ISRO 300ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಕೊನೆ ದಿನಾಂಕ ಯಾವುದು?

author-image
Bheemappa
Updated On
ಯುಜಿಸಿ ಇಂದ ಗುಡ್​ನ್ಯೂಸ್;​ ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಇನ್ಮುಂದೆ NET ಅಗತ್ಯ ಇಲ್ಲ
Advertisment
  • ಯಾವ್ಯಾವ ಉದ್ಯೋಗಗಳನ್ನು ಇಸ್ರೋ ಆಹ್ವಾನ ಮಾಡಿದೆ?
  • ಅರ್ಜಿ ಸಲ್ಲಿಕೆ ಮಾಡುವ ಲಿಂಕ್ ಈ ಲೇಖನದಲ್ಲಿ ನೀಡಲಾಗಿದೆ
  • ಇಸ್ರೋ ಸಂಸ್ಥೆ ಒಟ್ಟು ಎಷ್ಟು ಹುದ್ದೆಗಳನ್ನ ಆಹ್ವಾನ ಮಾಡಿದೆ..?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದರಡಿ ಬರುವ ಕೇಂದ್ರಿಕೃತ ನೇಮಕಾತಿ ಮಂಡಳಿ (ಐಸಿಆರ್​ಬಿ) ಇಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. 300ಕ್ಕೂ ಅಧಿಕ ಹುದ್ದೆಗಳು ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಲ್ಲಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು.

ಐಸಿಆರ್​ಬಿ ಹಲವಾರು ತಾಂತ್ರಿಕ ವಿಭಾಗಗಳಲ್ಲಿನ ಹುದ್ದೆಗಳು ಇವಾಗಿದ್ದು ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಇದೊಂದು ಸುವರ್ಣಾವಕಾಶ ಆಗಿದೆ. ಉದ್ಯೋಗಗಳ ಅರ್ಹತಾ ಮಾನದಂಡಗಳು, ಅರ್ಜಿ ನಮೂನೆ, ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ, ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ. ಅಭ್ಯರ್ಥಿಗಳು ಆನ್​​ಲೈನ್​ ಮೂಲಕ ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಒಟ್ಟು ಉದ್ಯೋಗಗಳು- 320

ಇದನ್ನೂ ಓದಿ: ಹುದ್ದೆಗಳಿಗೆ ಅರ್ಜಿ ಆಹ್ವಾನ.. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ರೆ 50 ಸಾವಿರಕ್ಕಿಂತ ಹೆಚ್ಚು ಸ್ಯಾಲರಿ

publive-image

ಹುದ್ದೆ ಹೆಸರು, ಎಷ್ಟು ಉದ್ಯೋಗಗಳು? ಉದ್ಯೋಗಗಳ ವಿಂಗಡಣೆ

ವಿಜ್ಞಾನಿ ಅಥವಾ ಇಂಜಿನಿಯರ್ ‘ಎಸ್​ಸಿ’ (ಎಲೆಕ್ಟ್ರಾನಿಕ್ಸ್)- 113
ಸೈಂಟಿಸ್ಟ್​/ ಇಂಜಿನಿಯರ್ ‘ಎಸ್​ಸಿ’ (ಮೆಕಾನಿಕಲ್)- 160
ಸೈಂಟಿಸ್ಟ್​/ ಇಂಜಿನಿಯರ್ ‘ಎಸ್​ಸಿ’ (ಕಂಪ್ಯೂಟರ್​ ಸೈನ್ಸ್)- 44
ಸೈಂಟಿಸ್ಟ್​/ ಇಂಜಿನಿಯರ್ ‘ಎಸ್​ಸಿ’ (ಎಲೆಕ್ಟ್ರಾನಿಕ್ಸ್​) ಪಿಆರ್​ಎಲ್- 02
ಸೈಂಟಿಸ್ಟ್​/ ಇಂಜಿನಿಯರ್ ‘ಎಸ್​ಸಿ’ (ಕಂಪ್ಯೂಟರ್​ ಸೈನ್ಸ್) ಪಿಆರ್​ಎಲ್- 01

ವಿದ್ಯಾರ್ಹತೆ
ಇಂಜಿನಿಯರಿಂಗ್​ ಪದವಿ (ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಕಂಪ್ಯೂಟರ್​ ಸೈನ್ಸ್)

ವಯೋಮಿತಿ- 28 ವರ್ಷಗಳು

ಅರ್ಜಿ ಶುಲ್ಕ ಎಷ್ಟು ಇದೆ?

ಎಲ್ಲ ಅಭ್ಯರ್ಥಿಗಳಿಗೆ- 250 ರೂಪಾಯಿ ಜೊತೆಗೆ ಸಂಸ್ಕರಣಾ ಶುಲ್ಕ (Processing Fee) 750 ರೂಪಾಯಿಗಳು

ಆಯ್ಕೆ ಪ್ರಕ್ರಿಯೆ ಹೇಗಿದೆ?
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಕೆಗೆ ಲಿಂಕ್-https://apps.ursc.gov.in/CentralBE-2025A/advt.jsp

ಈ ಹುದ್ದೆಗೆ ಸಂಬಂಧಿಸಿದ ಮುಖ್ಯ ದಿನಗಳು
ಅರ್ಜಿ ಸಲ್ಲಿಕೆ ಮಾಡುವ ಆರಂಭದ ದಿನಾಂಕ- 27 ಮೇ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 16 ಜೂನ್ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment