/newsfirstlive-kannada/media/post_attachments/wp-content/uploads/2024/12/ISRO.jpg)
ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಜಾಗತಿಕ ಬಾಹ್ಯಾಕಾಶ ಆವಿಷ್ಕಾರ ಹಾಗೂ ಸಹಯೋಗಕ್ಕೆ ಕೈಜೋಡಿಸಿರುವ ಇಸ್ರೋ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ-3 ನೌಕೆಯನ್ನ ಯಶಸ್ವಿಯಾಗಿ ನಭಕ್ಕೆ ಹಾರಿಸಿದೆ. ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಮಿಷನ್ ಆಗಿದ್ದು ಯಶಸ್ವಿ ಉಡ್ಡಯನ ನಡೆದಿದೆ.
ಸೂರ್ಯನ ಅಧ್ಯಯನ, ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ
550 ಕೆಜಿ ತೂಕದ ಪ್ರೋಬಾ- 3 ಮಿಷನ್ ಅನ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್‌ಎಲ್‌ವಿ ಸಿ-59 ರಾಕೆಟ್ ಮೂಲಕ ನಭಕ್ಕೆ ಹಾರಿಸಲಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎರಡು ಉಪಗ್ರಹಗಳನ್ನ ಹೊತ್ತ ಇಸ್ರೋ ವಿಶ್ವಾಸಾರ್ಹ ಪಿಎಸ್‌ಎಲ್‌ವಿ ರಾಕೆಟ್ ಅನ್ನ ಡಿ.5ರಂದು ಸಂಜೆ 4 ಗಂಟೆ 4 ನಿಮಿಷಕ್ಕೆ ಇಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಿದೆ. ಅಂದಾಜು 9.2 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನೌಕೆಯನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ ನಿರ್ಮಾಣ ಮಾಡಿದ್ದು 2 ವರ್ಷಗಳ ಕಾಲ ಸೂರ್ಯನ ಅಧ್ಯಯನ ಮಾಡಲಿದೆ. ಈ ಎರಡು ವರ್ಷದ ಅವಧಿಯಲ್ಲಿ ಸರಿಸುಮಾರು 6 ಗಂಟೆಗಳ ಕಾಲ ಕೃತಕ ಸೂರ್ಯಗ್ರಹಣವನ್ನು ಈ ನೌಕೆ ಉಂಟು ಮಾಡಲಿದೆ.
ಪ್ರಮುಖ ಅಂಶಗಳು!
- ಪ್ರೋಬಾ 3 ಕರೋನಾಗ್ರಾಫ್, ಅಕಲ್ಟರ್ ಉಪಗ್ರಹಗಳನ್ನ ಹೊಂದಿದೆ
- ಸೂರ್ಯನಿಗಿಂತ ಬಿಸಿಯಾಗಿರುತ್ತೆ, ಹವಾಮಾನವನ್ನು ನಿರ್ಧರಿಸುತ್ತೆ
- ಸೌರ ರಿಮ್ ಅನ್ನ ತಲುಪಲು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ
- ಅಪೇಕ್ಷಿತ ಕಕ್ಷೆಯನ್ನು ತಲುಪಲು 18 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ
ಇನ್ನು ಈ ಫ್ರೋಬಾದ ಶಕ್ತಿ-ಸಾಮರ್ಥ್ಯವನ್ನು ನೋಡೋದಾದ್ರೆ...
- ಪ್ರೋಬಾ-3 ರಾಕೆಟ್ 5 ವಿಭಾಗಗಳನ್ನ ಒಳಗೊಂಡಿದೆ
- 5 ವಿಭಾಗಗಳು ಸುಮಾರು 30 ಟನ್ ತೂಕವನ್ನ ಹೊಂದಿದೆ
- ಮೋಟಾರುಗಳ ಮೇಲೆ ಸ್ಟ್ರಾಪ್ ಅನ್ನು ಜೋಡಿಸಲಾಗಿದೆ
- ಪ್ರತಿಯೊಂದರಲ್ಲೂ 12 ಟನ್ಗಳಷ್ಟು ಪ್ರೊಪೆಲ್ಲಂಟ್ ಇರುತ್ತೆ
ಇದನ್ನೂ ಓದಿ:Breaking: ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು.. ಭೂ ವೀಕ್ಷಣಾ ಕಿರು ಉಪಗ್ರಹ ಯಶಸ್ವಿ ಉಡಾವಣೆ
ಪ್ರೊಬಾ ಎಂಬುದು ಲ್ಯಾಟಿನ್ ಪದ. ಪ್ರಯತ್ನಿಸೋಣ ಎಂಬುದು ಇದರ ಅರ್ಥ. ಆರಂಭದಲ್ಲಿ ನೌಕೆಯ ಉಡಾವಣೆ ಬುಧವಾರ ನಿಗದಿಪಡಿಸಲಾಗಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಕೊನೆಯ ಕ್ಷಣದಲ್ಲಿ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿತ್ತು. ಅದರಂತೆ ನೌಕೆಯು ಡಿಸೆಂಬರ್ 5 ರಂದು ಯಶಸ್ವಿಯಾಗಿ ಉಡಾವಣೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ