/newsfirstlive-kannada/media/post_attachments/wp-content/uploads/2024/11/Chicken-Grill.jpg)
ಚಿಕನ್ ಗ್ರಿಲ್ ತಿಂದು 10 ಮಂದಿ ಅಸ್ವಸ್ಥಗೊಂಡ ಆರೋಪವೊಂದು ಜೆ.ಪಿ ನಗರದ ಕಬಾಬ್ ಮ್ಯಾಜಿಕ್ ವಿರುದ್ಧ ಕೇಳಿಬಂದಿದೆ. ವಾಂತಿ, ಭೇದಿಯಾಗಿ ಆಸ್ಪತ್ರೆ ಸೇರಿದ ಜನರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಜೆ.ಪಿ ನಗರದ 3ನೇ ಹಂತಲ್ಲಿರು ಈಸ್ಟ್ ಎಂಡ್ ಸಿಗ್ನಲ್ ನಲ್ಲಿರುವ ಕಬಾಬ್ ಮ್ಯಾಜಿಕ್ ನಲ್ಲಿ ಚಿಕನ್ ಗ್ರಿಲ್ ಚಿಕನ್, ಪಾಪ್ ಕಾನ್ ಚಿಕನ್, 9 ನಾನ್ ವೆಜ್ ತಳಿ ಸೇವಿಸಿ 10 ಜನರು ಅಸ್ವಸ್ಥಗೊಂಡಿದ್ದಾರೆ. ಆರೋಗ್ಯ ಸಮಸ್ಯೆ ಎದುರಾದಂತೆ 10 ಜನರು ಜೆಪಿ ನಗರ ಠಾಣೆಯಲ್ಲಿ ಕಬಾಬ್ ಮ್ಯಾಜಿಕ್ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: ಪತನಗೊಂಡ ಮಿಗ್-29 ಯುದ್ಧ ವಿಮಾನ.. ಹೊತ್ತಿಕೊಂಡ ಬೆಂಕಿ.. ಇಬ್ಬರು ಪೈಲಟ್ಗಳು ಬಚಾವ್
ದೂರಿನಲ್ಲಿ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಬಚ್ಚಿಡುವ ಮುಖಾಂತರ ಹಾನಿಕಾರಕ ಆಹಾರವನ್ನು ನೀಡಿರುತ್ತಾರೆ. ಇಲ್ಲಿ ಆಹಾರ ತಿಂದ ಮೇಲೆ ಅಸ್ವಸ್ಥಗೊಂಡು ಮನೆಯ ಸಮೀಪದ ಕ್ಲೀನಿಕ್ನಲ್ಲಿ, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ವಿ. ಹೊಟ್ಟೆನೋವು ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ಪರೀಕ್ಷೆ ನಡೆಸಿದ ಬಳಿಕ ತಿಳಿದು ಬಂದ ಬಹಳ ಅಘಾತಕಾರಿ ಅಂಶವೇನೆಂದರೆ, ನಾವು ತಿಂದ ಆಹಾರ ಕರುಳಿಗೆ ಹಾನಿಯನ್ನುಂಟು ಮಾಡಿದೆ. ನಮಗೆ ಹೊಟ್ಟೆ ನೋವು ಮತ್ತು ವಾಂತಿಯಾಗಿದೆ ಎಂದು ವೈದ್ಯರಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುರುಪ್ರಸಾದ್ ಆ*ತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್.. ಉಸಿರುಗಟ್ಟಿ ಡೈರೆಕ್ಟರ್ ಸಾ*ವು
10 ಜನಕ್ಕೆ ಹಾನಿಕಾರಕ ಆಹಾರವನ್ನು ನೀಡಿರುವ ಮೂಲಕ ವೈಯಕ್ತಿಕ ಸುರಕ್ಷತೆಗೆ ಘಾಸಿ ಮಾಡಲಾಗಿದೆ. ಸಂಬಂಧ ಪಟ್ಟವರನ್ನ ಠಾಣೆಗೆ ಕರೆದು ಸೂಕ್ತ ತಿಳಿವಳಿಕೆ ನೀಡಿ ಎಂದು ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೂ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ