/newsfirstlive-kannada/media/post_attachments/wp-content/uploads/2024/09/JOBS_ISRO.jpg)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಬಾಹ್ಯಾಕಾಶದ ಬಗ್ಗೆ ಅಪಾರ ಜ್ಞಾನ ಹೊಂದಿದ ಹಾಗೂ ಬಾಹ್ಯಾಕಾಶ ಕುರಿತು ಸಾಕಷ್ಟು ಕುತೂಹಲ ಇರುವಂತ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.
ಇಸ್ರೋ ಅಡಿ ಬರುವಂತ ವುಮೆನ್​ ಸ್ಪೆಸ್​ ಫ್ಲೈಟ್​ ಸೆಂಟ್ರ (ಹೆಚ್​​ಎಫ್​ಎಸ್​ಸಿ)ನಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೆಡಿಕಲ್ ಆಫೀಸರ್, ಸೈಂಟಿಸ್ಟ್​/ ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಟಿಕ್ನಿಷಿಯನ್-ಬಿ, ಡ್ರಾಟ್ಸ್​​​​ಮ್ಯಾನ್-ಬಿ ಹಾಗೂ ಅಸಿಸ್ಟೆಂಟ್ ರಾಜಭಾಷಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಇಸ್ರೋದ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಅಪ್ಲೇ ಮಾಡಬೇಕು.
ಎಷ್ಟು ಹುದ್ದೆಗಳು ಹಾಗೂ ಆ ಹುದ್ದೆಗಳ ಹೆಸರು..?
- ಮೆಡಿಕಲ್ ಆಫೀಸರ್- 3
- ಸೈಂಟಿಸ್ಟ್​/ ಇಂಜಿನಿಯರ್- 10
- ಟೆಕ್ನಿಕಲ್ ಅಸಿಸ್ಟೆಂಟ್- 28
- ಸೈಂಟಿಫಿಕ್ ಅಸಿಸ್ಟೆಂಟ್- 01
- ಟಿಕ್ನಿಷಿಯನ್-ಬಿ- 43
- ಡ್ರಾಟ್ಸ್​​​​ಮ್ಯಾನ್-ಬಿ- 13
- ಅಸಿಸ್ಟೆಂಟ್ ರಾಜಭಾಷಾ- 01
ಒಟ್ಟು ಪೋಸ್ಟ್​ಗಳು- 99
ವಯೋಮಿತಿ;
- ಸೈಂಟಿಸ್ಟ್​/ಇಂಜಿನಿಯರ್- 18 ರಿಂದ 30 ವರ್ಷಗಳು
- ಅಸಿಸ್ಟೆಂಟ್ ರಾಜಭಾಷಾ- 18 ರಿಂದ 28 ವರ್ಷಗಳು
- ಉಳಿದಂತ ಎಲ್ಲ ಹುದ್ದೆಗೆ- 18 ರಿಂದ 35 ವರ್ಷಗಳು
ವಿದ್ಯಾರ್ಹತೆ;
- ಟಿಕ್ನಿಷಿಯನ್-ಬಿ, ಡ್ರಾಟ್ಸ್​​​​ಮ್ಯಾನ್-ಬಿ= ಐಟಿಐ ಸಂಬಂಧಿತ ಕೋರ್ಸ್
- ಟಿಕ್ನಿಷಿಯನ್ ಅಸಿಸ್ಟೆಂಟ್= ಡಿಪ್ಲೋಮಾ ಇನ್ ಇಂಜಿನಿಯರಿಂಗ್ (ಶೇ.60 ಅಂಕಗಳು)
- ಸೈಂಟಿಸ್ಟ್​/ ಇಂಜಿನಿಯರ್= ಎಂಇ/ಎಂಟೆಕ್, ಬಿಇ/ಬಿಟೆಕ್
- ಅಸಿಸ್ಟೆಂಟ್ ರಾಜಭಾಷಾ= ಪದವಿ (ಶೇ.60 ಅಂಕಗಳು)
- ಮೆಡಿಕಲ್ ಆಫೀಸರ್- ಎಂಬಿಬಿಎಸ್​, ಎಂಡಿ
- ಸೈಂಟಿಫಿಕ್ ಅಸಿಸ್ಟೆಂಟ್- ಬಿಎಸ್​​ಸಿ (ಶೇ.60 ಅಂಕಗಳು)
ಅರ್ಜಿ ಶುಲ್ಕ-
ಇಲಾಖೆ ಈ ಬಗ್ಗೆ ಮಾಹಿತಿ ನೀಡಿಲ್ಲ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
- ಲಿಖಿತ ಪರೀಕ್ಷೆ
- ಸ್ಕಿಲ್ ಟೆಸ್ಟ್​
- ಮೆಡಿಕಲ್ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಸಂಬಳ- ಹೆಚ್​​ಎಫ್​ಎಸ್​ಸಿ ನಿಯಮದಂತೆ ನಿಗದಿ ಮಾಡಲಾಗುತ್ತದೆ
ಅಪ್ಲೇ ಮಾಡಲು ಪ್ರಾರಂಭದ ದಿನಾಂಕ- 2024ರ ಸೆಪ್ಟೆಂಬರ್​ 19
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 2024ರ ಅಕ್ಟೋಬರ್ 09
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ