Breaking: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. ಭೂ ವೀಕ್ಷಣಾ ಕಿರು ಉಪಗ್ರಹ ಯಶಸ್ವಿ ಉಡಾವಣೆ

author-image
Veena Gangani
Updated On
Breaking: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. ಭೂ ವೀಕ್ಷಣಾ ಕಿರು ಉಪಗ್ರಹ ಯಶಸ್ವಿ ಉಡಾವಣೆ
Advertisment
  • ಮೊದಲು 2022 ಆಗಸ್ಟ್ 7ರಂದು ಉಡಾವಣೆ ಮಾಡಲಾಗಿತ್ತು
  • ಆಂಧ್ರ ಪ್ರದೇಶದ ಶೀಹರಿಕೋಟದಿಂದ ಉಡಾವಣೆ ಆಗಿದೆ
  • ಬೆಳಗ್ಗೆ 9.17ಕ್ಕೆ ಉಡಾವಣೆಯಾದ ಕಿರು ಉಪಗ್ರಹ

ಶ್ರೀಹರಿಕೋಟ: ಹೆಮ್ಮೆಯ ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಊರಿದೆ. ಆಂಧ್ರ ಪ್ರದೇಶದ ಶೀಹರಿಕೋಟದಿಂದ ಬೆಳಗ್ಗೆ 9.17ಕ್ಕೆ ಸರಿಯಾಗಿ ಭೂ ವೀಕ್ಷಣಾ ಕಿರು ಉಪಗ್ರಹವನ್ನು (EOS-08) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಇದನ್ನೂ ಓದಿ:ಮದುವೆ ಆದ ಹೊಸ ಜೋಡಿ ತಿನ್ನಲೇಬೇಕು ಈ ಪಾನ್​​.. ಅಬ್ಬಬ್ಬಾ! ಇದರ ಬೆಲೆ 1 ಲಕ್ಷ ರೂ!

publive-image

ಪರಿಸರದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಸುಮಾರು 176 ಕೆ.ಜಿ. ತೂಕದ ಭೂ ವೀಕ್ಷಣಾ ಕಿರು ಉಪಗ್ರಹ(Earth Observation Satellite-8) ಎಸ್‌ಎಸ್‌ಎಲ್‌ವಿ-ಡಿ3 ಇಒಎಸ್‌-08ರ ಉಡಾವಣೆ ಮಾಡಲಾಗಿದೆ. ಬೆಳಗ್ಗೆ 8:50ರಿಂದಲೇ ಇಸ್ರೋ ಸಂಸ್ಥೆ ಲೈವ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತ್ತು. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್ ಇದಾಗಿದೆ. ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಕಕ್ಷೆಯಲ್ಲಿ ವೃತ್ತಾಕಾರದಲ್ಲಿ ಪರಿಭ್ರಮಣೆ ನಡೆಸಲಿದೆ.

ಈ ಭೂ ವೀಕ್ಷಣಾ ಕಿರು ಉಪಗ್ರಹ ಒಂದು ವರ್ಷ ಕಾರ್ಯ ನಿರ್ವಹಿಸಲಿದೆ. ಎಸ್‌ಎಸ್‌ಎಲ್‌ವಿ ಮೂರು ಹಂತಗಳ ಕಡಿಮೆ ವೆಚ್ಚದ ಉಡ್ಡಯನ ವಾಹನ ಇದಾಗಿದೆ. ಸಣ್ಣ ಉಪಗ್ರಹ ಉಡಾವಣ ವಾಹನ ಈ ಉಪಗ್ರಹವನ್ನು ಹೊತ್ತೊಯ್ದಿದೆ. ಇದು ಎಸ್‌ಎಸ್‌ಎಲ್‌ವಿಯ ಮೂರನೇ ಹಾಗೂ ಕೊನೆಯ ಉಡಾವಣೆಯಾಗಿದೆ. ಬಾಹ್ಯಾಕಾಶಕ್ಕೆ ಕೇವಲ 500 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಎಸ್‌ಎಸ್‌ಎಲ್‌ವಿ ಯನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಅದನ್ನು ಇಸ್ರೋ ಅಭಿವೃದ್ಧಿಪಡಿಸಿದೆ.


">August 16, 2024

ಆಗಸ್ಟ್ 7, 2022ರಂದು ಮೊದಲ ಉಡಾವಣೆ ಮಾಡಲಾಗಿತ್ತು. ಫೆಬ್ರವರಿ 10, 2023ರಂದು ಎರಡನೇ ಎಸ್ಎಸ್ಎಲ್‌ವಿ ಅಭಿವೃದ್ಧಿ ಹಾರಾಟ ನಡೆದಿತ್ತು. ಇಂದು ಮೂರನೇ ಹಾಗೂ ಅಂತಿಮ D3 ಉಡಾವಣೆ ಮಾಡಲಾಗಿದೆ. ಈ ಬಗ್ಗೆ ಇಸ್ರೋ ಸಂಸ್ಥೆಯೂ ಅಧಿಕೃತವಾಗಿ ಮಾಹಿತಿ ನೀಡಿದೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment