ಭೀಕರ ಹಿಟ್​ ಅಂಡ್ ರನ್.. ಹಿಂದಿನಿಂದ ಆಟೋಗೆ ಬಂದು ಗುದ್ದಿದ ಕಾರು; ಚಾಲಕನ ಸ್ಥಿತಿ ಏನಾಯ್ತು?

author-image
Gopal Kulkarni
Updated On
ಭೀಕರ ಹಿಟ್​ ಅಂಡ್ ರನ್.. ಹಿಂದಿನಿಂದ ಆಟೋಗೆ ಬಂದು ಗುದ್ದಿದ ಕಾರು; ಚಾಲಕನ ಸ್ಥಿತಿ ಏನಾಯ್ತು?
Advertisment
  • ಆಟೋಗೆ ಹಿಂದಿನಿಂದ ಗುದ್ದಿ ಸುಮಾರು ದೂರ ಎಳೆದುಕೊಂಡು ಹೋದ ಕಾರು
  • ಎಂತವರ ಎದೆಯನ್ನು ನಡುಗಿಸುವಂತಿದೆ ಈ ಸಿಸಿ ಕ್ಯಾಮೆರಾದ ಭಯಾನಕ ದೃಶ್ಯ
  • ಮತ್ತೊಂದು ಹಿಟ್​ ಅಂಡ್ ರನ್ ಕೇಸ್​ಗೆ ಸಾಕ್ಷಿಯಾದ ಮುಂಬೈ ಮಹಾನಗರ

ಮುಂಬೈ: ಮಹಾನಗರಗಳಲ್ಲಿ ಆ್ಯಕ್ಸಿಡೆಂಟ್, ಹಿಟ್​ ಅಂಡ್ ರನ್​ನಂತಹ ಕೇಸ್​ಗಳು ಮಾಮೂಲಿ ಅನ್ನುವಂತಾಗಿ ಹೋಗಿದೆ. ಈಗ ನವಿಮುಂಬೈನಲ್ಲೂ ಕೂಡ ಅಂತಹದೇ ಒಂದು ಘಟನೆ ನಡೆದಿದೆ. ತನ್ನ ಪಾಡಿಗೆ ತಾನು ಹೋಗುತ್ತಿದ್ದ ಆಟೋಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಅದಕ್ಕೆ ಗುದ್ದಿ, ಅದೇ ವೇಗದೊಂದಿಗೆ ಆಟೋವನ್ನು ಸುಮಾರು ದೂರದವರೆಗೆ ತಳ್ಳಿಕೊಂಡು ಹೋಗಿದೆ.


">July 27, 2024

ಇದನ್ನೂ ಓದಿ:ಸೂಪರ್‌ಸ್ಟಾರ್​​ನನ್ನೇ ಶಾಲೆಗೆ ಕರೆದುಕೊಂಡು ಹೋದ ಮೊಮ್ಮಗ; ತಲೈವಾನನ್ನು ನೋಡಿ ಪುಟಾಣಿ ಫುಲ್ ಶಾಕ್​

ಕಾರ್ ಗುದ್ದಿ ಎಳೆದುಕೊಂಡ ಹೋದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದ್ದು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಎಂಥವರನ್ನು ಬೆಚ್ಚಿ ಬೀಳಿಸುವಂತಿದೆ. ಈ ಭೀಕರ ಅಪಘಾತದಲ್ಲಿ ಆಟೋ ಡ್ರೈವರ್ ತನ್ನ ಪ್ರಾಣವನ್ನು ಕಳೆದುಕೊಂಡಿದ್ದು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ವಾಶಿಯ ಸಾಯಿನಾಥ್ ಶಾಲೆಯ ಬಳಿ ಈ ಭೀಕರ ಘಟನೆ ನಡೆದಿದ್ದು. ಕಾರ್ ಡ್ರೈವರ್​ನನ್ನು ವಾಶಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment