ISRO 101ನೇ ಮಹತ್ವಾಕಾಂಕ್ಷೆಯ ಉಪಗ್ರಹ EOS-09 ವಿಫಲ

author-image
Bheemappa
Updated On
ISRO 101ನೇ ಮಹತ್ವಾಕಾಂಕ್ಷೆಯ ಉಪಗ್ರಹ EOS-09 ವಿಫಲ
Advertisment
  • ಎಲ್ಲ ಸಿದ್ಧತೆ ಮಾಡಿ ಬೆಳಗಿನ ಜಾವ ಇಸ್ರೋ ಉಡಾಯಿಸಿತ್ತು
  • ಉಪಗ್ರಹ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ
  • ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ಆಗಿತ್ತು

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 101ನೇ ಭೂ ವೀಕ್ಷಣಾ ಉಪಗ್ರಹ EOS-09 ಉಡಾವಣೆ ಯಶಸ್ವಿಯಾಯಿತು. ಆದರೆ EOS-09 ಉಪಗ್ರಹ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಂಸ್ಥೆ ನಡೆಸಿದ ಪ್ರಯತ್ನವು ವಿಫಲವಾಗಿದೆ ಎಂದು ಈ ಬಗ್ಗೆ ಇಸ್ರೋ ಅಧಿಕೃತವಾಗಿ ಮಾಹಿತಿ ನೀಡಿದೆ. ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರು, EOS-09 ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

publive-image

ಇಂದು ಬೆಳಗ್ಗೆ 5.59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ61 ಮೂಲಕ EOS-09 ಉಪಗ್ರಹ ಉಡಾವಣೆಯನ್ನು ಪ್ರಯತ್ನಿಸಲಾಯಿತು. ಆದರೆ ಪಿಎಸ್‌ಎಲ್‌ವಿ-ಸಿ61 ಕಾರ್ಯಕ್ಷಮತೆ 2ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3ನೇ ಹಂತದಲ್ಲಿ ವೀಕ್ಷಣೆಯಿಂದಾಗಿ ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಪಿಎಸ್‌ಎಲ್‌ವಿ-ಸಿ61 ಮೂಲಕ ಭೂ ವೀಕ್ಷಣಾ EOS-09 ಉಪಗ್ರಹ ಉಡಾವಣೆ ಮಾಡುವ ಪ್ರಯತ್ನ ಫಲ ಕೊಡಲಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ:ಸಿಗರೇಟ್ ತಂದು ಕೊಡದಿದ್ದಕ್ಕೆ R15 ಬೈಕ್​ಗೆ ಕಾರಿಂದ ಗುದ್ದಿದ ಕಿರಾತಕ.. ಉಸಿರು ಚೆಲ್ಲಿದ ಸಾಫ್ಟ್​​​ವೇರ್ ಇಂಜಿನಿಯರ್

publive-image

EOS-09 ಉಪಗ್ರಹವು ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಹೊಂದಿದೆ. 1696.24 ಕೆಜಿ. ತೂಕವಿದ್ದು ಇದು ಇಸ್ರೋ ನಿರ್ಮಿಸಿದ ಅತ್ಯಂತ ಭಾರವಾದ ಉಪಗ್ರಹವಾಗಿದೆ. 5 ವರ್ಷ ಇದರ ಇದರ ಜೀವಿತಾವಧಿ ಆಗಿತ್ತು. ಈ ಉಪಗ್ರಹ ಯಶಸ್ವಿಯಾಗಿದ್ದರೇ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ತಲುಪಿಸುತ್ತಿತ್ತು.

ಇಸ್ರೋ ಸಂಸ್ಥೆ ಉಡಾವಣೆಗೆ ಪ್ರಯತ್ನಿಸಿದ್ದ ಇಒಎಸ್‌-09 ಉಪಗ್ರಹವು ಯಶಸ್ವಿ ಆಗಿದ್ದರೇ ಇದು ನಮಗೆ ಗಡಿ ಕಾಯುವಿಕೆ, ಬೇಹುಗಾರಿಕೆ, ರಾಷ್ಟ್ರೀಯ ಭದ್ರತೆಗೆ ಸಾಥ್ ನೀಡುತ್ತಿತ್ತು. ವಿಪತ್ತು ನಿರ್ವಹಣೆ ಸಮಯದಲ್ಲೂ ಸಹ ನೆರವಾಗುತ್ತಿತ್ತು. ಆದರೆ ಈಗ ತಾಂತ್ರಿಕ ಕಾರಣದಿಂದ ಉಡಾವಣೆ ಯಶಸ್ವಿ ಆಗಲಿಲ್ಲ ಎನ್ನಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment