ ಜೀವ ಉಳಿಸಿಕೊಳ್ಳಲು ಅನುಕೂಲ ಆಗಿದೆ.
ಇದನ್ನೂ ಓದಿ:Iran Israel war: ಘೋರ ಯುದ್ಧ ನಡೆದರೆ ಯಾರಿಗೆ ಮೇಲುಗೈ ಆಗಬಹುದು..?
ಇದು ಇಸ್ರೇಲ್ನಲ್ಲಿ ನಾಗರಿಕರಿಗೆ ಪರ್ಸನಲ್ ಆಗಿ ಮೆಸೇಜ್ ಕಳುಹಿಸಲಿದೆ. ಈ ವ್ಯವಸ್ಥೆಯಿಂದಾಗಿ ಅಲ್ಲಿನ ನಾಗರಿಕರು ಬದುಕುಳಿದಿದ್ದಾರೆ. ಮಿಸೈಲ್ ಆಲರ್ಟ್ಗಾಗಿ ಪರ್ಸನಲ್ ಮೇಸೇಜ್ ಅನ್ನು ಮೊಬೈಲ್‌ಗೆ ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಪರ್ಸನಲ್ ಮೆಸೇಜ್ ಅಲರ್ಟ್ ಸಿಸ್ಟಮ್ ಜಾರಿಯಾಗಿದೆ. ಎಮರ್ಜೆನ್ಸಿ ಮೆಸೇಜ್ಗಳು ನೇರವಾಗಿ ನಾಗರಿಕರ ಮೊಬೈಲ್‌ಗೆ ಕಳುಹಿಸಲಾಗುತ್ತದೆ.
ನಿನ್ನೆ ಇರಾನ್‌ನಿಂದ ದಾಳಿ ನಡೆದಾಗಲೂ ಜನರಿಗೆ ಪರ್ಸನಲ್ ಮೆಸೇಜ್ ರವಾನೆಯಾಗಿದೆ. ಇದರಿಂದ ತಕ್ಷಣವೇ ಬಾಂಬ್ ಶೆಲ್ಟರ್, ಮಿಸೈಲ್ ಶೆಲ್ಟರ್, ಬಂಕರ್ಗಳಿಗೆ ಹೋಗಿ ನಾಗರಿಕರು ರಕ್ಷಣೆ ಪಡೆದಿದ್ದಾರೆ. ಇದರಿಂದ ಇರಾನ್ ನೂರಾರು ಮಿಸೈಲ್ ದಾಳಿ ನಡೆಸಿದರೂ, ಇಸ್ರೇಲ್ನಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ.
ಇದನ್ನೂ ಓದಿ:ಇಸ್ರೇಲ್ ಮತ್ತು ಇರಾನ್ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ