/newsfirstlive-kannada/media/post_attachments/wp-content/uploads/2024/11/JOB_TTD.jpg)
ವಿಕ್ರಮ್ ಸಾರಭಾಯ್ ಸ್ಪೇಸ್ ಸೆಂಟರ್ (ಇಸ್ರೋ VSSC) ಇಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡುವ ಸಂಬಂಧ ಅರ್ಜಿ ಆಹ್ವಾನ ಮಾಡಲಾಗಿದೆ. ಇದೊಂದು ದೇಶದ ಪ್ರತಿಷ್ಠಿತ ಸಂಸ್ಥೆ ಆಗಿದ್ದರಿಂದ ಅಭ್ಯರ್ಥಿಗಳು ಇಲ್ಲಿ ಉದ್ಯೋಗ ಪಡೆದರೆ ಮುಂದಿನ ತಮ್ಮ ವೃತ್ತಿ ಜೀವನ ಉಜ್ವಲವಾಗಿರುತ್ತದೆ ಎಂದು ಹೇಳಬಹುದು. ಹೀಗಾಗಿ ಈ ಉದ್ಯೋಗಕ್ಕೆ ಸರ್ಜಿ ಸಲ್ಲಿಕೆಗೆ ಮುಂದಾಗಿ ಎನ್ನುವುದು ನಮ್ಮ ಸಲಹೆ.
ಇಸ್ರೋ ಸಂಸ್ಥೆ ಆಹ್ವಾನ ಮಾಡಿರುವ ಉದ್ಯೋಗಗಳಲ್ಲಿ 10ನೇ ತರಗತಿ ಇಂದ ಪದವಿ ಓದಿದವರಿಗೂ ಅವಕಾಶ ನೀಡಲಾಗಿದೆ. ನಿಮ್ಮ ವಿದ್ಯಾರ್ಹತೆ ಅನ್ವಯ ಆಗುವ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಸಲ್ಲಿಕೆ ಮಾಡುವ ದಿನಾಂಕ, ಶುಲ್ಕ, ಎಷ್ಟು ಉದ್ಯೋಗಗಳು, ಕೊನೆ ದಿನಾಂಕ ಯಾವಾಗ ಎನ್ನುವ ಮಾಹಿತಿ ಈ ಕೆಳಗೆ ಕೊಡಲಾಗಿದೆ.
ಹುದ್ದೆಗಳ ಹೆಸರು, ಸಂಖ್ಯೆ
- ಸಹಾಯಕ- ಸಹಾಯಕ (Rajbhasha)- 02
- ಲಘು ವಾಹನ ಚಾಲಕ-ಎ- 05 ಹುದ್ದೆಗಳು (ವಾಹನದ ಲೈಸೆನ್ಸ್ ಇರಲೇಬೇಕು)
- ಹೆವಿ ವೆಹಿಕಲ್ ಡ್ರೈವರ್- 05 ಹುದ್ದೆ (ಹೆವಿ ವೆಹಿಕಲ್ ಲೈಸೆನ್ಸ್ ಇರಲೇಬೇಕು)
- ಅಗ್ನಿಶಾಮಕ-ಎ- 03 ಕೆಲಸಗಳು
- ಅಡುಗೆಗಾರ- 01 ಕೆಲಸ
ಒಟ್ಟು ಎಷ್ಟು ಉದ್ಯೋಗಗಳು- 16
ಇದನ್ನೂ ಓದಿ:ದ್ವಿತೀಯ PUC ಪಾಸ್ ಆದವರಿಗೆ ಗುಡ್ನ್ಯೂಸ್.. 209 ಉದ್ಯೋಗಗಳಿಗೆ ಪುರುಷ, ಮಹಿಳೆಯರಿಗೂ ಅವಕಾಶ
ಮಾಸಿಕ ವೇತನ
19,900 ದಿಂದ 81,100 ರೂಪಾಯಿ (ಹುದ್ದೆಗಳಿಗೆ ತಕ್ಕಂತೆ ವಿಂಗಡಣೆ ಇದೆ)
ವಿದ್ಯಾರ್ಹತೆ
10ನೇ ತರಗತಿ, ಯಾವುದೇ ಪದವಿ
ವಯಸ್ಸಿನ ಅರ್ಹತೆ
18 ರಿಂದ 35 ವರ್ಷಗಳು
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ (ಕೆಲವು ಹುದ್ದೆಗಳಿಗೆ ಅನ್ವಯ)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಈ ಕೆಲಸಕ್ಕೆ ಸಂಬಂಧಿಸಿದ ಮುಖ್ಯ ದಿನಗಳು
ಅರ್ಜಿ ಸಲ್ಲಿಕೆ ಮಾಡುವ ಆರಂಭದ ದಿನಾಂಕ- 01 ಏಪ್ರಿಲ್
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- 15 ಏಪ್ರಿಲ್
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ