Advertisment

ಇಸ್ರೋದ ಸ್ಪೇಡೆಕ್ಸ್​ ಯೋಜನೆ ಉಪಗ್ರಹ ಉಶಸ್ವಿ ಉಡಾವಣೆ: ಬಾಹ್ಯಾಕಾಶ ಸಂಸ್ಥೆಯಿಂದ ಮತ್ತೊಂದು ಸಾಧನೆ

author-image
Gopal Kulkarni
Updated On
ಇಸ್ರೋದ ಸ್ಪೇಡೆಕ್ಸ್​ ಯೋಜನೆ ಉಪಗ್ರಹ ಉಶಸ್ವಿ ಉಡಾವಣೆ: ಬಾಹ್ಯಾಕಾಶ ಸಂಸ್ಥೆಯಿಂದ ಮತ್ತೊಂದು ಸಾಧನೆ
Advertisment
  • ಭಾರತೀಯರ ಹೆಮ್ಮೆ ಇಸ್ರೋ ವಿಜ್ಞಾನಿಗಳ ಮತ್ತೊಂದು ಮಹಾ ಸಾಧನೆ
  • ಬಾಹ್ಯಾಕಾಶ ಸಂಸ್ಥೆಯ ಸ್ಪೇಡೆಕ್ಸ್ ಯೋಜನೆ ಉಪಗ್ರಹ ಉಡಾವಣೆ ಯಶಸ್ವಿ
  • ಸ್ಪೇಡೆಕ್ಸ್ ಯೋಜನೆ ಯಶಸ್ವಿಯಿ ಉಡಾವಣೆಯಿಂದ ಏನೆಲ್ಲಾ ಲಾಭಗಳಿವೆ?

ಚಂದ್ರಯಾನ 3 ಸೇರಿದಂತೆ ಹಲವು ಮಹತ್ವದ ಮೈಲಿಗಲ್ಲು ನಿರ್ಮಿಸಿರುವ ಇಸ್ರೋ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ನೌಕೆಗಳ ಡಾಕಿಂಗ್ ಮಾಡುವ ಪ್ರಯೋಗದಲ್ಲಿ ಆರಂಭಿಕ ಯಶಸ್ಸು ಕಂಡಿದೆ. ಇಸ್ರೋ SpaDeX ಉಡಾವಣೆ ಯಶಸ್ವಿಯಾಗಿದೆ.

Advertisment

ಇಸ್ರೋದ ಸ್ಪೇಡೆಕ್ಸ್​ ಯೋಜನೆ ಉಪಗ್ರಹ ಉಶಸ್ವಿ ಉಡಾವಣೆ
ಜಗತ್ತಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಪೈಕಿ ಭಾರತದ ಇಸ್ರೋ ತನ್ನದೇಯಾದ ಹೆಗ್ಗುರುತು ಹೊಂದಿದೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರಯಾನ3 ಸೇರಿದಂತೆ ಹಲವು ಯಶಸ್ವಿ ಯೋಜನೆಗಳನ್ನು ಇಸ್ರೋ ಸಾಧಿಸಿದೆ. ಇದೀಗ ಇಸ್ರೋ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ಡಾಕಿಂಗ್​ ಎಂಬ ಸಾಹಸದ ಮೊದಲ ಹೆಜ್ಜೆಯನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಮುಂದಡಿ ಇಟ್ಟಿದೆ.

ಇದನ್ನೂ ಓದಿ: ಜಾಮೀನು ಸಿಕ್ರೂ ತಪ್ಪದ ಸಂಕಷ್ಟ; ಇಂದು ದರ್ಶನ್​​ ವಿರುದ್ಧ ಪೊಲೀಸ್ರು ಸುಪ್ರೀಂಕೋರ್ಟ್​ ಮೊರೆ!

ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್ ಯೋಜನೆ ಭಾಗವಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-ಸಿ60 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಡಾಕಿಂಗ್​ ನಡೆಸುವ ಎರಡು ಉಪಗ್ರಹಗಳನ್ನ ಪಿಎಸ್​​ಎಲ್​​ವಿ-ಸಿ60 ನೌಕೆಯು ನಿನ್ನೆ ರಾತ್ರಿ ಕಕ್ಷೆಗೆ ಸೇರಿಸಲಾಯ್ತು. ಈ ಉಪಗ್ರಹಗಳು ಈಗಾಗ್ಲೆ ನಿಗದಿತ ಕಕ್ಷೆಗೆ ಸೇರಿವೆ. ಜನವರಿ ತಿಂಗಳಲ್ಲೇ ಅಂದರೆ ಇನ್ನು ಕೆಲವೇ ದಿನಗಳಲ್ಲಿ ಸ್ಪೇಸ್ ಡಾಕಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, 2ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡಲಾಗಿದೆ.

Advertisment

ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಇಸ್ರೋದಿಂದ ಮೊದಲ ಹೆಜ್ಜೆ!
ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಈವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದೆ. ಈ ಪ್ರಯೋಗ ಏನಾದ್ರು ಯಶಸ್ವಿ ಆದರೆ ಸ್ಪೇಡೆಕ್ಸ್‌ನಲ್ಲಿ ಯಶಸ್ವಿಯಾದ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಅಂತಿಮ ಹಂತದಲ್ಲಿ ಸಮಯ ಬದಲಾವಣೆ ಮಾಡಬೇಕಾಯ್ತು.. ರಾತ್ರಿ 9.58ಕ್ಕೆ ನಿಗಧಿಪಡಿಸಲಾಗಿದ್ದ ಸಮಯ ಬದಲಾವಣೆ ಮಾಡಲಾಗಿ, 10 ಗಂಟೆಗೆ ರಾಕೆಟ್ ಆಕಾಶದತ್ತ ಯಶಸ್ವಿಯಾಗಿ ಪ್ರಯಾಣ ಬೆಳಸಿತು.

ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್; ನ್ಯೂಇಯರ್‌ ಗುಂಗಲ್ಲಿದ್ದವರಿಗೆ ಸರ್ಕಾರದಿಂದ ಬಿಗ್​ ಶಾಕ್

ಬಾಹ್ಯಾಕಾಶದಲ್ಲಿ ಭಾರತದ ಕೇಂದ್ರ ಸ್ಥಾಪಿಸಲು ಸ್ಪೇಸ್ ಡಾಕಿಂಗ್ ಅತ್ಯವಶ್ಯಕವಾಗಿದೆ. ಇಷ್ಟೇ ಅಲ್ಲದೆ ಮುಂದಿನ ಇಸ್ರೋದ ಪ್ರಮುಖ ಯೋಜನೆಗಳಾದ ಮಾನವರಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರ ರವಾನೆ ಸೇರಿದಂತೆ ಹಲವು ಯೋಜನೆಗಳಿಗೆ ಸ್ಪೇಸ್ ಡಾಕಿಂಗ್ ಅತೀ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಸ್ರೋದ ಮೊದಲ ಪ್ರಯೋಗ ಯಶಸ್ವಿಯಾಗಿ ಉಡಾವಣಯಾಗಿದೆ.
2035 ರ ವೇಳೆಗೆ ಇಸ್ರೋ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿ ಹೊಂದಿದೆ. ಅದರ ಮುನ್ನುಡಿ ಎಂಬಂತೆ ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಈ ಡಾಕಿಂಗ್​​ ಪ್ರಯೋಗವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment