newsfirstkannada.com

‘ನನ್ನದೇನಿದೆ ಇದು ನನ್ನ ಲಾಸ್ಟ್ ಸೀಸನ್’.. ಸಂಚಲನ ಸೃಷ್ಟಿಸಿದ ರೋಹಿತ್ ಭಾವುಕದ ವಿಡಿಯೋ!

Share :

Published May 12, 2024 at 2:45pm

  ಅದು ನನ್ನ ಮನೆ.. ನಾ ಕಟ್ಟಿದ ದೇವಾಲಯ ಎಂದಿರುವ ಹಿಟ್​​ಮ್ಯಾನ್!

  ​​ಪಾಂಡ್ಯ ಕ್ಯಾಪ್ಟನ್​ ಪಟ್ಟಕ್ಕೇರಿದ್ರೂ ರೋಹಿತ್ ಶರ್ಮಾ ತುಟಿ ಬಿಚ್ಚಿರಲಿಲ್ಲ

  ತಂಡದಲ್ಲಿ ನಡೆಯುತ್ತಿರೋ ಘಟನೆ ರೋಹಿತ್ ನೋವನ್ನು ಹೆಚ್ಚಿಸುತ್ತಿವೆ

ಒನ್​ ಫ್ಯಾಮಿಲಿ.. ಇದು ಮುಂಬೈ ಇಂಡಿಯನ್ಸ್​ ಟೀಮ್​​​​​​ನ ಟ್ರ್ಯಾಗ್ ಲೈನ್. ಇದಕ್ಕೆ ತಕ್ಕಂತೆ ಈ ಹಿಂದೆ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಇತ್ತು. ಆದ್ರೀಗ ಮುಂಬೈ ಇಂಡಿಯನ್ಸ್​ ಪರಿಸ್ಥಿತಿ ಈ ಟ್ಯಾಗ್​ ಲೈನ್​​​​​​​​​​​​​​​​​​​​​​​​​ಗೆ ತದ್ವಿರುದ್ಧವಾಗಿದೆ. ಒಳ ಜಗಳದಿಂದ ನೊಂದು ಬೆಂದು ಮುಂಬೈ, ಒಡೆದ ಮನೆಯಾಗಿದೆ. ತಂಡದ ಸಕ್ಸಸ್​​ಫುಲ್​​ ನಾಯಕ ರೋಹಿತ್​ ಶರ್ಮಾ MI ಕುಟುಂಬಕ್ಕೆ ಗುಡ್​ ಬೈ ಹೇಳಲು ಸಜ್ಜಾಗಿದ್ದಾರೆ.

ಮುಂಬೈ ಇಂಡಿಯನ್ಸ್​.. ಇಂಡಿಯನ್ ಪ್ರೀಮಿಯರ್​​​ ಲೀಗ್​ನ ಸಕ್ಸಸ್​ಫುಲ್ ಟೀಮ್.. ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ಡಾನ್ ಆಗಿ ಮೆರೆದಾಡಿದ ತಂಡ. 2013ರಿಂದ 2023ರ ಅವಧಿಯಲ್ಲಂತೂ ಮುಂಬೈ ಇಂಡಿಯನ್ಸ್​ಗೆ ಸರಿಸಾಟಿಯೇ ಯಾರೂ ಇರಲಿಲ್ಲ.

2013ರಿಂದ 2023 ಅವಧಿ ಮುಂಬೈ ಇಂಡಿಯನ್ಸ್​ ಪಾಲಿಗೆ ಸುರ್ವರ್ಣಾಕ್ಷರಗಳಲ್ಲಿ ಬರೆದಿಟ್ಟ ದಿನಗಳು. ಈ 10 ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ಮಾಡಿದ ಸಾಧನೆ ಅಷ್ಟಿಷ್ಟಲ್ಲ. ಐಪಿಎಲ್​​ನ ಮೊದಲ 5 ವರ್ಷ ಟ್ರೋಫಿ ಗೆಲ್ಲದ ಮುಂಬೈ, ಜಸ್ಟ್​ 10 ವರ್ಷಗಳಲ್ಲಿ ಬರೋಬ್ಬರಿ 5 ಟ್ರೋಫಿಗಳನ್ನ ಗೆಲ್ತು. ಇದ್ರ ಹಿಂದಿನ ರೂವಾರಿ ಒನ್​ ಆ್ಯಂಡ್ ಒನ್ಲಿ ರೋಹಿತ್ ಶರ್ಮಾ.

ಬಹಿರಂಗವಾಯ್ತು ಹಿಟ್​​ಮ್ಯಾನ್ ಮನದ ವೇದನೆ

ರೋಹಿತ್ ಶರ್ಮಾ, ಇಂಡಿಯನ್ ಪ್ರೀಮಿಯರ್ ಲೀಗ್​ ಹಾಗೂ ಮುಂಬೈ ಫ್ರಾಂಚೈಸಿಯ ಸಕ್ಸಸ್​​ಫುಲ್ ಕ್ಯಾಪ್ಟನ್. ಕಡಿಮೆ ಅವಧಿಯಲ್ಲಿ ನಾಯಕನಾಗಿ ಮುಂಬೈಗೆ 5 ಟ್ರೋಫಿ ಗೆಲ್ಲಿಸಿಕೊಟ್ಟು, ಧೋನಿಯನ್ನೇ ಮೀರಿಸಿದ ನಾಯಕ. ಆದ್ರೀಗ, ಈ ಸಕ್ಸಸ್​​ಫುಲ್​ ನಾಯಕ ಮುಂಬೈಗೆ ಗುಡ್​ ಬೈ ಹೇಳಲು ಮುಂದಾಗಿದ್ದಾರೆ. ಫ್ರಾಂಚೈಸಿ ಮಾಡಿದ ಅಪಮಾನದಿಂದ ನೊಂದು ಬೆಂದಿದ್ದಾರೆ.

ಈ ಸೀಸನ್​ನ ಐಪಿಎಲ್​ಗೂ ಮುನ್ನ ರೋಹಿತ್​ ಶರ್ಮಾ ಏಕಾಏಕಿ ಮುಂಬೈ ಫ್ರಾಂಚೈಸಿ ನಾಯಕನ ಪಟ್ಟದಿಂದ ಕೊಕ್​ ಕೊಡ್ತು. ನಾಯಕತ್ವ ಕಸಿದುಕೊಂಡಿ ವಲಸೆ ಬಂದ ಹಾರ್ದಿಕ್​ ಪಾಂಡ್ಯಗೆ ಪಟ್ಟ ಕಟ್ಟಿತು. ಈ ಮೂಲಕ ಸೀಸನ್​ಗೂ ಮುನ್ನವೇ ರೋಹಿತ್​ಗೆ ಅಪಮಾನ ಮಾಡಿತ್ತು. ಇಷ್ಟಾದ್ರೂ, ಇಷ್ಟು ದಿನ ರೋಹಿತ್​ ಸುಮ್ಮನಿದ್ರು, ಇದೀಗ ಮನದ ನೋವನ್ನ ಹೊರಹಾಕಿದ್ದಾರೆ.

ಸಂಚಲನ ಸೃಷ್ಟಿಸಿದ ರೋಹಿತ್ ವಿಡಿಯೋ ಕ್ಲಿಪ್

ಹಾರ್ದಿಕ್ ನಾಯಕತ್ವದ ಪಟ್ಟಕ್ಕೇರಿದಾಗಲೂ ರೋಹಿತ್, ಎಂದೂ ತುಟಿ ಬಿಚ್ಚಿದವರಲ್ಲ. ತನ್ನ ನಾಯಕತ್ವದ 10 ವರ್ಷಗಳಲ್ಲಿ ಎಂದೂ ಮನಸ್ತಾಪ ಮಾಡಿಕೊಂಡವರಲ್ಲ. ಆಟಗಾರರ ಜೊತೆ ಉತ್ತಮ ಬಾಂಡಿಂಗ್ ಕಾಪಾಡಿದ್ದ ರೋಹಿತ್, 10 ವರ್ಷಗಳ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದ್ರು. ಆದ್ರೀಗ ತಾನೇ ಕಟ್ಟಿದ ತಂಡ ಪತನದತ್ತ ಸಾಗ್ತಿದೆ. ತಂಡದಲ್ಲಿ ನಡೆಯುತ್ತಿರೋ ಒಂದೊಂದು ಘಟನೆ ರೋಹಿತ್​​, ಅಂತರಾಳದ ನೋವನ್ನ ಹೆಚ್ಚಿಸುತ್ತಿವೆ. ಇದೀಗ ತನ್ನ ಅಂತರಾಳದ ನೋವನ್ನ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ, ಕೆಕೆಆರ್​ ಅಸಿಸ್ಟೆಂಟ್ ಕೋಚ್, ಆಪ್ತ ಗೆಳೆಯ ಅಭಿಷೇಕ್ ನಾಯರ್ ಜೊತೆ ಹಂಚಿಕೊಂಡಿದ್ದಾರೆ.

ಅಭ್ಯಾಸದ ವೇಳೆ ಆಪ್ತ ಅಭಿಷೇಕ್ ನಾಯರ್​ ಜೊತೆ ಮಾತನಾಡಿರುವ ರೋಹಿತ್, ಅಂತರಾಳದ ನೋವನ್ನ ಬಿಚ್ಚಿಟ್ಟಿದ್ದಾರೆ. ತಂಡದಲ್ಲಿ ಒಂದೊಂದಾಗಿಯೇ ಎಲ್ಲವೂ ಬದಲಾಗ್ತಿದೆ. ಅವರೇ ಇದಕ್ಕೆಲ್ಲಾ ಕಾರಣ. ನಾನು ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಅದು ಏನೇ ಆಗಲಿ ನನ್ನ ಮನೆ. ನಾನೇ ಕಟ್ಟಿದ ದೇವಾಲಯ ಎಂದು ಭಾವುಕರಾಗಿರುವ ರೋಹಿತ್, ನನ್ನದೇನಿದೆ ಇದು ನನ್ನ ಲಾಸ್ಟ್ ಸೀಸನ್ ಎಂದು ಮುಂಬೈ ತೊರೆಯೋ ಮಾತು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸಂಚಲನ ಸೃಷ್ಟಿಸಿದೆ.

ಹಾರ್ದಿಕ್ ನಾಯಕತ್ವಕ್ಕೆ ತಂಡದಲ್ಲಿ ಅಸಮಾಧಾನ

ಹಾರ್ದಿಕ್ ನಾಯಕತ್ವದ ಸ್ಥಾನಕ್ಕೇರಿದ್ದೆ ತಡ, ಮುಂಬೈ ಇಂಡಿಯನ್ಸ್​ ಇಬ್ಬಾಗಕ್ಕೆ ನಾಂದಿಯಾಡಿತ್ತು. ಬೂಮ್ರಾ, ಸೂರ್ಯ ಪರೋಕ್ಷ ಬೇಸರ ಹೊರಹಾಕಿದ್ರು. ಇದಕ್ಕೆಲ್ಲ ತೇಪೆ ಹಚ್ಚಲು ಹಿರಿಯ ಆಟಗಾರರ ಜೊತೆ ಫ್ರಾಂಚೈಸಿ ಡಿನ್ನರ್ ಮೀಟಿಂಗ್ ನಡೆಸಿತ್ತು. ಈ ಬಳಿಕ ಹಾರ್ದಿಕ್ ಪಾಂಡ್ಯ ಮಾತಿಗೆ ಕೆರಳಿದ್ದ ತಿಲಕ್ ವರ್ಮಾ, ಡ್ರೆಸ್ಸಿಂಗ್ ರೂಮ್​ನಲ್ಲಿ ಜಗಳಕ್ಕೆ ನಿಂತಿದ್ರು. ಆದ್ರೀಗ ಇದೆಲ್ಲವನ್ನು ಹತ್ತಿರದಿಂದಲೇ ನೋಡಿರುವ ರೋಹಿತ್, ತಂಡದಲ್ಲಿನ ಬೆಳವಣಿಗೆ ಬಗ್ಗೆ ಬೇಸರ ಹೊರಹಾಕಿದ್ದಾರೆ. ಜೊತೆಗೆ ಈ ಸೀಸನ್​​​ ಬಳಿಕ ರೋಹಿತ್, ಮುಂಬೈ ತೊರೆಯುತ್ತಾರೆ ಎಂಬ ಸುದ್ದಿಯನ್ನೂ ಬಹುತೇಕ ಅಧಿಕೃತವಾಗಿಸಿದ್ದಾರೆ.

ಈ ಸೀಸನ್​ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಮಾಡಿದ ಒಂದು ಆತುರದ ನಿರ್ಧಾರ, ತಂಡದ ವರ್ಚಸ್ಸುನ್ನ ಬೀದಿಗೆ ತಂದಿದೆ. ಒನ್ ಫ್ಯಾಮಿಲಿ ಇದೀಗ ಒಡೆದ ಮನೆಯಾಗಿದೆ. ಪ್ಲೇ ಆಫ್​ಗೆ ಎಂಟ್ರಿ ಕೊಡದೇ ಎಲಿಮಿನೇಟ್​ ಆಗಿರೋ ಮುಂಬೈ ಕ್ಯಾಂಪ್​ನಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಗಳು ನಡೆಯಲಿದ್ದು, ಏನೆಲ್ಲ ಆಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ನನ್ನದೇನಿದೆ ಇದು ನನ್ನ ಲಾಸ್ಟ್ ಸೀಸನ್’.. ಸಂಚಲನ ಸೃಷ್ಟಿಸಿದ ರೋಹಿತ್ ಭಾವುಕದ ವಿಡಿಯೋ!

https://newsfirstlive.com/wp-content/uploads/2024/05/ROHITH_SHARMA.jpg

Load More