/newsfirstlive-kannada/media/post_attachments/wp-content/uploads/2024/09/Darshan-Pavithra-Gowda-Photo-2.jpg)
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ ಅರೆಸ್ಟ್ ಆಗಿ ಇಂದಿಗೆ ಒಂದು ವರ್ಷ ಕಳೆದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಕೇಸ್​ನಲ್ಲಿ ನಟ ದರ್ಶನ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಇಂದಿಗೆ ಒಂದು ವರ್ಷದ ಹಿಂದೆ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದ ನಟ ದರ್ಶನ್​ನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಕ್ಯಾರೆಟ್ ಹಲ್ವಾ, ಮಾವಿನ ಹಣ್ಣು ಮತ್ತು ಅನ್ನ; ಶುಭಾಂಶು ಶುಕ್ಲಾ ಗಗನಯಾನಕ್ಕೆ ಅಂತಿಮ ತಯಾರಿ ಹೇಗಿದೆ?
/newsfirstlive-kannada/media/post_attachments/wp-content/uploads/2025/05/darshan18.jpg)
9.6.2024ರಲ್ಲಿ ಮೈಸೂರಿನ ಲಲಿತಾ ಮಹಲ್ ಪ್ಯಾಲೇಸ್​ನಲ್ಲಿ ಡೆವಿಲ್ ಶೂಟಿಂಗ್ ನಡೆಯುತ್ತಿತ್ತು. ಹೀಗಾಗಿ 10.6.2024ರಂದು ಶೂಟಿಂಗ್ ಮುಗಿಸಿ ಹೋಟೆಲ್​ನಲ್ಲಿ ನಟ ದರ್ಶನ್ ತಂಗಿದ್ದರು. ಮರುದಿನ 11.6.2024 ರಂದು ಬೆಳಗ್ಗೆ ಎಂದಿನಂತೆ 7ರಿಂದ 8 ಗಂಟೆವರೆಗೂ ಕುವೆಂಪುನಗರ ಗೋಲ್ಡ್ ಜಿಮ್​ನಲ್ಲಿ ವರ್ಕ್ ಔಟ್ ಮಾಡಿದ್ದರು. ಇದಾದ ಬಳಿಕ ಫ್ರೆಶ್ ಜ್ಯೂಸ್ ಕುಡಿದು ತಿಂಡಿ ತಿಂದು ಹೋಟೆಲ್​ಗೆ ತೆರಳುವಾಗ ದರ್ಶನ್​ಗೆ ಪೊಲೀಸರು ಶಾಕ್ ಕೊಟ್ಟಿದ್ದರು.
/newsfirstlive-kannada/media/post_attachments/wp-content/uploads/2025/02/DARSHAN_1.jpg)
ಸ್ನಾನ ಮುಗಿಸಿ ಬಟ್ಟೆ ಬದಲಿಸಿ ರೇಂಜ್ ರೋವರ್ ಕಾರಿನಲ್ಲಿ ಬರುತ್ತೇನೆ ಅಂತ ಪೊಲೀಸರಿಗೆ ದರ್ಶನ್ ಕೇಳಿಕೊಂಡಿದ್ದರು. ಆದ್ರೆ ಪೊಲೀಸರು ಸುಮ್ಮನೆ ನಮ್ಮ ಕಾರು ಹತ್ತಿ ಎಂದು ಆವಾಜ್ ಹಾಕಿದ್ದರು. ಮೈಸೂರಿನಿಂದ 8.30 ಗಂಟೆಗೆ ಅರೆಸ್ಟ್ ಮಾಡಿ ಬೆಂಗಳೂರಿಗೆ ದರ್ಶನ್​ನನ್ನು ಕರೆದುಕೊಂಡು ಬಂದಿದ್ದರು. ಇದಾದ ನಂತರ ಈ ಕೇಸ್​ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿ ಕೋರ್ಟ್​ಗೆ ಒಪ್ಪಿಸಿದ್ದರು. ಆಗ ನಟ ದರ್ಶನ್​ಗೆ 6106 ಖೈದಿ ನಂಬರ್ ಕೊಟ್ಟಿದ್ದರು. ಈ ನಂಬರ್​ ಕೂಡ ಸಖತ್​ ಟ್ರೆಂಡ್ ಸೃಷ್ಟಿಸಿತ್ತು.
/newsfirstlive-kannada/media/post_attachments/wp-content/uploads/2024/12/Darshan-Discharge-2.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ನಟ ದರ್ಶನ್ ಅವರಿಗೆ ಸ್ಪೈನಲ್ ಸಮಸ್ಯೆ ಇತ್ತು. ಹೀಗಾಗಿ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಂಬಂಧ ಹೈಕೋರ್ಟ್ ಬೇಲ್ ನೀಡಿತ್ತು. ವೈದ್ಯಕೀಯ ಕಾರಣ ನೀಡಿ ಮಧ್ಯಂತರ ಬೇಲ್​ಗೆ ಅರ್ಜಿ ಹಾಕಲಾಗಿತ್ತು. ವೈದ್ಯಕೀಯ ಚಿಕಿತ್ಸೆಗೆ ಒಳಗಾಗಲು 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಪ್ರಕರಣದ ಆರೋಪಿಗಳು ಷರತ್ತುಬದ್ಧ ಜಾಮೀನು ಪಡೆದು ಹೊರಗಿದ್ದಾರೆ. ನಟ ದರ್ಶನ್​ ಡೆವಿಲ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us