Advertisment

ಲಂಚಕ್ಕೆ ಬೇಡಿಕೆ ಇಟ್ಟು ತಗ್ಲಾಕೊಂಡ ಐಟಿ ಅಧಿಕಾರಿ; ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದ ಎಕ್ಸ್‌ಕ್ಲೂಸಿವ್‌ ವಿಡಿಯೋ ಇಲ್ಲಿದೆ ನೋಡಿ

author-image
admin
Updated On
ಲಂಚಕ್ಕೆ ಬೇಡಿಕೆ ಇಟ್ಟು ತಗ್ಲಾಕೊಂಡ ಐಟಿ ಅಧಿಕಾರಿ; ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದ ಎಕ್ಸ್‌ಕ್ಲೂಸಿವ್‌ ವಿಡಿಯೋ ಇಲ್ಲಿದೆ ನೋಡಿ
Advertisment
  • ಚಿನ್ನದ ವ್ಯಾಪಾರಿಯಿಂದ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಐಟಿ ಅಧಿಕಾರಿ
  • ಪ್ರೀ ಪ್ಲಾನ್ ಮಾಡಿ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ ಪೊಲೀಸರು
  • ದಿನಕ್ಕೊಂದು ಲೋಕೇಷನ್ ಕಳಿಸಿ ಹಣ ತಂದು ಕೊಡಲು ಹೇಳಿದ್ದರು

ಬೆಳಗಾವಿ: ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಅಂದ್ರೆ ಭ್ರಷ್ಟರನ್ನು ಬೇಟೆಯಾಡುವ ಧೀರರು, ಶೂರರು ಅನ್ನೋ ಹೆಸರಿದೆ. ದೇಶ ವ್ಯಾಪ್ತಿ ಅವರು ಭ್ರಷ್ಟರಿಗೆ ಸಿಂಹಸ್ವಪ್ನವಾದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಐಟಿ ಅಧಿಕಾರಿ ಬಂಗಾರ ಅಭರಣದ ಮಾಲೀಕನೊಬ್ಬನ ಕಡೆಯಿಂದ ಹಣಕ್ಕೆ ಬೇಡಿಕೆ ಇಟ್ಟು ಹಣವನ್ನ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್‌ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

Advertisment

ಈ ಅಧಿಕಾರಿಯ ಹೆಸರು ಅವಿನಾಶ ಟೊಪನೆ ಅಂತಾ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಐಟಿ ಅಧಿಕಾರಿ ಅಂತಾರೆ. ಈತ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪರಶುರಾಮ್ ಬಂಕಾಪುರ ಎನ್ನುವವರ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಅಲ್ಲಿ ಅವರನ್ನ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ನೀನು ಮನಿ ಲ್ಯಾಂಡ್ರಿಂಗ್ ಮಾಡ್ತಿಯಾ ನಿಂದು ಅಕ್ರಮ ವ್ಯವಹಾರ ಇದೆ ಅಂತ ಹೇಳಿ ಪರಶುರಾಮ್ ಹತ್ರ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ದಿನಕ್ಕೊಂದು ಲೋಕೇಷನ್ ಕಳಿಸಿ ಈ ಜಾಗಕ್ಕೆ ಹಣ ತಂದು ಕೊಡು ಎಂದು ಪೀಡಿಸುತ್ತಿದ್ದರಂತೆ.


">October 13, 2023

ಈ ವಿಷಯವನ್ನ ಕೂಡಲೇ ಪರಶುರಾಮ್ ಅವರು ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಬರಮನಿಯವರಿಗೆ ತಿಳಿಸಿದ್ದಾರೆ. ಅವರು ತಮ್ಮ ತಂಡವನ್ನು ಅಖಾಡಕ್ಕೆ ಇಳಿಸಿದ್ದು, ಪ್ರೀ ಪ್ಲಾನ್ ಮಾಡಿ ಐಟಿ ಅಧಿಕಾರಿಯನ್ನ ಹಣ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.

Advertisment

ಕಳೆದ ನಾಲ್ಕೈದು ದಿನಗಳ ಹಿಂದೆ ಅಂಕಲಿಯಲ್ಲಿರುವ ಪರಶುರಾಮ್ ಅವರ ಚಿನ್ನದ ಅಂಗಡಿಗೆ ಐಟಿ ಅಧಿಕಾರಿ ಅವಿನಾಶ ಟೊಪನೆ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹೋಗಿದ್ದರು. ಐಟಿ ಅಧಿಕಾರಿ ಟೋನಪೆ ಹಣಕ್ಕೆ ಬೇಡಿಕೆ ಇಟ್ಟಿದ್ದನ್ನು ಪರಶುರಾಮ್ ಪೊಲೀಸರಿಗೆ ತಿಳಿಸಿ ಕವರ್‌ನಲ್ಲಿ 40 ಸಾವಿರ ಹಣ ಇಟ್ಟಕೊಂಡು ಟೊಣಪೆ ಹೇಳಿದ ಜಾಗಕ್ಕೆ ಹೋಗಿ ನಿಂತಿದ್ದರು. ಮಫ್ತಿಯಲ್ಲಿದ್ದ ಪೊಲೀಸರು ಟೊಣಪೆ ಹಣ ಪಡೆಯುತ್ತಿದ್ದಂತೆ ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಐಟಿ ಅಧಿಕಾರಿ ಅವಿನಾಶ ಟೊನಪೆ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು ಎಪಿಎಂಸಿ ಠಾಣೆಗೆ ಕರೆತಂದು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment