/newsfirstlive-kannada/media/post_attachments/wp-content/uploads/2024/08/Sandalwood-Pooja-1.jpg)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇಲ್ಲ. ಒಂದಲ್ಲ ಒಂದು ತೊಂದರೆಗಳು ಆಗುತ್ತಿವೆ ಎಂಬ ಮಾತುಗಳು ಕೇಳಿಬಂದಿದ್ದವು. ದೋಷಗಳ ನಿವಾರಣೆಗಾಗಿ ಮೊನ್ನೆಯಷ್ಟೇ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿತ್ತು. ಈ ಮಧ್ಯೆ ಕಲಾವಿದರ ಸಂಘಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೆಕ್ಕಪತ್ರಗಳ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಕನ್ನಡ ಕಲಾವಿದರ ಸಂಘಕ್ಕೆ ಸಹಕಾರ ಇಲಾಖೆ ನೋಟಿಸ್ ನೀಡಿದೆ.
ಇದನ್ನೂ ಓದಿ:ನಾಗದರ್ಶನ.. ಕಲಾವಿದರ ಸಂಘದಲ್ಲಿ ಹಿರಿಯ ನಟಿ ಮೈ ಮೇಲೆ ಬಂದ ದೇವರು; ಯಾರು ಈ ಜ್ಯೋತಿ? ಹಿನ್ನೆಲೆ ಏನು?
ಸಹಕಾರ ಇಲಾಖೆಯು ಕಲಾವಿದರ ಸಂಘಕ್ಕೆ ನೋಟಿಸ್ ನೀಡಿದೆ. 15 ದಿನದೊಳಗಾಗಿ ಲಿಖಿತ ವಿವರ ಮತ್ತು ದಾಖಲಾತಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಕಲಾವಿದರ ಸಂಘದಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ದೂರು ನೀಡಲಾಗಿತ್ತು.
ಕರ್ನಾಟಕ ಸಹಕಾರ ಸಂಘ ಕಾಯ್ದೆ 1959ರ ನಿಯಮಗಳನ್ವಯ, ಪ್ರತಿ ವರ್ಷ ಸಂಘದ ವಾರ್ಷಿಕ ಚುನಾವಣೆ ನಡೆಸಬೇಕು. ಕನಿಷ್ಠ ಒಂದು ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಬೇಕು. ಕಳೆದ 16 ವರ್ಷಗಳಿಂದ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸಿಲ್ಲ. ಪ್ರತಿ ವರ್ಷ ಸಲ್ಲಿಸಬೇಕಾದ ವಾರ್ಷಿಕ ಲೆಕ್ಕಾಚಾರ ಪರಿಶೋಧನೆ ವರದಿ ಸಲ್ಲಿಕೆಯಾಗಿಲ್ಲ. ಕಳೆದ ವಾರ ಈ ಬಗ್ಗೆ ಎನ್.ಆರ್.ರಮೇಶ್ ದೂರು ನೀಡಿದ್ದರು. ಆ ದೂರಿನ ಆಧಾರದ ಮೇಲೆ ಕಲಾವಿದರ ಸಂಘದ ಹಿರಿಯ ನಟ ದೊಡ್ಡಣ್ಣ ಅವರಿಗೆ ಇಲಾಖೆ ನೋಟಿಸ್ ಜಾರಿ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ