/newsfirstlive-kannada/media/post_attachments/wp-content/uploads/2025/01/ISRO-2.jpg)
ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸತತ 4ನೇ ಪ್ರಯತ್ನದಲ್ಲಿ ತನ್ನ SpaDeX ಉಪಗ್ರಹದ ಡಾಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಆ ಮೂಲಕ ಡಾಕಿಂಗ್ (Docking) ಮತ್ತು ಅನ್‌ಡಾಕಿಂಗ್ (Undocking) ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂದರೆ ಬಾಹ್ಯಾಕಾಶದಲ್ಲಿ ಅವಳಿ ಉಪಗ್ರಹಗಳನ್ನ ಇಸ್ರೋ ಜೋಡಿಸಿದೆ. ಚೇಸರ್ ಸ್ಯಾಟಲೈಟ್ (SDX01), ಟಾರ್ಗೆಟ್ ಸ್ಯಾಟಲೈಟ್ (SDX02) ಉಪಗ್ರಹವನ್ನು ಜೋಡಿಸಲಾಗಿದೆ. ಎರಡು ಉಪಗ್ರಹಗಳು ತಲಾ 220 ಕೆಜಿ ಭಾರ ಹೊಂದಿವೆ. ಪಿಎಸ್‌ಎಲ್‌ವಿ-ಸಿ60 ರಾಕೆಟ್ನಿಂದ ಡಿಸೆಂಬರ್ 30 ರಂದು ಇವುಗಳನ್ನು ಲಾಂಚ್ ಮಾಡಲಾಗಿತ್ತು.
ಪ್ರಯೋಜನಗಳೇನು?
2035ರ ವೇಳೆಗೆ ಭಾರತ ತನ್ನದೆಯಾದ ಬಾಹ್ಯಾಕಾಶ ನಿಲ್ದಾಣದ ಗುರಿ ಹೊಂದಿದೆ. ಹೀಗಿರುವಾಗ ಡಾಕಿಂಗ್ ಪ್ರಯೋಗ ತುಂಬಾನೇ ಮುಖ್ಯವಾಗುತ್ತದೆ. ಈ ಕೇಂದ್ರಗಳಿಗೆ ಗಗನಯಾತ್ರಿಗಳು ಮತ್ತು ಸರಕುಗಳನ್ನು ಸಾಗಿಸುವ ಬಾಹ್ಯಾಕಾಶ ನೌಕೆಗಳನ್ನು ಡಾಕಿಂಗ್ ಮೂಲಕ ನಿಲ್ದಾಣಕ್ಕೆ ಸಂಪರ್ಕಿಸಬೇಕಾಗುತ್ತದೆ. ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್, ಅನ್‌ಡಾಕಿಂಗ್ ಪರಿಣತಿ ಬೇಕೇಬೇಕು.
ಇದನ್ನೂ ಓದಿ: ಭಾರತ ಮತ್ತೊಂದು ದಿಟ್ಟ ಹೆಜ್ಜೆ; ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲು ಎಂಜಿನ್ ಅಭಿವೃದ್ಧಿ
SpaDeX Docking Update:
🌟Docking Success
Spacecraft docking successfully completed! A historic moment.
Let’s walk through the SpaDeX docking process:
Manoeuvre from 15m to 3m hold point completed. Docking initiated with precision, leading to successful spacecraft capture.…— ISRO (@isro) January 16, 2025
ಅದರಂತೆ ಇಸ್ರೋ ಸ್ಪಾಡೆಕ್ಸ್ ಪ್ರಯೋಗದಲ್ಲಿ ಮೊದಲ ಹೆಜ್ಜೆಯನ್ನಿಟ್ಟಿದೆ. ಡಾಕಿಂಗ್ ತಂತ್ರಜ್ಞಾನವು ಬಾಹ್ಯಾಕಾಶದಲ್ಲಿ ವಿವಿಧ ಬಾಹ್ಯಾಕಾಶ ನೌಕೆಗಳ ನಡುವೆ, ಗಗನಯಾತ್ರಿಗಳು ಮತ್ತು ಸರಕುಗಳ ವಿನಿಮಯವನ್ನು ಸಹ ಶಕ್ತಗೊಳಿಸುತ್ತದೆ. ಇದು ಭಾರತದ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ಕ್ಕೆ ಉಪಯುಕ್ತವಾಗಲಿದೆ.
ಚಂದ್ರಯಾನ-4 ಮೂಲಕ ಚಂದ್ರನ ಮೇಲ್ಮೈಯಿಂದ ಭೂಮಿಗೆ ಮಾದರಿಗಳನ್ನು ತರಲು ಇಸ್ರೋ ಗುರಿ ಹೊಂದಿದೆ. ಎರಡು ರಾಕೆಟ್‌ಗಳ ಮೂಲಕ ವಿಭಿನ್ನ ಮಾಡ್ಯೂಲ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇವುಗಳನ್ನು ಹಂತ ಹಂತವಾಗಿ ಭೂಮಿ ಮತ್ತು ಚಂದ್ರನ ಕಕ್ಷೆಗಳಲ್ಲಿ ಡಾಕ್ ಮಾಡಬೇಕಾಗಿದೆ. ಡಾಕಿಂಗ್ ವ್ಯವಸ್ಥೆಯು ಕಕ್ಷೆಯಲ್ಲಿರುವ ಉಪಗ್ರಹಗಳ ದುರಸ್ತಿಕಾರ್ಯ, ಇಂಧನ ತುಂಬುವಿಕೆ ಮತ್ತು ಆಧುನೀಕರಣಕ್ಕೆ ಉಪಯುಕ್ತವಾಗಲಿದೆ. ಇದು ಆ ಉಪಗ್ರಹಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ದೊಡ್ಡ ತಪ್ಪು ಮಾಡಿದ ಧನರಾಜ್.. ‘ಮನೆಯ ಮುಖ್ಯದ್ವಾರದ ಮೂಲಕ..’ ಎಂದ ಬಿಗ್ಬಾಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ