Advertisment

ಕಂಬಳಿ, ಬೆಡ್ ಶೀಟ್, ಜಮ್ಕಾನ.. ಜೈಲಿನಲ್ಲಿ ದರ್ಶನ್‌ಗೆ ನಿಜಕ್ಕೂ ನರಕ; ಬಿಡುಗಡೆಯಾದ ಸಹಕೈದಿ ಹೇಳಿದ್ದೇನು?

author-image
admin
Updated On
ಕಂಬಳಿ, ಬೆಡ್ ಶೀಟ್, ಜಮ್ಕಾನ.. ಜೈಲಿನಲ್ಲಿ ದರ್ಶನ್‌ಗೆ ನಿಜಕ್ಕೂ ನರಕ; ಬಿಡುಗಡೆಯಾದ ಸಹಕೈದಿ ಹೇಳಿದ್ದೇನು?
Advertisment
  • ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರೌರವ ನರಕ
  • ಜೈಲಿನಲ್ಲಿರೋ ದರ್ಶನ್‌ಗೆ ನಿಜಕ್ಕೂ ಕಾಡುತ್ತಿದ್ಯಾ ಪಶ್ಚಾತ್ತಾಪ?
  • ಸಾಮಾನ್ಯ ಕೈದಿಯಂತೆ ಕಂಬಳಿ, ಬೆಡ್ ಶೀಟ್, ಜಮ್ಕಾನ ಅಷ್ಟೇ!

ಕಾರಾಗೃಹ.. ತಪ್ಪು ಮಾಡಿದವರಿಗೆ ನರಕ ತೋರಿಸೋ ಜಾಗ. ಕೈದಿಯಾಗಿ ಒಳಗೆ ಹೋದವರಿಗೆ ಮತ್ತೆ ಬರಬಾರದು ಅಂತ ಪಾಠ ಕಲಿಸೋ ಶಾಲೆ. ಹೊರಗಿನ ಪ್ರಪಂಚದ ಬೆಲೆಯನ್ನು ತಿಳಿಸೋ ಅತಿ ಕಠಿಣ ಸ್ಥಳ. ಸದ್ಯ ಈ ರೀತಿಯ ಕಠಿಣ ಸ್ಥಿತಿ ನಟ ದರ್ಶನ್‌ಗೂ ಬಂದಿದೆ. ಕೊಲೆ ಆರೋಪದಲ್ಲಿ ಜೈಲು ಸೇರಿರೋ ದಾಸನಿಗೆ ಕತ್ತಲ ಕೋಣೆಯ ದಿವ್ಯ ದರ್ಶನವಾಗಿದೆ. 21 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಸಹಕೈದಿ ದರ್ಶನ್‌ ದಿನಚರಿಯ ಬಗ್ಗೆ ಕಂಪ್ಲೀಟ್‌ ಮಾಹಿತಿ ನೀಡಿದ್ದಾರೆ.

Advertisment

publive-image

ಸ್ಯಾಂಡಲ್‌ವುಡ್‌ನಲ್ಲಿ ಬಾಕ್ಸ್ ಆಫೀಸ್‌ ಸುಲ್ತಾನನಾಗಿದ್ದ ದರ್ಶನ್ ಈಗ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪಂಜರದ ಗಿಳಿಯಾಗಿದ್ದಾರೆ. ಇದೀಗ ಕೊಲೆ ಆರೋಪಿ ದರ್ಶನ್‌ರ ಸದ್ಯದ ಸ್ಥಿತಿ ಹೇಗಿದೆ ಅಂತ ಬಿಡುಗಡೆಯಾದ ಕೈದಿಯೊಬ್ಬರು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್‌ಗೆ ಮನೆಯೂಟ ಕೊಡಿಸಲು ಪತ್ನಿ ವಿಜಯಲಕ್ಷ್ಮಿ ದಿಟ್ಟ ಹೋರಾಟ; ಡಿಸಿಎಂ ಭೇಟಿಯಾಗಿದ್ದೇಕೆ? 

ಜೈಲಿನಲ್ಲಿರೋ ದರ್ಶನ್‌ಗೆ ಕಾಡುತ್ತಿದೆ ಪಶ್ಚಾತ್ತಾಪ
‘VIP’ ಸೌಲಭ್ಯವಿಲ್ಲ.. ಸಾಮಾನ್ಯ ಕೈದಿಯಂತೆ ವಾಸ
ಕಾರಾಗೃಹ.. ಹೆಸರೇ ಹೇಳುವಂತೆ ಅಲ್ಲಿಗೆ ಹೋದವರು ನರಕ ದರ್ಶನ ಅನುಭವಿಸದೇ ಹೊರ ಬರಲ್ಲ. ಇದೀಗ ಜೈಲಿನಲ್ಲಿ ಇದೇ ಕಷ್ಟವನ್ನ ಉಂಡು ದಾಸ ಕಾಲ ಕಳೆಯುತ್ತಿದ್ದಾರೆ. ದರ್ಶನ್ ಪರಪ್ಪನ ಜೈಲಿನಲ್ಲಿ ಹೇಗಿದ್ದಾರೆ ಅಂತ 21 ವರ್ಷಗಳ ಕಾಲ ಜೈಲಿನ ಕಹಿಯನ್ನ ಉಂಡ ತುರುವನೂರು ಸಿದ್ಧಾರೂಢ ಎಂಬುವವರು ತೆರೆದಿಟ್ಟಿದ್ದಾರೆ. ಸೆಂಟ್ರಲ್ ಜೈಲಿನಲ್ಲಿ ದರ್ಶನ್‌ರ ಪಶ್ಚಾತ್ತಾಪ. ಸಾಮಾನ್ಯ ಕೈದಿಯಂತೆ ಕಂಬಳಿ, ಬೆಡ್ ಶೀಟ್, ಜಮ್ಕಾನದಲ್ಲೇ ನಿದ್ರೆ ಮಾಡ್ತಾರೆ ಅಂತ ಸಿದ್ಧಾರೂಢ ಹೇಳಿದ್ದಾರೆ.

Advertisment

ದರ್ಶನ್‌ಗೆ 10 ನಿಮಿಷ ಧ್ಯಾನ ಹೇಳಿಕ್ಕೊಟ್ಟಿದ್ದ ಸಿದ್ಧಾರೂಢ
‘ಧ್ಯಾನ, ವಾಕಿಂಗ್, ಟಿವಿ, ಪುಸ್ತಕಗಳೇ ದರ್ಶನ್ ದಿನಚರಿ’
ಅಂದ ಹಾಗೆ ಜೈಲಿನಲ್ಲಿ ದರ್ಶನ್‌ರನ್ನ ಸಿದ್ಧಾರೂಢ ಭೇಟಿ ಮಾಡಿದ್ದಾರೆ. ಅಲ್ಲದೇ ದಾಸನಿಗೆ 10 ನಿಮಿಷಗಳ ಕಾಲ ಧ್ಯಾನ ಮಾಡುವುದನ್ನೂ ಹೇಳಿಕೊಟ್ಟಿದ್ದಾರಂತೆ. ಜೈಲಿನಲ್ಲಿರೋ ದರ್ಶನ್‌ ಧ್ಯಾನ ಮಾಡುತ್ತಾ ಆಧ್ಯಾತ್ಮದ ಕಡೆ ವಾಲಿದ್ದಾರಂತೆ. ಅಲ್ಲದೇ ಪುಸ್ತಕ ಓದೋದು, ವಾಕಿಂಗ್‌, ಟಿವಿ ನೋಡೋದೆ ದಿನಚರಿಯಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌರವ ನರಕ ‘ದರ್ಶನ’
ಜೈಲೂಟವನ್ನೇ ತಿನ್ನುತ್ತಾ ಬೇಸತ್ತು ಹೋದ್ರಾ ‘ಕಾಟೇರ’?
ಚಿತ್ರದುರ್ಗ ಮೂಲದ ತುರುವನೂರು ಸಿದ್ಧಾರೂಢ ತಂದೆ ಮೇಲೆ ಕೈ ಮಾಡಿದ ಅಧಿಕಾರಿಯ ತಲೆಕಡಿದು 27ನೇ ವಯಸ್ಸಿನಲ್ಲೇ ಜೈಲು ಸೇರಿದ್ದ ವ್ಯಕ್ತಿ. ಆದ್ರೀಗ ಸನ್ನಢತೆ ಆಧಾರದಲ್ಲಿ 21 ವರ್ಷಗಳ ಕಾಲ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಹೊರ ಬಂದಿದ್ದಾರೆ. ಇವರು ಜೈಲಿನಲ್ಲಿದ್ದಾಗ ಅಲ್ಲಿ ಸಿಗುತ್ತಿದ್ದ ಊಟ, ಅಲ್ಲಿರೋ ಕಷ್ಟ.. ಈಗ ದರ್ಶನ್ ಅನುಭವಿಸ್ತಿರೋ ನರಕವನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಯಾವ ಬಾಸ್ ನಂಗೆ ಗೊತ್ತಿಲ್ಲ.. ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ಡಿ.ಕೆ ಶಿವಕುಮಾರ್ ಹೇಳಿದ್ದೇನು? 

Advertisment

ಕೊಲೆ ಕೇಸ್‌ನಲ್ಲಿ ಕಾರಾಗೃಹ ವಾಸ ಅನುಭವಿಸುತ್ತಿರೋ ಕಾಟೇರನಿಗೆ ನರಕ ದರ್ಶನವಾಗಿದೆ. ಜೊತೆಗೆ 1 ತಿಂಗಳಲ್ಲೇ ಜೈಲುವಾಸ ಸಾಕೆನಿಸಿದೆ. ಅದಹಾಗೆ ಮನೆಯೂಟಕ್ಕಾಗಿ ಹಾತೊರೆಯುತ್ತಿದ್ದಾರೆ. ಇದೆಲ್ಲದರ ಮಧ್ಯೆ ತುರುವನೂರು ಸಿದ್ಧಾರೂಢ ತಮ್ಮ ಮಾತಿನಲ್ಲೇ ಹೊರಗಿನ ಪ್ರಪಂಚಕ್ಕೆ ಜೈಲಿನ ದರ್ಶನ ಮಾಡಿಸಿದ್ದಾರೆ. ಯಾರೂ ತಪ್ಪು ಮಾಡಿ ಕಾರಾಗೃಹದ ಕದ ತಟ್ಟಬೇಡಿ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment