/newsfirstlive-kannada/media/post_attachments/wp-content/uploads/2024/08/ISRO.jpg)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಕುರಿತು 5 ದಿನಗಳ ಕಾಲ ಉಚಿತ ಆನ್‌ಲೈನ್ ಕೋರ್ಸ್ ನಡೆಸುತ್ತಿದ್ದು ಆಸಕ್ತ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವೀನ್ಯತೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ AI ಮತ್ತು ML ವಿಷಯಗಳನ್ನು ಒಳಗೊಂಡ 5 ದಿನಗಳ ಉಚಿತ ಕೋರ್ಸ್ ಅನ್ನು ಆಗಸ್ಟ್ 19 ರಿಂದ 24 ರವರೆಗೆ ಇಸ್ರೋ ನಡೆಸಿಕೊಡಲಿದೆ. ಅಂದರೆ 5 ದಿನಗಳ ಕಾಲ ಐಐಆರ್ಎಸ್ ಔಟ್ರೀಚ್ ಕಾರ್ಯಕ್ರಮದ ಭಾಗವಾಗಿದೆ. ಇದು ಬಾಹ್ಯಾಕಾಶ ವಲಯದಲ್ಲಿ ಮತ್ತು ಅದರಾಚೆಗೆ ನಾವೀನ್ಯತೆ ಹೆಚ್ಚಿಸುವ ಗುರಿ ಹೊಂದಿದೆ. ಈ ಆನ್‌ಲೈನ್ ಕೋರ್ಸ್ನಲ್ಲಿ ಸಂಪೂರ್ಣವಾಗಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ₹200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ.. ಭಾರತದ ಇತಿಹಾಸದಲ್ಲೇ ಹೊಸ ದಾಖಲೆ!
ಇಸ್ರೋದ ಈ ಆನ್‌ಲೈನ್ ಕೋರ್ಸ್ ಅನ್ನು ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಕ್ಷೇತ್ರಗಳ ಸಂಶೋಧಕರಿಗಾಗಿ ಸಿದ್ಧತೆ ಮಾಡಲಾಗಿದೆ. AI, ML ಕುರಿತ ಆಳವಾದ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಐಐಆರ್ಎಸ್-ಇಸ್ರೋದ ಇ- ಕ್ಲಾಸ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ತರಗತಿ ನಡೆಸಲಾಗುತ್ತದೆ. ಸ್ಲೈಡ್‌ಗಳು, ಓಪನ್ ಸೋರ್ಸ್ ಸಾಫ್ಟ್‌ವೇರ್, ರೆಕಾರ್ಡ್ ಮಾಡಿದ ವೀಡಿಯೊಗಳಿಂದ ಕ್ಲಾಸ್ ತೆಗೆದುಕೊಳ್ಳಲಾಗುತ್ತೆ. ನಿಮಗೆ ಉತ್ತಮ ಇಂಟರ್ನೆಟ್ ಹಾಗೂ ಮೂಲ ಕಂಪ್ಯೂಟರ್ ಹಾರ್ಡ್‌ವೇರ್ ಅಗತ್ಯವಿರುತ್ತದೆ.
ಇದನ್ನೂ ಓದಿ: ನೋ ಬಾಲ್‌ಗೆ ಮಕ್ಕಳ ಗಲಾಟೆ.. ಬ್ಯಾಟ್ನಿಂದ ಹೊಡೆದು ಬಾಲಕನ ಹತ್ಯೆ; ಆದರೂ ಮಾನವೀಯತೆ ಮೆರೆದ ತಾಯಿ!
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ- https://elearning.iirs.gov.in/edusatregistration/
ಕೋರ್ಸ್ ವೇಳಾಪಟ್ಟಿ
ಇಸ್ರೋದ ಈ ಆನ್‌ಲೈನ್ ಕ್ಲಾಸ್ಗಳು ಆಗಸ್ಟ್ 19 ರಿಂದ 24ರವರೆಗೆ ಸಂಜೆ 4 ಗಂಟೆಯಿಂದ 5:30ರವರೆಗೆ ಇರುತ್ತವೆ. ಅಂದರೆ ಒಂದೂವರೆ ಗಂಟೆ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ.
- ಆಗಸ್ಟ್ 19: ಡಾ.ಪೂನಾಂ ಸೇಠ್ ತೀವಾರಿಯಿಂದ AI/ML ಹಾಗೂ DL ಸಂಬಂಧಿಸಿದ ಇಂಟ್ರಡಕ್ಷನ್
- ಆಗಸ್ಟ್ 20: ಡಾ.ಹಿನಾ ಪಾಂಡೆ ಯಂತ್ರ ಕಲಿಕೆಯಲ್ಲಿನ ವಿಧಾನಗಳು, ಮೇಲ್ವಿಚಾರಣೆ ಮತ್ತು ಬಲವರ್ಧನೆ ಕುರಿತು ತಿಳಿಸಿಕೊಡಲಿದ್ದಾರೆ.
- ಆಗಸ್ಟ್ 21: ಡಾ.ಪೂನಾಂ ಸೇಠ್ ತೀವಾರಿಯಿಂದ ಡೀಪ್ ಲರ್ನಿಂಗ್ ಅಪ್ಲಿಕೇಶನ್ಗಳ ಬಗ್ಗೆ ತರಗತಿ.
- ಆಗಸ್ಟ್ 22: ಡಾ.ಕಮಲಾ ಪಾಂಡ್ಯ ಗೂಗಲ್ ಅರ್ಥ್ ಎಂಜಿನ್ ಮೂಲಕ ಮಷಿನ್ ಲರ್ನಿಂಗ್ ಬಗ್ಗೆ ಹೇಳಿಕೊಡಲಿದ್ದಾರೆ
- ಆಗಸ್ಟ್ 23: ರವಿ ಭಂಡಾರಿಯಿಂದ ಫೈಥಾನ್ ಫಾರ್ ಮಷಿನ್ (Python for Machine) ಬಗ್ಗೆ ಕ್ಲಾಸ್ ಮಾಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ