newsfirstkannada.com

ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ; ಇಂದು INSAT-3DS ಉಡಾವಣೆ; ಏನಿದು ಮಿಷನ್​..​?

Share :

Published February 17, 2024 at 6:06am

Update February 17, 2024 at 6:14am

    ಮತ್ತೊಂದು ಸಾಧನೆಯತ್ತ ಹೆಜ್ಜೆ ಹಾಕುತ್ತಿರೋ ನಮ್ಮ ಇಸ್ರೋ

    ಇಂದು ನಮ್ಮ ಹೆಮ್ಮೆಯ ಇಸ್ರೋದಿಂದ ಐತಿಹಾಸ ಕಾರ್ಯ..!

    INSAT-3DS ಉಡಾವಣೆಗೆ ಕ್ಷಣಗಣನೆ, ಏನಿದು ಹೊಸ ಮಿಷನ್​​?

ಇನ್ಸಾಟ್-3ಡಿಎಸ್ (ಸೆಕೆಂಡ್ ರಿಪೀಟ್) ಉಪಗ್ರಹವನ್ನು ಹವಾಮಾನ ಸರ್ವೇಕ್ಷಣೆಯನ್ನು ಉತ್ತಮಗೊಳಿಸಲು, ಮತ್ತು ಭೂ – ಸಾಗರ ಮೇಲ್ಮೈಗಳನ್ನು ಗಮನಿಸಿ, ನಿಖರ ಹವಾಮಾನ ಮುನ್ಸೂಚನೆ ನೀಡಲು, ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂತೆ ಮುನ್ಸೂಚನೆ ನೀಡಲು ನಿರ್ಮಿಸಲಾಗಿದೆ.

ಒಟ್ಟಾರೆಯಾಗಿ 2,274 ಕೆಜಿಗಳ ಉಡಾವಣಾ ತೂಕ ಹೊಂದಿರುವ ಇನ್ಸಾಟ್-3ಡಿಎಸ್ ಉಪಗ್ರಹ, ಭೂಸ್ಥಿರ ಕಕ್ಷೆಯಿಂದ ಕಾರ್ಯಾಚರಿಸುವ ಮೂರನೇ ತಲೆಮಾರಿನ ಹವಾಮಾನ ಮುನ್ಸೂಚನಾ ಉಪಗ್ರಹ ಸರಣಿಯ ಕಾರ್ಯಗಳನ್ನು ಮುಂದುವರಿಸಲಿದೆ. ಪ್ರಸ್ತುತ ಹವಾಮಾನ ಮಾಹಿತಿಗಳನ್ನು ಹವಾಮಾನ ವಿಜ್ಞಾನಿಗಳು ಪ್ರಸ್ತುತ ಕಾರ್ಯಾಚರಿಸುತ್ತಿರುವ ಉಪಗ್ರಹಗಳಾದ ಇನ್ಸಾಟ್-3ಡಿ (2013ರಲ್ಲಿ ಉಡಾವಣೆ) ಮತ್ತು ಸೆಪ್ಟೆಂಬರ್ 2016ರಲ್ಲಿ ಉಡಾವಣೆಗೊಂಡ ಇನ್ಸಾಟ್-3ಡಿಆರ್ (ರಿಪೀಟ್) ಉಪಗ್ರಹಗಳಿಂದ ಪಡೆದುಕೊಳ್ಳುತ್ತಿದ್ದಾರೆ. ನೂತನ ಉಪಗ್ರಹ ಯೋಜನೆಗೆ ಭೂ ವಿಜ್ಞಾನ ಸಚಿವಾಲಯ ಅವಶ್ಯಕ ಮೊತ್ತವನ್ನು ಒದಗಿಸಿದೆ.

ಭೂಮಿಯ ವಾತಾವರಣದ ಮೂಲಕ ಮೇಲಕ್ಕೆ ಚಿಮ್ಮುವಾಗ, ಉಪಗ್ರಹಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಆಗಿವ್ ಪೇಲೋಡ್ ಫೇರಿಂಗ್ ಎಂಬ ರಕ್ಷಣೆಯನ್ನು ಒದಗಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಆಗಿವ್ ಪೇಲೋಡ್ ಫೇರಿಂಗ್ ಉಪಗ್ರಹ ಬಾಹ್ಯಾಕಾಶಕ್ಕೆ ತೆರಳುವಾಗ, ಅಲ್ಲಿನ ಕಠಿಣ ವಾತಾವರಣದಿಂದ ಹಾನಿಗೊಳಗಾಗದಂತೆ ತಡೆಯುವ ರಕ್ಷಣಾ ಕವಚವಾಗಿದೆ. ಈ ರಕ್ಷಾ ಕವಚ ಏರೋಡೈನಾಮಿಕ್ ಆಕಾರದಲ್ಲಿದ್ದು (ಕೋನ್ ಆಕೃತಿ), ಉಪಗ್ರಹ ಮೇಲಕ್ಕೇರುವಾಗ ಸುಗಮವಾಗಿ ಸಾಗಲು ಅನುಕೂಲ ಕಲ್ಪಿಸುತ್ತದೆ. ಇನ್ಸಾಟ್-3ಡಿಎಸ್ ಉಪಗ್ರಹವನ್ನು ಜಿಎಸ್ಎಲ್‌ವಿ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಈ ಉಪಗ್ರಹ ಇನ್ಸಾಟ್-3ಡಿಆರ್ (ರಿಪೀಟ್) ಯೋಜನೆಯ ಮುಂದುವರಿದ ಅಧ್ಯಾಯವಾಗಿದೆ. ಇನ್ಸಾಟ್-3ಡಿಎಸ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಫೆಬ್ರವರಿ 17, 2024ರಂದು ಸಂಜೆ 5:35ಕ್ಕೆ ಉಡಾವಣೆಗೊಳಿಸಲು ಸಿದ್ಧತೆಗಳನ್ನು ನಡೆಸಲಾಗಿದೆ.

ಇಸ್ರೋದ ನೂತನ ಹವಾಮಾನ ಉಪಗ್ರಹ ಇನ್ಸಾಟ್-3ಡಿಎಸ್, ಒಂದು ಕಾಲದಲ್ಲಿ ಇಸ್ರೋದ ‘ನಾಟಿ ಬಾಯ್’ ಎಂದು ಕರೆಯಲ್ಪಡುತ್ತಿದ್ದ ರಾಕೆಟ್ ಜಿಎಸ್ಎಲ್‌ವಿ-ಎಫ್14 ಉಪಗ್ರಹದ ಮೂಲಕ ಉಡಾವಣೆಗೊಳ್ಳಲಿದೆ. ಇಸ್ರೋ ಈ ಕುರಿತು ಈಗಾಗಲೇ ಹೇಳಿಕೆ ನೀಡಿದ್ದು, ತನ್ನ 16ನೇ ಉಡಾವಣಾ ಯೋಜನೆಯಲ್ಲಿ ಜಿಯೋಸಿಂಕ್ರನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ) ಇನ್ಸಾಟ್-3ಡಿಎಸ್ ಹವಾಮಾನ ಉಪಗ್ರಹವನ್ನು ಜಿಯೋಸಿಂಕ್ರನಸ್ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ಗೆ ಅಳವಡಿಸಲಿದೆ. ಅದಾದ ಬಳಿಕ, ಹೆಚ್ಚಿನ ಚಲನೆಗಳನ್ನು ನಿರ್ವಹಿಸಿ, ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಜೋಡಿಸಲಾಗುತ್ತದೆ.

ಕಕ್ಷೆಯ ವರ್ಗಾವಣೆ ಮತ್ತು ಸವಾಲುಗಳು

ಜಿಯೋಸ್ಟೇಷನರಿ ಟ್ರಾನ್ಸ್‌ಫರ್ ಆರ್ಬಿಟ್ (ಜಿಟಿಒ) ಭೂಮಿಯ ಸುತ್ತಲೂ ಇರುವ, ಉಪಗ್ರಹಗಳನ್ನು ಉಡಾವಣೆಗೊಳಿಸಲು ಬಳಸಲಾಗುವ ಒಂದು ಅಂಡಾಕಾರದ ಪಥವಾಗಿದೆ. ಇದರ ಭೂಮಿಗೆ ಅತ್ಯಂತ ಸನಿಹದ ಬಿಂದು (ಪೆರಿಜೀ) ಭೂಮಿಯಿಂದ ಅಂದಾಜು 250 ಕಿಲೋಮೀಟರ್ (155 ಮೈಲಿ) ದೂರದಲ್ಲಿದ್ದರೆ, ಅತ್ಯಂತ ದೂರದ ಬಿಂದು (ಅಪೊಜೀ) 35,786 ಕಿಲೋಮೀಟರ್ ದೂರದಲ್ಲಿದೆ. ಅಂದರೆ, ಜಿಯೋಸಿಂಕ್ರನಸ್ ಕಕ್ಷೆಯ ಮೂಲಕ ಸಂಚರಿಸುವಾಗ, ಉಪಗ್ರಹ ಭೂಮಿಯಿಂದ ಅಂದಾಜು 35,786 ಕಿಲೋಮೀಟರ್ (22,236 ಮೈಲಿ) ಎತ್ತರದಲ್ಲಿ ಸಾಗುತ್ತದೆ. ಇದು ನೇರವಾಗಿ ಭೂಮಿಯ ಸಮಭಾಜಕ ವೃತ್ತದ ಮೇಲಿರುತ್ತದೆ.

ಜಿಟಿಒದ ದೀರ್ಘವೃತ್ತದ ಸ್ವಭಾವ ಜಿಯೋಸಿಂಕ್ರನಸ್ ಕಕ್ಷೆಯ ವೃತ್ತಾಕಾರದ ಆಕೃತಿಗೆ ವಿರುದ್ಧವಾಗಿರುತ್ತದೆ. ಆ ಮೂಲಕ ಉಪಗ್ರಹಗಳಿಗೆ ಭೂಮಿಯ ಮೇಲೆ ಒಂದು ನಿರ್ದಿಷ್ಟ ಬಿಂದುವಿನಲ್ಲಿ ಸ್ಥಿರವಾಗಿರಲು ಅನುಕೂಲ ಕಲ್ಪಿಸುತ್ತದೆ. ಇದು ಸಂವಹನ ನಡೆಸಲು ಮತ್ತು ಹವಾಮಾನ ವೀಕ್ಷಣೆ ನಡೆಸಲು ಅತ್ಯಂತ ಅನುಕೂಲಕರವಾಗಿದೆ.

ಇನ್ಸಾಟ್-3ಡಿಎಸ್ ಅನ್ನು ಕಕ್ಷೆಗೆ ಒಯ್ಯುವ ಜವಾಬ್ದಾರಿ ಹೊಂದಿರುವ ಜಿಎಸ್ಎಲ್‌ವಿ ಹೆಚ್ಚಿನ ವೈಫಲ್ಯದ ದರ ಹೊಂದಿತ್ತು. ಆದ್ದರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಮುಖ್ಯಸ್ಥರು ಈ ರಾಕೆಟ್ ಅನ್ನು ನಾಟಿ ಬಾಯ್ ಎಂದು ಕರೆದಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಈ ರಾಕೆಟ್ ತಾನು ಕೈಗೊಂಡ 15 ಉಡಾವಣೆಗಳ ಪೈಕಿ ಆರರಲ್ಲಿ ವೈಫಲ್ಯ ಅನುಭವಿಸಿದ್ದು, ಇದರ ವೈಫಲ್ಯದ ದರ 40% ಆಗಿದೆ.

ನವೀನ ಹವಾಮಾನಶಾಸ್ತ್ರದ ಉಪಕರಣಗಳು

ಇನ್ಸಾಟ್-3ಡಿಎಸ್ ಇಸ್ರೋದ ನಂಬಿಕಾರ್ಹ ಐ-2ಕೆ ಬಸ್ ವಿನ್ಯಾಸದಲ್ಲಿ ನಿರ್ಮಾಣಗೊಂಡಿದೆ. ಇನ್ಸಾಟ್-3ಡಿಎಸ್ 2,275 ಕೆಜಿಯಷ್ಟು ಉಡಾವಣಾ ತೂಕ ಹೊಂದಿದ್ದು, ಉತ್ತಮ ಹವಾಮಾನ ವೀಕ್ಷಣೆಗಾಗಿ ಆಧುನಿಕ ಉಪಕರಣಗಳನ್ನು ಹೊಂದಿದೆ.

ಒಂದು ಉಪಗ್ರಹ ಬಸ್ ಪ್ಲಾಟ್‌ಫಾರಂ ಎನ್ನುವುದು ಉಪಗ್ರಹದ ಮುಖ್ಯ ದೇಹ ಅಥವಾ ಚಾಸಿಸ್ ರೀತಿಯ ರಚನೆಯಾಗಿದೆ. ಇದು ಉಪಗ್ರಹದ ಎಲ್ಲ ವ್ಯವಸ್ಥೆಗಳನ್ನು ಹಿಡಿದಿಟ್ಟುಕೊಂಡು, ಉಪಗ್ರಹ ಕಾರ್ಯಾಚರಿಸುವಂತೆ ಮಾಡುತ್ತದೆ. ಅದಾದ ಬಳಿಕ, ಉಪಗ್ರಹದ ಉದ್ದೇಶಗಳಿಗೆ ಅನುಗುಣವಾಗಿ ಪೇಲೋಡ್‌ಗಳನ್ನು ಈ ಬಸ್‌ಗೆ ಅಳವಡಿಸಲಾಗುತ್ತದೆ.

ಐ-2ಕೆ ನಲ್ಲಿರುವ ಐ ಇಸ್ರೋ ಅಭಿವೃದ್ಧಿ ಪಡಿಸಿ, ಉಡಾವಣೆಗೊಳಿಸಿರುವ ಹವಾಮಾನ ಉಪಗ್ರಹ ಸರಣಿಯಾದ ಇನ್ಸಾಟ್‌ನ ಹೃಸ್ವರೂಪವಾಗಿದೆ. ಇಸ್ರೋ ಸಣ್ಣ ಮತ್ತು ಮಧ್ಯಮ ಗಾತ್ರದ ಉಪಗ್ರಹಗಳಿಗೆ ಕಾರ್ಯಾಚರಿಸುವ ನಿಟ್ಟಿನಲ್ಲಿ ಈ ಬಸ್ ಅನ್ನು ಅಭಿವೃದ್ಧಿ ಪಡಿಸಿದೆ. ಐ-2ಕೆ ಬಸ್ ಉಡಾವಣೆಯ ವೇಳೆ 1,500 ಕೆಜಿಯಿಂದ 2,500 ಕೆಜಿ ತೂಕ ಹೊಂದಿರುವ ಉಪಗ್ರಹಗಳಿಗೆ ಸೂಕ್ತವಾಗಿದೆ.

ಈ ಉಪಗ್ರಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಹವಾಮಾನ ಮುನ್ಸೂಚನೆಗೆ ನೆರವಾಗಬಲ್ಲ 6 ಚಾನೆಲ್ ಇಮೇಜರ್ ಮತ್ತು 19 ಚಾನೆಲ್ ಸೌಂಡರ್ ಉಪಕರಣಗಳನ್ನು ಒಳಗೊಂಡಿದೆ. ಈ ಉಪಕರಣಗಳು ಭೂ ಮೇಲ್ಮೈ ಮತ್ತು ಸಾಗರ ಪ್ರದೇಶದ ವೀಕ್ಷಣೆಗೆ, ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಅನುಕೂಲಕರವಾಗಿವೆ. ಆ ಮೂಲಕ ನಿಖರ ಹವಾಮಾನ ಮುನ್ಸೂಚನೆ ಮತ್ತು ವಿಪತ್ತಿನ ಮುನ್ಸೂಚನೆ ನೀಡಲು ಸಾಧ್ಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ಇನ್ಸಾಟ್-3ಡಿಎಸ್ ಡೇಟಾ ರಿಲೇ ಟ್ರಾನ್ಸ್‌ಪಾಂಡರ್ (ಡಿಆರ್‌ಟಿ) ಎಂಬ ಸಂವಹನ ಉಪಕರಣವನ್ನು ಮತ್ತು ಸ್ಯಾಟಲೈಟ್ ಏಯ್ಡೆಡ್ ಸರ್ಚ್ ಆ್ಯಂಡ್ ರೆಸ್ಕ್ಯೂ (ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣೆ) ಟ್ರಾನ್ಸ್‌ಪಾಂಡರ್ ಹೊಂದಿದೆ. ಡಿಆರ್‌ಟಿ ವಿವಿಧ ಸ್ವಯಂಚಾಲಿತ ಮಾಹಿತಿ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಿಂದ (ಎಡಬ್ಲ್ಯುಎಸ್) ಮಾಹಿತಿಗಳನ್ನು ಕಲೆಹಾಕಿ, ದೇಶದ ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ನಿಖರಗೊಳಿಸಲು ಸಹಾಯಕವಾಗಿದೆ. ಇನ್ನು ಎಸ್ಎಎಸ್&ಆರ್ ಟ್ರಾನ್ಸ್‌ಪಾಂಡರ್ ಜಾಗತಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗುತ್ತದೆ. ಇದು ತುರ್ತು ಸ್ಥಿತಿಯಲ್ಲಿ ಸಿಲುಕಿರುವವರ ಬೀಕನ್‌ಗಳಿಂದ ಪಡೆದ ಮಾಹಿತಿಯ ಆಧಾರದಲ್ಲಿ, ಅವರು ಎಂತಹ ದುರ್ಗಮ ಪ್ರದೇಶದಲ್ಲಿದ್ದರೂ, ಸಮಯಕ್ಕೆ ಸರಿಯಾಗಿ ಸಹಾಯದ ಲಭ್ಯತೆ ಒದಗುವಂತೆ ನೋಡಿಕೊಳ್ಳುತ್ತದೆ.

ಜಿಎಸ್ಎಲ್‌ವಿ-ಎಫ್14 ಉಡಾವಣಾ ವಾಹನ

  • ಜಿಎಸ್ಎಲ್‌ವಿ ಒಂದು ಬಹುಮುಖಿ ಉಡಾವಣಾ ವಾಹನ ಅಥವಾ ರಾಕೆಟ್ ಆಗಿದೆ. 51.7 ಮೀಟರ್ ಎತ್ತರವಿರುವ, 420 ಟನ್ ತೂಕ ಹೊಂದಿರುವ ಜಿಎಸ್ಎಲ್‌ವಿ ಮೂರು ಹಂತಗಳ ವಿನ್ಯಾಸವನ್ನು ಹೊಂದಿದೆ.
  • ಮೊದಲನೆಯ ಹಂತವಾದ ಜಿಎಸ್1 ಎಸ್139 ಘನ ಇಂಧನ ಮೋಟಾರ್ ಹೊಂದಿದ್ದು, ಇದು 139 ಟನ್ ಇಂಧನ ಹೊಂದಿದೆ. ಇದಕ್ಕೆ ಪೂರಕವಾಗಿ, ತಲಾ 40 ಟನ್ ಇಂಧನ ಹೊಂದಿರುವ ನಾಲ್ಕು ಎಲ್40 ದ್ರವ ಇಂಧನ ಬೂಸ್ಟರ್‌ಗಳಿವೆ.
  • ಎರಡನೇ ಹಂತವಾದ ಜಿಎಸ್2, 40 ಟನ್ ಭೂಮಿಯಲ್ಲಿ ಸಂಗ್ರಹಿಸಬಲ್ಲ ದ್ರವ ಇಂಧನ ಇಂಜಿನ್ ಮೂಲಕ ಕಾರ್ಯಾಚರಿಸುತ್ತದೆ.
  • ಮೂರನೇ ಮತ್ತು ಕೊನೆಯ ಹಂತವಾದ ಜಿಎಸ್3, 15 ಟನ್ ದ್ರವ ಆಮ್ಲಜನಕ ಮತ್ತು ಜಲಜನಕವನ್ನು ಇಂಧನವಾಗಿ ಬಳಸುವ ಕ್ರಯೋಜನಿಕ್ ಇಂಜಿನ್ ಅನ್ನು ಬಳಸಿಕೊಳ್ಳುತ್ತದೆ. ಇದು ಉಡಾವಣೆಯ ಆಧುನಿಕ ಹಂತವಾಗಿದ್ದು, ಉಪಗ್ರಹವನ್ನು ಅದರ ಉದ್ದೇಶಿತ ಕಕ್ಷೆಗೆ ತಲುಪಿಸುತ್ತದೆ.
  • ಜಿಎಸ್ಎಲ್‌ವಿ ರಾಕೆಟ್ ಅನ್ನು ಸಂವಹನ, ನ್ಯಾವಿಗೇಶನ್ (ಸಂಚರಣೆ), ಮತ್ತು ಭೂ ವೀಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಿರ್ಮಿಸಿರುವ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಲು ಬಳಸಲಾಗುತ್ತದೆ.

ವಿಶೇಷ ವರದಿ: ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ; ಇಂದು INSAT-3DS ಉಡಾವಣೆ; ಏನಿದು ಮಿಷನ್​..​?

https://newsfirstlive.com/wp-content/uploads/2024/02/isro-26.jpg

Load More