/newsfirstlive-kannada/media/post_attachments/wp-content/uploads/2025/01/JOBS_CBSC.jpg)
2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬರೋಬ್ಬರಿ 2,587 ಮಂದಿ ಐಟಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. ಭಾರತದ ಅತೀ ದೊಡ್ಡ ಐಟಿ ಕಂಪನಿಗಳಾದ ಟಿಸಿಎಸ್​​, ಇನ್ಫೋಸಿಸ್​​​, HCLtech, ವಿಪ್ರೋ, ಟೆಕ್​​ ಮಹೀಂದ್ರಾದಲ್ಲೇ ಲೇ ಆಫ್​ ನಡೆದಿದೆ.
ಅನೇಕ ಐಟಿ ಕಂಪನಿಗಳಲ್ಲಿ ನೇಮಕಾತಿ ಆಗಬೇಕಿದೆ. ಟಿಸಿಎಸ್ ಮತ್ತು ಟೆಕ್ ಮಹೀಂದ್ರಾಗೆ ಭಾರೀ ಹಿನ್ನಡೆ ಆಗಿದೆ. ಟಿಸಿಎಸ್ ಈಗಾಗಲೇ 5,370 ಉದ್ಯೋಗಿಗಳನ್ನು ತೆಗೆದು ಹಾಕಿದೆ. ಟೆಕ್ ಮಹೀಂದ್ರಾ ಕೂಡ 3,785 ಮಂದಿಗೆ ಕೊಕ್​ ನೀಡಿದೆ.
ಹೊಸ ಉದ್ಯೋಗಿಗಳ ನೇಮಕಾತಿ
ಇನ್ನೊಂದೆಡೆ ಇನ್ಫೋಸಿಸ್ ಮತ್ತು ಹೆಚ್‌ಸಿಎಲ್ ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡಿವೆ. ಇನ್ಫೋಸಿಸ್ ಈ ತ್ರೈಮಾಸಿಕದಲ್ಲಿ 5,591 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. 2026ರ ಹಣಕಾಸು ವರ್ಷದಲ್ಲಿ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ಪ್ಲ್ಯಾನ್​ ಮಾಡಿಕೊಂಡಿದೆ. ಹೆಚ್‌ಸಿಎಲ್ ಟೆಕ್ ನೇಮಕಾತಿ ಸಂಖ್ಯೆಯನ್ನು 7,000ಕ್ಕೆ ಮಿತಿಗೊಳಿಸಿದೆ. ಮುಂದಿನ ದಿನಗಳ ಈ ಐದು ಕಂಪನಿಗಳು ಬರೋಬ್ಬರಿ 15,033 ಮಂದಿ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಅನುಭವಿಗಳ ಬದಲಿಗೆ ಫ್ರೆಶರ್ಸ್​ಗೆ ಮಣೆ
ಹಿರಿಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಕಾರಣ ಫ್ರೆಶರ್ಸ್​​. ಕಡಿಮೆ ಸಂಬಳದಲ್ಲಿ ಹೊಸಬರ ಕೈಯಲ್ಲೇ ಕೆಲಸ ಮಾಡಿಸಬಹುದು ಅನ್ನೋದು ಐಟಿ ಕಂಪನಿಗಳ ಪ್ಲ್ಯಾನ್​​. ಹಾಗಾಗಿ ಅನುಭವಿಗಳನ್ನು ವಜಾ ಮಾಡಿ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us