/newsfirstlive-kannada/media/post_attachments/wp-content/uploads/2024/04/dk-shivakumar1.jpg)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಆಪ್ತನಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಡಿಕೆ ಬ್ರದರ್ಸ್ ಆಪ್ತ ಕೆಂಪರಾಜು ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ರೇಡ್ ಮಾಡಿದ್ದಾರೆ. ಕನಕಪುರ ರಸ್ತೆಯ ವಾಜರ ಹಳ್ಳಿಯಲ್ಲಿರುವ ಆಪ್ತ ಕೆಂಪರಾಜು ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.
ಇದನ್ನೂ ಓದಿ:ದರ್ಶನ್‌ಗೆ ಆಪ್ತ ನಿರ್ಮಾಪಕ.. ಸ್ನೇಹ ಜೀವಿಯಾಗಿದ್ದ ಸೌಂದರ್ಯ ಜಗದೀಶ್ ಬದುಕಲ್ಲಿ ಆಗಿದ್ದೇನು?
ಏಕಾಏಕಿ ಎರಡು ಇನ್ನೋವಾ ವಾಹನದಲ್ಲಿ ಬಂದ ಐಟಿ ಅಧಿಕಾರಿಗಳು ಆಪ್ತ ಕೆಂಪರಾಜು ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಕೆಂಪರಾಜು ಹಿಂದೆ ಯುವ ಕಾಂಗ್ರೆಸ್ ಚುನಾವಣೆಗೂ ಸ್ಪರ್ಧಿಸಿದ್ದರು. ಕನಕಪುರ ಮೂಲದ ಕೆಂಪರಾಜು ಗ್ರಾನೈಟ್, ಕ್ರಶರ್ ಸೇರದಂತೆ ಹಲವು ಬ್ಯುಸಿನೆಸ್ ಹೊಂದಿದ್ದರು. ಸದ್ಯ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರ ಆಪ್ತನ ನಿವಾಸದ ಮೇಲೆ ದಾಳಿ ಮಾಡಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ