/newsfirstlive-kannada/media/post_attachments/wp-content/uploads/2025/03/PRIVATE-RAILWAY-STATION-3.jpg)
ಭಾರತದ ರೈಲ್ವೆ ಸೇವೆಗೆ ಒಂದು ಇತಿಹಾಸವೇ ಇದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ರೈಲ್ವೆ ಸೇವೆ ಮೊದಲು ಬ್ರಿಟಿಷರ ಕಾಲದಲ್ಲಿ ಆರಂಭವಾಗಿಯಿತು ಆ ಮೇಲೆ ಭಾರತ ಸರ್ಕಾರದ ಸುಪರ್ಧಿಗೆ ಬಂತು. ಸರ್ಕಾರದ ಏಕಸ್ವಾಮ್ಯತೆ ಪಡೆದ ಒಂದೇ ಒಂದು ಕ್ಷೇತ್ರವಾಗಿ ಗುರುತಿಸಿಕೊಂಡಿತು. ನಿತ್ಯ ಕೋಟ್ಯಾಂತರ ಜನರು ಇಡೀ ದೇಶದಲ್ಲಿ ಭಾರತೀಯ ಟ್ರೈನ್ಗಳಲ್ಲಿ ಪ್ರಯಾಣ ಮಾಡುತ್ತಾರೆ. ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಿಂದ ಹಿಡಿದು. ಆಹಾರ, ನೀರು ಪೂರೈಕೆಯವರೆಗೂ ಭಾರತ ಸರ್ಕಾರದ ಸ್ವಾಮಿತ್ವ ಇದೆ. ಆದರೆ ದೇಶದಲ್ಲಿ ಒಂದೇ ಒಂದು ರೈಲು ನಿಲ್ದಾಣ ಮಾತ್ರ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ.
ಇದನ್ನೂ ಓದಿ: ಏಷ್ಯಾದ ಸರ್ವ ಶ್ರೇಷ್ಠ 50 ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ ಭಾರತದ 2 ರೆಸ್ಟೋರೆಂಟ್ಗಳು ಸೇರ್ಪಡೆ! ಯಾವುವು?
ಹೌದು, ರೈಲ್ವೆ ಇಲಾಖೆಯಲ್ಲಿ ಖಾಸಗಿ ಸಹಭಾಗಿತ್ವ ಹೊಂದಿರುವುದು ಭಾರತದ ಈ ಒಂದೇ ಒಂದು ರೈಲ್ವೆ ನಿಲ್ದಾಣ ಮಾತ್ರ. ಉಳಿದ ಎಲ್ಲಾ ರೈಲು ನಿಲ್ದಾಣಗಳು ಭಾರತೀಯ ರೈಲ್ವೆ ಇಲಾಖೆಯಿಂದಲೇ ನಿರ್ಹವಣೆಯಾಗುತ್ತವೆ. ಹಾಗಾದ್ರೆ ಯಾವುದು ಆ ರೈಲ್ವೆ ನಿಲ್ದಾಣ. ಅದರ ವಿಶೇಷತೆ ಏನು ಎಂಬ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ.
ಭಾರತದ ಏಕೈಕ ಖಾಸಗಿ ರೈಲ್ವೆ ನಿಲ್ದಾಣ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿದೆ.ಇದರ ಹೆಸರು ರಾಣಿ ಕಮಲಾಪತಿ ಎಂದು. ಈ ರೈಲ್ವೆ ನಿಲ್ದಾಣವನ್ನು ಮೊದಲು ಹಬಿಬಗಂಜ್ ರೈಲ್ವೆ ನಿಲ್ದಾಣ ಎಂಬ ಹೆಸರನಿಂದ ಕರೆಯಲಾಗುತ್ತಿತ್ತು. ಕೊನೆಗೆ ಈ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಯ್ತು. ಜೂನ್ 2017ರಲ್ಲಿ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಯ್ತು. 2021ರಲ್ಲಿ ಹಬಿಬಗಂಜ್ ರೈಲ್ವೆ ನಿಲ್ದಾಣದ ಹೆಸರನ್ನು ರಾಣಿ ಕಮಲಾಪತಿ ರೈಲ್ವೆ ನಿಲ್ದಾಣವೆಂದು ಬದಲಾಯಿಸಲಾಯ್ತು.
ಇದನ್ನೂ ಓದಿ:ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್.. ಕಾಶ್ಮೀರಕ್ಕೆ ನೇರ ರೈಲು ಮಾರ್ಗ ಉದ್ಘಾಟನೆ ಯಾವಾಗ; ಏನಿದರ ವಿಶೇಷತೆಗಳು?
ರಾಣಿ ಕಮಲಾಪತಿ ರೈಲ್ವೆ ನಿಲ್ದಾಣ ಯಾವುದೇ ಐಷಾರಾಮಿ ಹೋಟೆಲ್ ಹಾಗೂ ಮಹಲ್ಗೆ ಕಡಿಮೆಯಿಲ್ಲ. ಈ ರೈಲ್ವೆ ನಿಲ್ದಾಣದಲ್ಲಿ ಶಾಪಿಂಗ್ ಸ್ಟೋರ್, ರೆಸ್ಟೋರೆಂಟ್ ಹಾಗೂ ವಿಶಾಲ ಪಾರ್ಕಿಂಗ್ನಂತಹ ವ್ಯವಸ್ಥೆಗಳಿವೆ. ಈ ಒಂದು ರೈಲ್ವೆ ನಿಲ್ದಾಣವನ್ನು ಬನ್ಸಲ್ ಗ್ರೂಪ್ನವರು ಅಭಿವೃದ್ಧಿಪಡಿಸಿದ್ದಾರೆ. 8 ವರ್ಷಗಳ ಕಾಲ ಈ ರೈಲ್ವೆ ನಿಲ್ದಾಣದ ನಿರ್ಹವಹಣೆಯ ಜವಾಬ್ದಾರಿಯನ್ನು ಬನ್ಸಲ್ ಗ್ರೂಪ್ನವರಿಗೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ