/newsfirstlive-kannada/media/post_attachments/wp-content/uploads/2024/04/DKS-2.jpg)
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್​ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಕೆ.ಸುರೇಶ್​ಗೆ ಪ್ರತಿಷ್ಟೆಯ ಕಣವಾಗಿದೆ. ಕ್ಷೇತ್ರದಲ್ಲಿ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಡಿಕೆ ಸುರೇಶ್​ ಆಪ್ತರ ಮನೆ ಮೇಲೆ ನಡೆದ ಐಟಿ ದಾಳಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಕಾರ್ಪೊರೇಟರ್ ಗಂಗಾಧರ್ ಮನೆಯಲ್ಲಿ ಐಟಿ ದಾಳಿ ಅಂತ್ಯ
ಡಿ.ಕೆ. ಬ್ರದರ್ಸ್​ಗೆ ಆಪ್ತರಾಗಿರುವ ಕೋಣನಕುಂಟೆ ಬ್ಲಾಕ್​ನ ಮಾಜಿ ಕಾರ್ಪೊರೆಟರ್ ಗಂಗಾಧರ್ ಮನೆ ಮೇಲೆ ನಡೆದ ಐಟಿ ದಾಳಿ ಮುಕ್ತಾಯವಾಗಿದೆ. ಸತತ 12 ಗಂಟೆಗಳ ಕಾಲ ಗಂಗಾಧರ್ ಮನೆಯಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು, ಗಂಗಾಧರ್​ ಮನೆಯಲ್ಲಿ 87 ಲಕ್ಷ ಹಣ, ಚಿನ್ನಾಭರಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
/newsfirstlive-kannada/media/post_attachments/wp-content/uploads/2024/04/DKS-GANGADHAR-1.jpg)
ಬಿಜೆಪಿ ವಿರುದ್ಧ ಮಾಜಿ ಕಾರ್ಪೊರೇಟರ್​ ವಾಗ್ದಾಳಿ
ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಕಾರ್ಪೊರೇಟರ್​ ಗಂಗಾಧರ್​, ಮೋದಿಯವರು ಎಷ್ಟು ಕಿರುಕುಳ ನೀಡ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಐಟಿ ಅಧಿಕಾರಿಗಳು ಉತ್ತರ ಭಾರತದವರು, ಅವರ ಭಾಷೆ ಸರಿ ಇರಲಿಲ್ಲ. ಕ್ಯಾನ್ವಾಸ್​ ಮಾಡ್ಬೇಡ ಎಂದು ಐಟಿ ಅಧಿಕಾರಿಗಳು ಹೇಳಿದ್ರು ಎಂದು ಗಂಗಾಧರ್​ ಆರೋಪ ಮಾಡಿದ್ದಾರೆ.
ಮನೆಯಲ್ಲಿ ಐಟಿಗೆ ಸಿಕ್ಕ ಹಣದ ಬಗ್ಗೆಯೂ ಗಂಗಾಧರ್​ ಸ್ಪಷ್ಟನೆ ನೀಡಿದ್ದಾರೆ. ಮನೆಯಲ್ಲಿ ಬಿಲ್ಡಿಂಗ್ ಮಾರಿದ ಹಣ ಇತ್ತು. ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ನೋಟಿಸ್ ಕೊಟ್ಟಿದ್ದು, ನಮ್ಮ ಆಡಿಟರ್ ಜೊತೆ ಮಾತಾನಾಡ್ತೀನಿ. ನಮ್ಮ ನಾಯಕರ ಜೊತೆ ಮಾತಾಡ್ತೀನಿ ಎಂದು ಗಂಗಾಧರ್​ ಹೇಳಿದ್ದಾರೆ.
ಇದನ್ನೂ ಓದಿ: ಹಠಾತ್ ಹೃದಯಾಘಾತ, ಕುಸಿದುಬಿದ್ದು ಬಿಜೆಪಿ ಸಂಸದ ನಿಧನ; ಸಿಎಂ ಸಂತಾಪ
/newsfirstlive-kannada/media/post_attachments/wp-content/uploads/2024/04/DKS-GANGADHAR.jpg)
ಸತತ 12 ಗಂಟೆಗಳ ಶೋಧ ನಡೆಸಿದ ಅಧಿಕಾರಿಗಳು ಹಣ, ಕೆಲವೊಂದು ದಾಖಲೆಗಳೊಂದಿಗೆ ವಾಪಸ್​ ತೆರಳಿದ್ದಾರೆ. ಆದ್ರೆ ಈ ದಾಳಿ ರಾಜಕೀಯ ಪ್ರೇರಿತ ಅಂತ ಕಾಂಗ್ರೆಸ್​ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us