newsfirstkannada.com

Video: ದೇಶದ ಮೊದಲ ‘ಪುಷ್ಪಕ್’ ಲ್ಯಾಂಡಿಂಗ್ ಸಕ್ಸಸ್​; ಚಳ್ಳಕೆರೆಯಲ್ಲಿ ನಡೆದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

Share :

Published March 22, 2024 at 12:19pm

Update March 22, 2024 at 12:20pm

    ಏರೋ ನಾಟಿಕಲ್ ಟೆಸ್ಟ್ ರೇಂಜ್-2ನಲ್ಲಿ ಯಶಸ್ವಿ ಲ್ಯಾಂಡಿಂಗ್

    ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್​ನಿಂದ ಕೆಳಗೆ ಬಿಡುಗಡೆ

    4.5 ಕಿಲೋ ಮೀಟರ್‌ ಎತ್ತರದಿಂದ ಬಿಡುಗಡೆ ಮಾಡಲಾಗಿತ್ತು

ಚಿತ್ರದುರ್ಗ: ಇಸ್ರೋ (Indian Space Research Organisation)ದ ಆರ್​ಎಲ್​ವಿ ‘ಪುಪ್ಪಕ್’ ಲ್ಯಾಂಡಿಂಗ್ ಪರೀಕ್ಷೆಯು ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಜಿಲ್ಲೆಯ ಚಳ್ಳಕೆರೆಯಲ್ಲಿ ತಾಲೂಕಿನ DRDO ನಡೆಸಿದ ಪರೀಕ್ಷಾರ್ಥ ಪ್ರಯೋಗ ಸಕ್ಸಸ್ ಆಗಿದೆ.

ಇಸ್ರೋದ ಸಾಧನೆಯು ಭಾರತದ ಬಾಹ್ಯಾಕಾಶ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವುದಾಗಿದೆ. ಪುಪ್ಪಕ್ ಆರ್​ಎಲ್​ವಿ ಎಸ್ರೋದ ಮರುಬಳಕೆ ಲಾಂಚ್ ವೆಹಿಕಲ್ (Reusable Launch Vehicle) ಆಗಿದೆ. DRDO ಏರೋ ನಾಟಿಕಲ್ ಟೆಸ್ಟ್ ರೇಂಜ್ -2ನಲ್ಲಿ ನಡೆಸಿದ ಹಾರಾಟ ಯಶಸ್ವಿಯಾಗಿದೆ.

21ನೇ ಶತಮಾನದ ಪುಷ್ಪಕ ವಿಮಾನ ಎಂದು ಪ್ರಸಿದ್ಧಿಯಾಗಿರುವ ಪುಷ್ಪಕ್ ರಾಕೆಟ್ ಹಾರಾಟ ಇದಾಗಿದೆ. ಈ ಮೂಲಕ ಸ್ಪೇಸ್ ಶಿಪ್ ಪ್ರಯೋಗದಲ್ಲಿ ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ DRDOನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ.

ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ 4.5 ಕಿಲೋಮೀಟರ್‌ಗಳಷ್ಟು ಎತ್ತರದಿಂದ ಬಿಡುಗಡೆ ಮಾಡಲಾಯಿತು. ನಂತರ SUV ಗಾತ್ರದ ವಿಂಗ್ಡ್ ವೆಹಿಕಲ್ ರನ್‌ವೇಯಲ್ಲಿ ಆರಾಮಾಗಿ ಇಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ದೇಶದ ಮೊದಲ ‘ಪುಷ್ಪಕ್’ ಲ್ಯಾಂಡಿಂಗ್ ಸಕ್ಸಸ್​; ಚಳ್ಳಕೆರೆಯಲ್ಲಿ ನಡೆದ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

https://newsfirstlive.com/wp-content/uploads/2024/03/RLV.jpg

Load More