newsfirstkannada.com

ಜೈಸ್ವಾಲ್​​ ಲೈಫ್​ ಬದಲಾಯಿಸಿದ್ದು ಅದೊಂದು ಫೋನ್​ ಕಾಲ್! ಕರೆ ಮಾಡಿದ ವ್ಯಕ್ತಿ ಯಾರು? ಏನಂದ್ರು?

Share :

Published February 21, 2024 at 9:14am

  ಇದು ಯಂಗ್ ಸೆನ್ಷೆಷನ್​ ಯಶಸ್ವಿ ಜೈಸ್ವಾಲ್ ಸಕ್ಸಸ್​​ ಸ್ಟೋರಿ

  ಜೈಸ್ವಾಲ್​​ ಲೈಫ್ ಬದಲಾಗಲು ಆ ಒಂದು ಫೋನ್​ ಕರೆ ಕಾರಣ

  ಯುವ ಆಟಗಾರ ಜೈಸ್ವಾಲ್​ ದರ್ಬಾರ್​​ಗೆ ಫ್ಯಾನ್ಸ್​ಗೆ ಸಲ್ಯೂಟ್​

ಕ್ರಿಕೆಟರ್ಸ್​ ಲೈಫ್​ ಯಾವ ಕ್ಷಣದಲ್ಲಿ ಬೇಕಾದ್ರು ಬದಲಾಗಬಹುದು. ಅಂತೆಯೇ ಯಂಗ್ ಸೆನ್ಷೆಷನ್​ ಯಶಸ್ವಿ ಜೈಸ್ವಾಲ್​​ ಲೈಫ್​ ಕೂಡ ಬದಲಾಗಿದೆ. ಅದು ಜಸ್ಟ್​​​​​ ಒಂದೇ ಒಂದು ಫೋನ್​​ ಕಾಲ್​​​ನಿಂದ. ರೋಹಿತ್​​ ಶರ್ಮಾ ಮಾಡಿದ ಒಂದು ಫೋನ್ ಕಾಲ್​​ನಿಂದ ಜೈಸ್ವಾಲ್ ಜೀವನವನ್ನೆ ಬದಲಿಸ್ತು. ಆ ಸಖತ್ ಕಹಾನಿ ಬಗ್ಗೆ ತಿಳಿದುಕೊಳ್ಳಬೇಕಾ? ಈ ಸ್ಟೋರಿ ಓದಿ.

ಯಶಸ್ವಿ ಜೈಸ್ವಾಲ್. ಟೀಮ್ ಇಂಡಿಯಾದಲ್ಲಿ ಈ ಯುವ ಆಟಗಾರನ ದರ್ಬಾರ್ ಜೋರಾಗಿದೆ. ಆಡಿದ ಕೆಲವೇ ಟೆಸ್ಟ್​​​ ಪಂದ್ಯಗಳಲ್ಲಿ 861 ರನ್​​ ಗಳಿಸಿದ್ದಾರೆ. ಆ ಪೈಕಿ ಪ್ರಸಕ್ತ ಇಂಗ್ಲೆಂಡ್​ ಎದುರಿನ ಟೆಸ್ಟ್ ಸರಣಿಯಲ್ಲೆ 545 ರನ್ ಗಳಿಸಿ ಬೆರಗು ಮೂಡಿಸಿದ್ದಾರೆ. ಅವರ ಡಬಲ್​ ಸೆಂಚುರಿಗೆ ಕ್ರಿಕೆಟ್​ ಜಗತ್ತು ಸಲಾಂ ಹೊಡಿತಿದೆ. ಜೈಸ್ವಾಲ್​​ರ ಈ ಯಶಸ್ವಿ ಯಾತ್ರೆಗೆ ಕ್ಯಾಪ್ಟನ್ ರೋಹಿತ್​ ಶರ್ಮಾ ಕಾರಣ ಅಂದ್ರೆ ನೀವು ನಂಬ್ತೀರಾ ? ಅಚ್ಚರಿ ಅನ್ನಿಸಿದ್ರು ನಂಬಲೇಬೇಕು. ಹಿಟ್​ಮ್ಯಾನ್​ ಮಾಡಿದ ಒಂದೇ ಒಂದು ಫೋನ್ ಕಾಲ್ ಜೈಸ್ವಾಲ್ ಕ್ರಿಕೆಟ್ ಬದುಕನ್ನೆ ಬದಲಿಸಿ ಬಿಡ್ತು.

ರೋಹಿತ್​​ ಶರ್ಮಾ- ಯಶಸ್ವಿ ಜೈಸ್ವಾಲ್

5 ವರ್ಷಗಳ ಹಿಂದೆ ರೋಹಿತ್​​ ಶರ್ಮಾ ಐಪಿಎಲ್​ನಲ್ಲಿ ಮುಂಬೈ ಪರ ಆಡ್ತಿದ್ರು. ಇದ್ದಕ್ಕಿದ್ದಂತೆ ಸಹ ಆಟಗಾರನ ಫೋನ್​ ತೆಗೆದುಕೊಂಡ ರೋಹಿತ್​​​​​, ಯಶಸ್ವಿ ಜೈಸ್ವಾಲ್​ಗೆ ಕಾಲ್ ಮಾಡಿದ್ರು. ಆಗ ರೋಹಿತ್​​​​​​ ಹೇಳಿದ್ದು ಒಂದೇ ಮಾತು. ಅದೇನಂದ್ರೆ ನಾನೀಗ ಇರುವ ಜಾಗದಲ್ಲಿ ನೀನು ಇರಬೇಕು ಎಂದು ಹೇಳಿ ಕಾಲ್​ ಕಟ್​ ಮಾಡಿದ್ರಂತೆ. ಹಿಟ್​ಮ್ಯಾನ್ ಹೇಳಿದ ಈ ಮಾತನ್ನ ಜೈಸ್ವಾಲ್​ ಗಂಭೀರವಾಗಿ ತೆಗೆದುಕೊಂಡ್ರು. ಡೊಮೆಸ್ಟಿಕ್ ಹಾಗೂ ಐಪಿಎಲ್​ ಟೂರ್ನಿಗಳಲ್ಲಿ ರನ್ ಹೊಳೆಯನ್ನ ಹರಿಸಿದ್ರು. ಪರಿಣಾಮ ಟೀಮ್ ಇಂಡಿಯಾಗೆ ಎಂಟ್ರಿಕೊಟ್ರು. ಈಗ ಕ್ಯಾಪ್ಟನ್ ರೋಹಿತ್​ ಶರ್ಮಾ ಜೊತೆನೇ ಆರಂಭಿಕನಾಗಿ ಆಡ್ತಿದ್ದಾರೆ. ಇದಕ್ಕೆಲ್ಲಾ ಹಿಟ್​ಮ್ಯಾನ್​​​​ರ ಆ ಒಂದೇ ಒಂದು ಫೋನ್ ಕಾಲ್ ಕಾರಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಸ್ವಾಲ್​​ ಲೈಫ್​ ಬದಲಾಯಿಸಿದ್ದು ಅದೊಂದು ಫೋನ್​ ಕಾಲ್! ಕರೆ ಮಾಡಿದ ವ್ಯಕ್ತಿ ಯಾರು? ಏನಂದ್ರು?

https://newsfirstlive.com/wp-content/uploads/2024/02/Yashasvi-jaiswal.jpg

Load More