Advertisment

ನಾಲ್ವರೂ ಹೆಣ್ಮಕ್ಕಳೇ.. ಸರೋಜಾ ದೇವಿ ಹುಟ್ಟಿಗೆ ಕಾರಣವಾಯ್ತು ಅದೊಂದು ಪ್ರಸಾದ..!

author-image
Veena Gangani
Updated On
13ನೇ ವಯಸ್ಸಿನಲ್ಲಿ ಸಿನಿಮಾ ಆಫರ್​; 60 ವರ್ಷದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ.. ಸರೋಜಾದೇವಿ ಸಿನಿ ಬದುಕು..
Advertisment
  • ‘ನಾಲ್ಕೂ ಹೆಣ್ಣು ಮಕ್ಕಳೇ ಎಂದಾಗ ತಾತ ನನ್ನನ್ನು ಮಾರಿ ಎಂದಿದ್ದರು’
  • ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಬಿ. ಸರೋಜಾ ದೇವಿ ಇನ್ನಿಲ್ಲ
  • 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜಾ ದೇವಿ ಜನನ

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಬಿ. ಸರೋಜಾ ದೇವಿ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ನಟಿ ವಿಧಿವಶರಾಗಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಮೆರೆದಿದ್ದ ಸರೋಜಾದೇವಿ ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು.

Advertisment

ಇದನ್ನೂ ಓದಿ: ಸರೋಜಾ ದೇವಿ ಅಂತ್ಯಕ್ರಿಯೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಪುತ್ರ ಗೌತಮ್

publive-image

1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್‌ಸ್ಟಾರ್ ಆಗಿದ್ದವರು. 1962ರಲ್ಲಿ ಪ್ರಸಾರವಾದ ‘ಕಿತ್ತೂರ ರಾಣಿ ಚೆನ್ನಮ್ಮ’ ಸಿನಿಮಾದಲ್ಲಿ ಬಿ ಸರೋಜಾದೇವಿ ಅವರು ನಟಿಸಿದ್ದರು. ಇನ್ನೂ, ಆಗಿನ ಕಾಲದಲ್ಲಿ ಹೆಣ್ಣು ಜನಿಸಿತು ಎಂದರೆ ಮನೆಯವರು ಸಮಸ್ಯೆ ಎಂಬಂತೆ ನೋಡುತ್ತಿದ್ದರು. ಆದರೆ, ಸರೋಜಾ ದೇವಿ ಕುಟುಂಬ ಮಾತ್ರ ಆ ರೀತಿ ಅಂದುಕೊಳ್ಳಲಿಲ್ಲ. ತಂದೆ ಬೈರಪ್ಪ ಹಾಗೂ ತಾಯಿ ರುದ್ರಮ್ಮ ಪ್ರೀತಿಯಿಂದ ಮಗುವನ್ನು ಬೆಳೆಸಿದ್ದರು. ನಟಿ ಸರೋಜಾದೇವಿ ಹುಟ್ಟಿದ್ದು ಸತ್ಯನಾರಾಯಣ ಪೂಜೆ ಪ್ರಸಾದದಿಂದ ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದರು.

publive-image

ನನ್ನ ತಾಯಿಗೆ ಆಗಲೇ ಮೂರು ಹೆಣ್ಣು ಮಕ್ಕಳು ಇದ್ದರು. ನಾಲ್ಕನೇ ಬಾರಿ ನನ್ನ ತಾಯಿ ಪ್ರೆಗ್ನೆಂಟ್ ಆದರು. ಆಗ ತುಂಬಾ ಹೊಟ್ಟೆ ನೋವು ಆಗಿತ್ತು. ಮಗು ಉಳಿಯಲ್ಲ ಎಂಬ ಸ್ಥಿತಿ ತಲುಪಿತ್ತು. ಪಕ್ಕದ ಮನೆಯವರು ಸತ್ಯ ನಾರಾಯಣ ಪೂಜೆ ಮಾಡಿದ್ದರು. ಆಗ ಪೂಜೆಗೆ ಸಜ್ಜಿಗೆ ಮಾಡುತ್ತಿದ್ದರು. ಆ ಪ್ರಸಾದವನ್ನು ಅಮ್ಮನಿಗೆ ತಿನ್ನಿಸಿದರು. ಅದನ್ನು ತಿಂದ ಬಳಿಕ ನಾನು ಹುಟ್ಟಿದೆ ಎಂದು ಸರೋಜಾ ದೇವಿ ಅವರು ಹಳೆಯ ಘಟನೆ ವಿವರಿಸಿದ್ದರು.

Advertisment

publive-image

ಇನ್ನೂ ನಾಲ್ಕೂ ಹೆಣ್ಣು ಮಕ್ಕಳೇ ಎಂದಾಗ ನಮ್ಮ ತಾತ ನನ್ನನ್ನು ಯಾರಿಗಾದರೂ ಕೊಡು ಎಂದರು. ಆದರೆ ನನ್ನ ತಾಯಿ ಕೇಳಲಿಲ್ಲ. ಅವರೇ ಕಷ್ಟಪಟ್ಟು ನಮ್ಮನ್ನು ಸಾಕಿದರು. ದೈವ ಭಕ್ತಿ ಹಾಗೂ ವಿದ್ಯಾರ್ಜನೆಯನ್ನು ತಾಯಿ ನನಗೆ ನೀಡಿದರು ಎಂದು ಸರೋಜಾ ದೇವಿ ಹೇಳಿದ್ದರು. ಇದಾದ ಬಳಿಕ 17ನೇ ವಯಸ್ಸಿಗೆ ಅವರು ‘ಮಹಾಕವಿ ಕಾಳಿದಾಸ’ ಸಿನಿಮಾದಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿ ಬೆಳೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment